Connect with us

ಅಭಿಪ್ರಾಯ

ಮಾಜಿ ಶಾಸಕರಿಗೆ ತಿರುಗೇಟು ಕೊಟ್ಟ ಹಿರಿಯ ಆರ್ ಎಸ್ ಎಸ್ ಕಾರ್ಯಕರ್ತ ಭಾಸ್ಕರ್ ಹಿಂದಾರ್. ಪುತ್ತಿಲ ಪರಿವಾರದ ಕಾರ್ಯಕರ್ತರನ್ನು ಅಣಬೆ ಹೋಲಿಸಿದ ಮಾಜಿ ಶಾಸಕ ಕ್ಷಮೆ ಕೇಳಲಿ.

Published

on

ಪ್ರಭಾವಿ ಹಿಂದೂ ಮುಖಂಡ ಅರುಣ್ ಪುತ್ತಿಲರನ್ನು ಮತ್ತೆ ಬಿಜೆಪಿ ಸೇರ್ಪಡೆಗೊಳಿಸುವ ಕುರಿತು ಮಾತುಕತೆಗಳು ಬಿರುಸು ಪಡೆಯುತ್ತಿದ್ದ ಸಂದರ್ಭದಲ್ಲಿ ಇಂದು ಮಾದ್ಯಮಗಳ ಜತೆ ಮಾತನಾಡಿದ ಮಾಜಿ ಶಾಸಕ ಸಂಜೀವ ಮಠಂದೂರುರವರು ಅರುಣ್ ಪುತ್ತಿಲರು ಬಿಜೆಪಿ ಸೇರ್ಪಡೆಗೆ ಮೂರು ಷರತ್ತುಗಳನ್ನು ವಿಧಿಸಿದ್ದರು.

3 ಷರತ್ತು
ಅರುಣ್ ಕುಮಾರ್ ಪುತ್ತಿಲ ಪಕ್ಷಕ್ಕೆ ಬರುವುದಕ್ಕೆ ನಮ್ಮದು ಸ್ವಾಗತವಿದೆ. ಆದರೆ ಯಾವುದೇ ಷರತ್ತು ಇಲ್ಲದೆ, ನಿಶರತ್ತಿನಿಂದ ಬರಬೇಕು. ಮತ್ತೆ ಅವರು ಏನು ಸಂಘಟನೆಯನ್ನು ಕಟ್ಟಿಕೊಂಡಿದ್ದಾರಾ. ಆ ಸಂಘಟನೆಯನ್ನು ವಿಸರ್ಜನೆ ಮಾಡಿ ಆ ಬಳಿಕ ಪಕ್ಷಕ್ಕೆ ಸೇರ್ಪಡೆಯಾಗಬೇಕು. ಮತ್ತು ಈ ಹಿಂದೆ ಭಾಷಣದಲ್ಲಿ ಬೇರೆ ಬೇರೆ ಸಂದರ್ಭದಲ್ಲಿ ಹಿರಿಯರ ಬಗ್ಗೆ ಏನೇನು ಉಲ್ಲೇಖ ಮಾಡಿದ್ದಾರೆ, ಅವರಿಗೆ ಮನಸ್ಸಿಗೆ ನೋವು ಉಂಟು ಮಾಡುವಂತ ಕೆಲಸವನ್ನು ಮಾಡಿದ್ದಾಕ್ಕೆ ಅವರು ವಿಷಾದ ವ್ಯಕ್ತ ಪಡಿಸಬೇಕು. ಪಕ್ಷಕ್ಕೆ ಬಂದ ಮೇಲೆ ಜವಾಬ್ದಾರಿ ಕೊಡುವ ವಿಚಾರವನ್ನು ಪಕ್ಷ ಬಳಿಕ ತೀರ್ಮಾನ ಮಾಡುತ್ತದೆ ಎಂದು ಪ್ರತಿಕ್ರಿಯಿಸಿದ್ದರು.

ನಿಮ್ಮಿಂದ ಮೊದಲು ನಾವು ಪಾರ್ಟಿಯಲ್ಲಿ ಇದ್ದವರು :
ಇದಕ್ಕೆ ತಿರುಗೇಟು ನೀಡಿರುವ ಭಾಸ್ಕರ ಆಚಾರ್ ಹಿಂದಾರ್ ರವರು ಕಳೆದ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಸಂಜೀವ ಮಠಂದೂರು ನೀಡಿದ ಅಣಬೆ ಹೇಳಿಕೆಯನ್ನು ಉಲ್ಲೇಖಿಸಿ ಮೊದಲು ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಲಿ ಎಂದಿದ್ದಾರೆ. ಮಾತನಾಡುವಾಗ ನಾಲಿಗೆ ಹಿಡಿತದಲ್ಲಿ ಇರಬೇಕು ಅಧಿಕಾರದ ಮದ ದುಡ್ಡಿನ ಅಹಂಕಾರ ನಿಲ್ಲಿಸಿ, ಬಿ ಜೆ ಪಿ ಬಗ್ಗೆ ನಿಮ್ಮ ಪಾಠ ಅಗತ್ಯ ಇಲ್ಲ ನಿಮ್ಮಿಂದ ಮೊದಲು ನಾವು ಪಾರ್ಟಿಯಲ್ಲಿ ಇದ್ದವರು, ನಿಮ್ಮ ನಾಲಿಗೆಯಿಂದ ಪಕ್ಷ ಈ ರೀತಿ ಆದದ್ದು. ಇನ್ನು ಹೀಗೆ ಮಾತನಾಡಬೇಡಿ ಎಂದು ಬುದ್ದಿಮಾತು ಹೇಳಿದ್ದಾರೆ.





ದುರುದ್ದೇಶದ ಹೇಳಿಕೆ
ಪುತ್ತೂರಿನಲ್ಲಿ ಬಿಜೆಪಿಯ ಇಂದಿನ ಸ್ಥಿತಿಗೆ ಸಂಜೀವ ಮಠಂದೂರುರವರ ಸರ್ವಾಧಿಕಾರಿ ಧೋರಣೆ ಕಾರಣ ಎಂದು ಹಿಂದಾರು ವ್ಯಾಖ್ಯಾನಿಸಿದ್ದಾರೆ. ಕ್ಷೇತ್ರದಲ್ಲಿ ಮೂಡಿರುವ ಗೊಂದಲವನ್ನು ನಿವಾರಿಸಲು ಬಿಜೆಪಿಯ ರಾಜ್ಯದ ಉನ್ನತ ನಾಯಕತ್ವದೊಂದಿಗೆ ಮಾತುಕತೆ ನಡೆಸುತ್ತಿರುವಾಗ, ಪುತ್ತಿಲ ಬಂದರೆ ತನ್ನ ಸ್ಥಾನಮಾನಕ್ಕೆ ಕುತ್ತು ಬಂದೀತು. ಅದಕ್ಕಾಗಿ ಈ ಮಾತುಕತೆ ಫಲಪ್ರದವಾಗಬಾರದೆಂದು ಸಂಜೀವ ಮಠಂದೂರು ಇಂತಹಾ ಹೇಳಿಕೆ ನೀಡಿರುವುದಾಗಿದೆ ಎಂದು ಹಿಂದಾರ ತಿಳಿಸಿದ್ದಾರೆ

ಏನದು ಅಣಬೆ ಪ್ರಕರಣ ?

ಕಳೆದ ವಿಧಾನಸಭೆ ಚುನಾವಣೆಗೆ ಎರಡು ತಿಂಗಳ ಹಿಂದೆ ಬಿಜೆಪಿ ಚುನಾವಣಾ ಚಾಣಕ್ಷ್ಯ ಹಾಗು ಗೃಹ ಸಚಿವ ಅಮಿತ್ ಶಾ ಪುತ್ತೂರಿಗೆ ಆಗಮಿಸಿದ ಸಂದರ್ಭ ಅವರ ಆಗಮನಕ್ಕೆ ಸ್ವಾಗತ ಕೋರಿ ಪುತ್ತೂರು ನಗರದಾದ್ಯಂತ ಬಿಜೆಪಿ ಕಾರ್ಯಕರ್ತರು ಪೋಸ್ಟರ್ ಗಳನ್ನು ಅಳವಡಿಸಿದ್ದರು. ಇದರಲ್ಲಿ ಅರುಣ್ ಪುತ್ತಿಲರವರು ಅಳವಡಿಸಿದ ಬ್ಯಾನರ್ ಕೂಡ ಇತ್ತು 2023ರ ಫೆಬ್ರವರಿ 9 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಬ್ಯಾನ‌ರ್ ಅಳವಡಿಸಿರುವ ಕುರಿತು ಪತ್ರಕರ್ತರು ಗಮನಸೆಳೆದಾಗ ‘ಚುನಾವಣೆ ಸಂದರ್ಭ ಅಣಬೆಗಳು ಹುಟ್ಟಿಕೊಳ್ಳುತ್ತವೆ” ಎಂದು ಪ್ರತಿಕ್ರಿಯಿಸಿದರು. ಈ ಹೇಳಿಕೆ ಭಾರೀ ವಿವಾದ ಸೃಷ್ಟಿಸಿತ್ತು. ಅಲ್ಲದೇ, ಕೆಲವು ಕಾರ್ಯಕರ್ತರು ಅವರನ್ನು ಬೊಳ್ವಾರ್ ನಲ್ಲಿ ಈ ಹೇಳಿಕೆಗೆ ಸ್ಪಷ್ಟನೆ ನೀಡುವಂತೆ ಒತ್ತಾಯಿಸಿದ್ದರು. ಇದು ಸ್ಥಳದಲ್ಲಿ ಗೊಂದಲ ಮೂಡುವಂತೆ ಮಾಡಿತ್ತು.

Continue Reading
Click to comment

Leave a Reply

Your email address will not be published. Required fields are marked *

Advertisement