ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿನಂದನೆ

ಬೆಳ್ಳಾರೆ ಪೊಲೀಸರ ಕ್ರಿಪ್ತ ಕಾರ್ಯಾಚರಣೆ. ಚಿನ್ನದ ಸರ ಕಳವು ಗೈದ ಇಬ್ಬರು ಆರೋಪಿಗಳು ವಶಕ್ಕೆ…..!!!

Published

on

ಬೆಳ್ಳಾರೆ : ಮಹಿಳೆಯೊಬ್ಬರ ಚಿನ್ನದ ಸರವನ್ನು ಅಪರಿಚಿತರು ಸುಲಿಗೆ ಮಾಡಿದ ಪ್ರಕರಣವನ್ನು ಬೆಳ್ಳಾರೆ ಪೊಲೀಸರು ಭೇಧಿಸಿದ್ದು, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.ಪುತ್ತೂರು ನರಿಮೊಗರು ನಿವಾಸಿ ನೌಶಾದ್ ಬಿ.ಎ., ಕೇರಳ ನಿವಾಸಿ ಚಂದ್ರಮೋಹನ್ ಬಂಧಿತರು.

ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪಾಂಬಾರ್ ಎಂಬಲ್ಲಿ ಜ.11 ರಂದು ಮಧ್ಯಾಹ್ನ ಮಹಿಳೆಯೊಬ್ಬರ ಚಿನ್ನದ ಸರವನ್ನು ಅಪರಿಚಿತರು ಸುಲಿಗೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ. ಕ್ರ 08/2024 ಕಲಂ 392 ಜೊತೆಗೆ 34 ಐ ಪಿ ಸಿ ರಂತೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಶೀಘ್ರ ಪತ್ತೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಸದ್ರಿ ತನಿಖಾ ತಂಡವು ಪ್ರಕರಣದ ತನಿಖೆ ನಡೆಸಿ, ನೌಶಾದ್ ಬಿ ಎ (36) ಮತ್ತು ಸುಲಿಗೆಗೆ ಸಹಕರಿಸಿದ ಕಾಸರಗೋಡು ಉದ್ಯಾವರ ನಿವಾಸಿ ಚಂದ್ರಮೋಹನ್ (42) ಎಂಬವರುಗಳನ್ನು ವಶಕ್ಕೆ ಪಡೆದಿದ್ದಾರೆ.





ಸದ್ರಿ ಆರೋಪಿಗಳಿಂದ ರೂ 80,000/- ಮೌಲ್ಯದ ಚಿನ್ನದ ಸರ ಮತ್ತು ಕೃತ್ಯಕ್ಕೆ ಬಳಸಿದ ರೂ 1,00,000/- ಮೌಲ್ಯದ ಸ್ಕೂಟರನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.ಸದ್ರಿ ಪ್ರಕರಣದ ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸಿ. ಬಿ ರಿಷ್ಯಂತ್ ಐ ಪಿ ಎಸ್, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಧರ್ಮಪ್ಪ ಕೆ ಎಸ್ ಪಿ ಎಸ್ ಮತ್ತು ರಾಜೇಂದ್ರ ಕೆಎಸ್‌ಪಿಎಸ್ ರವರುಗಳ ಮುಂದಾಳತ್ವದಲ್ಲಿ, ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಅರುಣ್ ನಾಗೇಗೌಡ ರವರ ನೇತೃತ್ವದಲ್ಲಿ, ಸುಳ್ಯ ವೃತ್ತ ನಿರೀಕ್ಷಕರಾದ ಮೋಹನ್ ಕೊಠಾರಿ , ಬೆಳ್ಳಾರೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರುಗಳಾದ ಸಂತೋಷ್ ಬಿ.ಪಿ ಮತ್ತು ಅಶೋಕ್ ಸಿಎಂ ರವರ ಎರಡು ವಿಶೇಷ ತನಿಖಾ ತಂಡಗಳು ಕಾರ್ಯಾಚರಿಸಿರುತ್ತದೆ.

ಸದ್ರಿ ತನಿಖಾ ತಂಡದಲ್ಲಿ ಎ ಎಸ್ ಐ ದಾಮೋದರ ನಾಯ್ಕ, ಸಿಬ್ಬಂದಿಗಳಾದ ನವೀನ್ ಕಟ್ಟತ್ತಾರು , ಸತೀಶ್ ಬಿ, ಕೃಷ್ಣಪ್ಪ, ಚಂದ್ರಶೇಖರಗೌಡ, ಚಂದ್ರಶೇಖರ ಗೆಜ್ಜಳ್ಳಿ, ಮಂಜುನಾಥ, ಚೇತನ, ಪ್ರವೀಣ ಬಾರ್ಕಿ, ಸಂತೋಷ ಕೆ ಜಿ, ಜಿಲ್ಲಾ ತಾಂತ್ರಿಕ ವಿಭಾಗದ ದಿವಾಕರ, ಸಂಪತ್ ರವರುಗಳು ಕಾರ್ಯನಿರ್ವಹಿಸಿರುತ್ತಾರೆ. ಸದ್ರಿ ತನಿಖಾ ತಂಡದ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿದ್ದು, ಸಾರ್ವಜನಿಕ ವಲಯದಲ್ಲಿಯೂ ಪ್ರಶಂಸೆಯನ್ನು ವ್ಯಕ್ತವಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement