ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿನಂದನೆ

ಜ :20, 21, ರಾಷ್ಟ್ರಮಟ್ಟದ ಹೊನಲು ಬೆಳಕಿನ ಓವರ ಆರ್ಮ್ ಆವ್ವಾನಿತ ತಂಡಗಳ ಕ್ರಿಕೆಟ್ ಪಂದ್ಯಾಟ ‘ಸಿಝ್ಲರ್ ಟ್ರೋಫಿ 2024’

Published

on

ಪುತ್ತೂರು : ಯುವಸಮೂಹಕ್ಕೆ ಕ್ರಿಕೆಟ್ ಅಂದರೆ ಏನೋ ಹುಚ್ಚು ಪ್ರೀತಿ.., ಒಂದು ಹೊತ್ತು ಊಟ ಮಾಡುವುದನ್ನು ಆದರೂ ಬಿಡಬಹುದು ಆದ್ರೇ ಕ್ರಿಕೆಟ್ ಅನ್ನು ಯುವಕರು ಬಿಡಲು ಸಿದ್ಧರಿರುವುದಿಲ್ಲ., ಪುತ್ತೂರಿಗರಿಗೆ ಕ್ರಿಕೆಟ್ ರಸದೌತಣ ಬಡಿಸಲು ಸಿದ್ಧವಾಗಿದೆ.. ‘ಸಿಝ್ಲರ್ ಟ್ರೋಫಿ-2024’ಪುತ್ತೂರಿನ ಸಿಝ್ಲರ್ ಸಾಫ್ಟ್ ಡ್ರಿಂಕ್ಸ್ ಮಾಲಕ ಪ್ರಸನ್ನ ಕುಮಾರ್ ಶೆಟ್ಟಿ ರವರ ನೇತೃತ್ವದಲ್ಲಿ ಎರಡು ಸಂಘಟಕರು ಅವಕಾಶವನ್ನು ಮಾಡಿಕೊಟ್ಟಿದ್ದಾರೆ.

ಸಾಮೆತ್ತಡ್ಕ ಯುವಕ ಮಂಡಲ ಹಾಗೂ ಸಿಝ್ಲರ್ ಸಾಫ್ಟ್ ಡ್ರಿಂಕ್ಸ್ ಸಾಮೆತ್ತಡ್ಕ ಇವರ ಜಂಟಿ ಆಶ್ರಯದಲ್ಲಿ ದಿ.ಶ್ರೀನಾಥ್ ಆಚಾರ್ಯ ಸ್ಮರಣಾರ್ಥ ಹೊನಲು-ಬೆಳಕಿನ ರಾಷ್ಟ್ರಮಟ್ಟದ ಆಹ್ವಾನಿತ ತಂಡಗಳ ನಿಗದಿತ ಓವರ್‌ಗಳ ಓವ‌ರ್ ಆರ್ಮ್ ಕ್ರಿಕೆಟ್‌ ಪಂದ್ಯಾಟ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಕಾಲೇಜ್ ಕ್ಯಾಂಪಸ್‌ನಲ್ಲಿನ ಕ್ರೀಡಾಂಗಣದಲ್ಲಿ ಜ.20 ಹಾಗೂ 21 ರಂದು ಎರಡು ದಿನಗಳ ಕ್ರಿಕೆಟ್ ಹವಾ ‘ಸಿಝ್ಲರ್ ಟ್ರೋಫಿ-2024’ ಜರುಗಲಿದೆ.




ಬಲಿಷ್ಠ ಆಟಗಾರರ ದಂಡು ಸಂಘಟಕರು ಆಯೋಜಿಸಿದ ಐದನೇ ಆವೃತ್ತಿಯಲ್ಲಿ ಫ್ರೆಂಡ್ಸ್ ಬೆಂಗಳೂರು ಚಾಂಪಿಯನ್ ಹಾಗೂ ಎಎಫ್‌ಸಿ ಪುತ್ತೂರು ರನ್ನರ್ಸ್ ಪ್ರಶಸ್ತಿಯನ್ನು ಬಾಚಿಕೊಂಡಿತ್ತು.ಈ ಬಾರಿ ಮುಂಬೈ, ಮಧ್ಯಪ್ರದೇಶ, ಚೆನ್ನೈ, ಕುಂದಾಪುರ, ಬೆಂಗಳೂರು, ಪುತ್ತೂರು ಹೀಗೆ ವಿವಿಧೆಡೆಯ ಎಂಟು ಬಲಿಷ್ಟ ತಂಡಗಳು ಆರನೇ ಬಾರಿಯ ಸಿಝ್ಲರ್ ಟ್ರೋಫಿಯಲ್ಲಿ ಕಣಕ್ಕಿಳಿಯುತ್ತಿದ್ದು, ಈ ಬಾರಿ ಯಾವ ರಾಜ್ಯಕ್ಕೆ, ಯಾವ ತಂಡಕ್ಕೆ ಅದೃಷ್ಟ ಒಲಿಯುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

‘ಬಿಲ್ಲಿ ಬೌಡೆನ್’ ಎಂದೇ ಖ್ಯಾತರಾಗಿರುವ ಉದ್ದುದ್ದ ಕೇಶರಾಶಿ ಹಾಗೂ ಗಡ್ಡ ಹೊಂದಿರುವ ಅಂಪಾಯರ್ ಮದನ್ ಮಡಿಕೇರಿ ರವರಿಗೆ ಪುತ್ತೂರಿನಲ್ಲಿ ಪ್ರಶಂಸೆಯ ಸುರಿಮಳೆ ಅಂದು ವ್ಯಕ್ತವಾಗಿತ್ತು. ಬೌಂಡರಿ, ಸಿಕ್ಸರ್, ಲೆಗ್ ಬೈ, ಅಗಲ ಎಸೆತ, ನೋಬಾಲ್, ಫ್ರೀಹಿಟ್‌ಗೆ ವಿಶೇಷ ನೃತ್ಯ ಭಂಗಿಯ ಮೂಲಕ ಗಮನಸೆಳೆದ ಮದನ್ ಮಡಿಕೇರಿ ರವರು ಗಣ್ಯರ ಹಾಗೂ ಪ್ರೇಕ್ಷಕರ ಸಮ್ಮುಖದಲ್ಲಿ ಕೋರಿಕೆಯ ಮೇರೆಗೆ ವೀಕ್ಷಕ ವಿವರಣೆಗಾರ ವಿನಯ್ ಉದ್ಯಾವರ ರವರ ಕಂಠಸಿರಿಯಲ್ಲಿ ಬೌಂಡರಿ, ಸಿಕ್ಸರ್, ಲೆಗ್ ಬೈ, ಅಗಲ ಎಸೆತ, ನೋಬಾಲ್‌, ಫ್ರೀಹಿಟ್‌ಗೆ ತನ್ನದೇ ಸ್ಟೈಲ್ ಡ್ಯಾನ್ಸ್ ಶೋ ಮುಖೇನ ಪ್ರಸ್ತುತಪಡಿಸಿ ಎಲ್ಲರಿಗೂ ರಸದೌತಣವನ್ನು ಉಣಬಡಿಸಿದ್ದರು. ಮಾತ್ರವಲ್ಲ ಇದೇ ರಸದೌತಣವನ್ನು ಮತ್ತೊಮ್ಮೆ ಪ್ರೇಕ್ಷಕರಿಗೆ ಉಣಬಡಿಸಲು ಅಂಪೈರ್ ಮದನ್ ಮಡಿಕೇರಿ ಈ ಬಾರಿಯೂ ಬರುತ್ತಿದ್ದಾರೆ.

ಬಲಿಷ್ಟ ಆಟಗಾರರಾದ ಸಾಗರ್ ಭಂಡಾರಿ, ರಾಜ ಸಾಲಿಗ್ರಾಮ, ಲೋಕಿ ಪುತ್ತೂರು, ರಿಯಲ್ ಫೈಟರ್ ಹರಿ, ಮೈಟಿ ಸಲೀಂ, ಸಚಿನ್ ಮಹಾದೇವ, ಅಕ್ಷಯ್, ಧೀರಜ್‌ ಅಲೆವೂರು ಹೀಗೆ ಹಲವಾರು ಬಲಿಷ್ಟ ಆಟಗಾರರು., ಅವರಲ್ಲದೆ ಉದಯೋನ್ಮುಖ ಆಟಗಾರರು ಕಣಕ್ಕಿಳಿಯಲಿದ್ದಾರೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement