Published
12 months agoon
By
Akkare Newsಯಶ್ಗೆ ಭದ್ರತೆ ನೀಡುತ್ತಿದ್ದ ಪೊಲೀಸರ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿಯಾಗಿ ಯುವಕ ನಿಖಿಲ್ ಎಂಬಾತನ ತಲೆಗೆ ತೀವ್ರ ಪೆಟ್ಟಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ ನಿಖಿಲ್ ಮೃತಪಟ್ಟಿದ್ದಾರೆ. ಯಶ್ ಹುಟ್ಟಹಬ್ಬದ ದಿನವೇ ನಾಲ್ಕು ಅಭಿಮಾನಿಗಳ ಸಾವಾಗಿದೆ.
ಅಭಿಮಾನಿ ಬೈಕ್ಗೆ ನಟ ಯಶ್ ಬೆಂಗಾವಲು ವಾಹನ ಡಿಕ್ಕಿ; ಚಿಕಿತ್ಸೆ ಫಲಿಸದೆ ಯುವಕ ಸಾವು
ಗದಗ, ಜ.09: ರಾಕಿಂಗ್ ಸ್ಟಾರ್ ಯಶ್ ಅವರ 38ನೇ ಹುಟ್ಟಹಬ್ಬದ ಹಿನ್ನೆಲೆ ಬರ್ತ್‌ಡೇ ಶುಭಾಶಯ ಕೋರಿ ಬ್ಯಾನರ್ ಹಾಕುವಾಗ ಮೂವರು ಅಭಿಮಾನಿಗಳು ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದರು. ಹಾಗೂ ಮೂವರು ಅಭಿಮಾನಿಗಳು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಇನ್ನು ಆಸ್ಪತ್ರೆಗೆ ಭೇಟಿ ನೀಡಿ ಯಶ್ ವಾಪಸ್ ತೆರಳುತ್ತಿದ್ದಾಗ ಮತ್ತೊಂದು ಅವಘಡ ಸಂಭವಿಸಿತ್ತು. ಯಶ್ಗೆ ಭದ್ರತೆ ನೀಡುತ್ತಿದ್ದ ಪೊಲೀಸರ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿಯಾಗಿ ಯುವಕ ನಿಖಿಲ್ ಎಂಬಾತನ ತಲೆಗೆ ತೀವ್ರ ಪೆಟ್ಟಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ ನಿಖಿಲ್ ಮೃತಪಟ್ಟಿದ್ದಾರೆ. ಮೃತ ನಿಖಿಲ್ ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದ ನಿವಾಸಿಯಾಗಿದ್ದರು.
ತನ್ನ ನೆಚ್ಚಿನ ನಟ ಯಶ್ ಅವರನ್ನು ನೋಡಬೇಕು ಎಂದು ಹಿಂಬಾಲಿಸುತ್ತಿದ್ದ ನಿಖಿಲ್ ಸ್ಕೂಟಿ ಗದಗ ಮುಳುಗುಂದ ರಸ್ತೆಯಲ್ಲಿ ಯಶ್ ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ನಿಖಿಲ್ನನ್ನು ಪೊಲೀಸ್ ವಾಹನದಲ್ಲೇ ಕರೆದೊಯ್ದು ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ನಿಖಿಲ್ ಮೃತಪಟ್ಟಿದ್ದಾರೆ. ಹುಟ್ಟಹಬ್ಬದ ದಿನವೇ ಅಭಿಮಾನಿಗಳ ಸಾವು ಯಶ್ಗೆ ಅಘಾತ ತಂದಿದೆ.
‘ಯಶ್ ಬೆಂಗಾವಲು ವಾಹನಕ್ಕೆ ಬೈಕ್ ಡಿಕ್ಕಿ ಆಗಿಲ್ಲ’
ಇನ್ನು ಘಟನೆ ಸಂಬಂಧ ಗದಗ ಎಸ್ಪಿ ಬಿ.ಎಸ್.ನೇಮಗೌಡ ಮಾತನಾಡಿದ್ದು, ಬೈಕ್ಗೆ ಡಿಕ್ಕಿ ಹೊಡೆದ ಜೀಪ್ ಯಶ್ ಬಗಾವಲು ವಾಹನ ಅಲ್ಲ. ಅದು ಪೊಲೀಸ್ ಹೆಡ್ ಕ್ವಾಟರ್ಗೆ ಹೋಗುವ ಪೊಲೀಸ್ ಜೀಪ್. ನಟ ಯಶ್ ಅವರನ್ನು ಬೈಪಾಸ್ ಹೈವೇ ಯಿಂದಲೇ ಹುಬ್ಬಳ್ಳಿಗೆ ಕಳಿಸಲಾಗಿದೆ. ನಟ ಯಶ್ ಅವರ ಬೆಂಗಾವಲು ವಾಹನಕ್ಕೂ ಈ ಅಪಘಾತಕ್ಕೂ ಸಂಬಂಧವಿಲ್ಲ. ನಟ ಯಶ್ ಬೆಂಗಾವಲು ವಾಹನ ಡಿಕ್ಕಿಯಾಗಿಲ್ಲ ಎಂದು ತಿಳಿಸಿದ್ದಾರೆ.
ಗದಗ ಜಿಲ್ಲೆಯ ಸೂರಣಗಿ ಗ್ರಾಮದಲ್ಲಿ ರಾಕಿಂಗ್ ಸ್ಟಾರ್ ಯಶ್ 38ವರ್ಷದ ಬರ್ತ್ ಡೇ ಸಂಭ್ರಮ ಹಿನ್ನೆಲೆ ತಡರಾತ್ರಿ ಅಭಿಮಾನಿಗಳೆಲ್ಲ ಸೇರಿಕೊಂಡು ಯಶ್ ಅವರ ದೊಡ್ಡ ಕಟೌಟ್ ಕಟ್ಟಲು ಮುಂದಾಗಿದ್ರು. ನೀಲಗಿರಿ ತೋಪಿನಲ್ಲಿ ಕಟೌಟ್ ಕಟ್ಟಿ ಮೇಲೆತ್ತುವಾಗ ಇದ್ದಕ್ಕಿದ್ದಂತೆ ವಿದ್ಯುತ್ ತಂತಿ ತಗುಲಿ ಕರೆಂಟ್ ಶಾಕ್ ಹೊಡೆದು ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದರು. ಹಾಗೂ ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದವು. ಗಾಯಾಳುಗಳನ್ನು ಗದಗ ಲಕ್ಷ್ಮೇಶ್ವರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.
ಆಸ್ಪತ್ರೆಗೆ ಯಶ್ ಭೇಟಿ
ಇನ್ನು ಈ ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಗದಗಿನ ಸೂರಣಗಿ ಗ್ರಾಮಕ್ಕೆ ಯಶ್ ಭೇಟಿ ನೀಡಿದರು. ಗದಗಿನಲ್ಲಿ ಅಭಿಮಾನಿಗಳ ಸಾವಿನ ಸುದ್ದಿ ತಿಳಿದು ಶಾಕ್‌ಗೆ ಒಳಗಾಗಿದ್ದ ಯಶ್ ಥಾಯ್ಲೆಂಟ್‌ನಲ್ಲಿ ಟಾಕ್ಸಿಕ್ ಚಿತ್ರದ ಶೂಟಿಂಗ್ ಮೊಟಕು ಗೊಳಿಸಿ ಸಂಜೆ ಸೀದಾ ಗೋವಾದ ಫ್ಲೈಟ್ ಹತ್ತಿ ಗೋವಾದಿಂದ ಹುಬ್ಬಳ್ಳಿ ಏರ್‌ಪೋರ್ಟ್‌ಗೆ ಬಂದು ಅಲ್ಲಿಂದ ಕಾರ್‌ನ ಮೂಲಕ ಗದಗ ಜಿಲ್ಲೆಯ ಸೂರಣಗಿ ಗ್ರಾಮಕ್ಕೆ ಭೇಟಿ ಕೊಟ್ಟಿದ್ದರು. ಮೃತ ಮೂವರು ಅಭಿಮಾನಿಗಳ ಮನೆಗೆ ಭೇಟಿ ನೀಡಿ ದುಃಖದ ಕಡಲಲ್ಲಿ ಮುಳುಗಿದ್ದ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು. ಬಳಿಕ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರೋ ಗದಗಿನ ಜಿಮ್ಸ್ ಆಸ್ಪತ್ರೆಗೂ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ್ರು.
ಯಶ್ ಹಿಂಬಾಲಿಸುತ್ತಿದ್ದ ಯುವಕ ಅಪಘಾತಕ್ಕೆ ಬಲಿ
ಇನ್ನು ಆಸ್ಪತ್ರೆಗೆ ಭೇಟಿ ನೀಡಿ ಯಶ್ ವಾಪಸ್ ತೆರಳುತ್ತಿದ್ದಾಗ ಮತ್ತೊಂದು ಅವಘಡ ಸಂಭವಿಸಿತ್ತು. ಯಶ್ಗೆ ಭದ್ರತೆ ನೀಡುತ್ತಿದ್ದ ಪೊಲೀಸರ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿಯಾಗಿತ್ತು. ಯುವಕ ನಿಖಿಲ್ ಎಂಬಾತನ ತಲೆಗೆ ತೀವ್ರಪೆಟ್ಟಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಯುವಕ ಮೃತಪಟ್ಟಿದ್ದಾನೆ.