Published
12 months agoon
By
Akkare Newsಚಿತ್ರನಟ ಯಶ್ ಹುಟ್ಟುಹಬ್ಬಕ್ಕೆ ಶುಭಕೋರಲೆಂದು ಕಟೌಟ್ ನಿಲ್ಲಿಸಲೆಂದು ಬಂದು ಮೂವರು ಅಭಿಮಾನಿಗಳಿಗೆ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಸಾವಿಗೀಡಾದ ಘಟನೆಯೊಂದು ನಡೆದಿದೆ. ಈ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ್ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಮಧ್ಯರಾತ್ರಿ ನಡೆದಿದೆ.
ಹನಮಂತ ಹರಿಜನ (21) ಮುರಳಿ ನಡವಿನಮನಿ(20), ನವೀನ್ ಗಾಜಿ(19) ಮೃತರು. ಇನ್ನೂ ಉಳಿದ ಮೂವರಿಗೆ ಗಂಭೀರ ಗಾಯ, ಗಾಯಾಳುಗಳನ್ನ ಲಕ್ಷ್ಮೇಶ್ವರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.ನಿನ್ನೆ ಮಧ್ಯರಾತ್ರಿಯೇ ಬರ್ತ್‌ಡೇ ಪ್ಲ್ಯಾನ್ ಮಾಡಿ ಅಭಿಮಾನಿಗಳು ಯಶ್‌ಗಾಗಿ ಕಟೌಟ್ ನಿಲ್ಲಿಸುವಾಗ ವಿದ್ಯುತ್ ತಂತಿಗೆ ತಗುಲಿ ಯುವಕರಿಗೆ ವಿದ್ಯುತ್ ಹರಿದಿದೆ. ಪರಿಣಾಮ ಮೂವರು ಸ್ಥಳದಲ್ಲೇ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ. ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.