ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿನಂದನೆ

1000 ಸೈಟ್ ಗೆ ಜಾಗ ಗುರುತಿಸಿ: ಕಂದಾಯ ಇಲಾಖೆಗೆ ಶಾಸಕರ ಸೂಚನೆ

Published

on

ಪುತ್ತೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1000 ಮನೆ ಸೈಟ್ ಗೆ ಜಾಗ ಗುರುತಿಸುವಂತೆ ಕಂದಾಯ ಇಲಾಖೆಗೆ ಶಾಸಕರಾದ ಅಶೋಜ್ ರೈ ಸೂಚನೆ ನೀಡಿದರು.

ಕ್ಷೇತ್ರದಲ್ಲಿ‌ಮನೆ ಕಟ್ಟಲು ಜಾಗವಿಲ್ಲದೆ ನೂರಾರು ಕುಟುಂಬಗಳು ಬಾಡಿಗೆ ಮನೆಯಲ್ಲಿ ಇದ್ದಾರೆ. ಹಲವು ವರ್ಷದಿಂದ ಪ್ರಯತ್ನ ಮಾಡುತ್ತಿದ್ದರೂ ಒಂದು ಸೆಂಟ್ಸ್ ಜಾಗ ಖರೀದಿ‌ಮಾಡಲು ಅವರಿಂದ ಸಾಧ್ಯವಾಗಿಲ್ಲ.





ಎಲ್ಲಾ ಗ್ರಾಮಗಳಲ್ಲೂ ಸೈಟ್ ಗೆ ಜಾಗ ಗುರುತಿಸಿ ಅದನ್ನು ತಲಾ ಮೂರು‌ಸೆಂಟ್ಸ್ ಜಾಗದಂತೆ ಮನೆಯೇ ಇಲ್ಲದ, ಜಾಗವೇ ಇಲ್ಲದ ಕಡುಬಡವರಿಗೆ ಹಂಚಿಕೆ ಮಾಡಬೇಕು.‌ ವರ್ಷಕ್ಕೆ ಒಂದು ಸಾವಿರ ಸೈಟ್ ಗಳನ್ನು ಬಡವರಿಗೆ ಹಂಚುವ ಕೆಲಸ ಮಾಡಬೇಕು . ಎಲ್ಲೆಲ್ಲಿ ಸರಕಾರಿ ಜಾಗ ಇದೆಯೋ ಅದೆಲ್ಲವನ್ನೂ ಸರ್ವೆ ನಡೆಸಿ ಸೈಟ್ ಮಾಡಿ‌ಅದನ್ನು ಹಂತ ಹಂತವಾಗಿ ಹಂಚಬೇಕು‌ಎಂದು‌ ಶಾಸಕರು ಸೂಚಿಸಿದರು.

Continue Reading
Click to comment

Leave a Reply

Your email address will not be published. Required fields are marked *

Advertisement