Connect with us

ಸ್ಥಳೀಯ

ನೀಟ್ : ರಾಜ್ಯಾದ್ಯಂತ ಶಾಲಾ, ಕಾಲೇಜುಗಳು, ವಿಶ್ವವಿದ್ಯಾಲಯಗಳು ಜುಲೈ 24ರಂದು ಶುಕ್ರವಾರ ಸಂಪೂರ್ಣ ಬಂದ್..!!!

Published

on

ನವದೆಹಲಿ: ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ವಿಘ್ನ ತಂದ ‘ನೀಟ್’ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಇದೀಗ ತೀವ್ರ ರಾಜಕೀಯ ಪ್ರಕ್ಷುಬ್ಧತೆಗೆ ಕಾರಣವಾಗಿದೆ. ನವದೆಹಲಿ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ನೀಟ್ ಅಕ್ರಮ ವಿರುದ್ಧ ಪ್ರತಿಭಟನೆಗಳು ಜೋರಾಗಿದ್ದು, ಕೇಂದ್ರದ ವೈಫಲ್ಯ, ಧೋರಣೆ ಖಂಡಿಸಿ ರಾಜ್ಯಾದ್ಯಂತ ಶಾಲಾ, ಕಾಲೇಜುಗಳು, ವಿಶ್ವವಿದ್ಯಾಲಯಗಳು ಜುಲೈ 24ರಂದು ಶುಕ್ರವಾರ ಸಂಪೂರ್ಣ ಬಂದ್ ಆಗಲಿವೆ. ಹೌದು, ವಿದ್ಯಾರ್ಥಿಗಳ ಭವಿಷ್ಯಕ್ಕೆ ಆತಂಕ ‘ನೀಟ್’ (NEET) ಅಕ್ರಮವು ಉಸ್ತುವಾರಿ ಸಂಸ್ಥೆಯಾದ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಮತ್ತು ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದಲೇ ಆಗಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದ್ದಾರೆ. ಸಿಜೆಪಿ ಪಕ್ಷ ಹಾಗೂ ಇತರರ ಕೂಡಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಅಕ್ರಮದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಕ್ಷಣವೇ ರಾಜೀನಾಮೆ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ. ಜುಲೈ 24ರಂದು ಎಲ್ಲ ವಿವಿ, ಶಾಲಾ, ಕಾಲೇಜ್‌ಗಳು ಬಂದ್ ನೀಟ್ ಪರೀಕ್ಷಾ ವೈಫಲ್ಯ ಖಂಡಿಸಿ ಜುಲೈ 24 ರಂದು ಶಾಲಾ-ಕಾಲೇಜುಗಳ ಬಂದ್‌ಗೆ ಪ್ರಮುಖ ವಿದ್ಯಾರ್ಥಿ ಹಾಗೂ ಯುವಜನ ಸಂಘಟನೆಗಳು ಕರೆ ನೀಡಿವೆ. ಎಸ್‌.ಎಫ್‌.ಐ (SFI), ಎನ್.ಎಸ್.ಯು.ಐ (NSUI), ಎ.ಐ.ಎಸ್.ಎ (AISA), ಡಿ.ವೈ.ಎಫ್.ಐ (DYFI) ಸೇರಿದಂತೆ ಪ್ರಮುಖ ವಿದ್ಯಾರ್ಥಿ ಒಕ್ಕೂಟಗಳು ಕರೆ ನೀಡಿವೆ. ದೇಶದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳು, ಪದವಿ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳನ್ನು ಬಂದ್ ಮಾಡುವಂತೆ ಮನವಿ ಮಾಡಿವೆ. ಈ ಮನವಿಗೆ ಸ್ಪಂದಿಸಿ ಆಂಧ್ರ ಪ್ರದೇಶ ಬೆಂಬಲಿಸಿದೆ. ನಾಳೆ ಶುಕ್ರವಾರ ರಾಜ್ಯಾದ್ಯಂತ ಎಲ್ಲಾ ಶಾಲಾ-ಕಾಲೇಜುಗಳು, ವಿಶ್ವವಿದ್ಯಾಲಯಗಳು, ಇನ್ನಿತರ ಶೈಕ್ಷಣಿಕ ಸಂಸ್ಥೆಗಳು ಒಂದು ದಿನದ ಮಟ್ಟಿಗೆ ಬಂದ್ ಆಗಲಿವೆ. ಯಾವುದೇ ಶೈಕ್ಷಣಿಕ ಕಾರ್ಯ ಚಟುವಟಿಕೆಗಳು ನಡೆಸದೇ ನೀಟ್ ಅಕ್ರಮ ವಿರುದ್ಧ ಪ್ರತಿಭಟನಾಕಾರರನ್ನು ಬೆಂಬಲಿಸಲಾಗುತ್ತಿದೆ.

 
 

Continue Reading
Click to comment

Leave a Reply

Your email address will not be published. Required fields are marked *

Advertisement