ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಕರ್ನಾಟಕ ಕಾನೂನು ಕಾರ್ಯಕ್ರಮಗಳು ಚರ್ಚೆಗಳು ಚಿಣ್ಣರ ಲೋಕ ಚುನಾವಣೆ ಜೀವನಶೈಲಿ ತಂತ್ರಜ್ಞಾನ ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ವಿಶೇಷ ವರದಿ ಶಾಲಾ ಚಟುವಟಿಕೆ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮ ಹೆಣ್ಣು ಗಂಡುವಿನ ನಡುವೆ ಲಿಂಗಾನುಪಾತ ಅಪಾಯಕಾರಿಯಾಗಿದೆ: ಶಾಸಕ ಅಶೋಕ್ ರೈPublished
10 months agoon
By
Akkare Newsಪುತ್ತೂರು: ದೇಶದಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳ ನಡುವಿನ ನಡುವೆ ಅನುಪಾತ ಹೆಚ್ಚಾಗಿದ್ದು ಇದು ಅಪಾಯಕಾರಿ ಬೇಳವಣಿಗೆಯಾಗಿದೆ ಎಂದು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ಪುತ್ತೂರಿನ ಸಂತ ವಿಕ್ಟರನ ಬಾಲಿಕಾ ಪ್ರೌಢ ಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ದಿ ಯೋಜನೆ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಚೇರಿಯಲ್ಲಿ ನಡೆದ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ವಿದ್ಯಾವಂತ ಹೆಣ್ಣು ಮಕ್ಕಳು ಅಧಿಕವಾದರೆ ಮಾತ್ರ ನಮ್ಮ ದೇಶ ಅಭಿವೃದ್ದಿಯತ್ತ ಸಾಗಲು ಸಾಧ್ಯ. ಕೇವಲ ತಂತ್ರಜ್ಞಾನ ಮಾತ್ರವಲ್ಲ ಮಹಿಳೆಯರೂ ಶಿಕ್ಷಣದಲ್ಲಿ ಸಾಧನೆ ಮಾಡಿದರೆ ಮಾತ್ರ ದೇಶ ಅಭಿವೃದ್ದಿ ಸಾಧ್ಯ ಎಂದು ಹೇಳಿದರು. ಕುಟುಂಬದ ಪ್ರತೀಯೊಂದು ಹೆಣ್ಣು ಮಗು ಕಲಿಯಬೇಕು . ಒಂದು ಹೆಣ್ಣು ಯಾವ ಸಾಧನೆಯನ್ನು ಬೇಕಾದರೂ ಮಾಡುತ್ತಾರೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ.
ಕಲಿಕೆಯಲ್ಲಿ ಹೆಣ್ಣು ಮಕ್ಕಳುಮುಂದೆ ಇದ್ದಾರೆ ಆಕೆಯನ್ನು ಕಲಿಸುವ ಮನೋಭಾವ ರೂಡಿಸಿಕೊಳ್ಳಬೇಕು ಎಂದು ಹೇಳಿದರು. ಸರಕಾರ ಮಹಿಳೆಯರ ಶ್ರೇಯೋಭಿವೃದ್ದಿಗಾಗಿ ಗ್ಯಾರಂಟಿ ಯೋಜನೆಯನ್ನು ಜಾರಿಗೆ ಮಾಡಿದೆ. ಕುಟುಂಬದ ಮಹಿಳೆ ಶಕ್ತಿಯುತಳಾದರೆ ಪ್ರತೀಯೊಂದು ಕುಟುಂಬವೂ ಶೈಕ್ಷಣಿಕವಾಗಿ ಶ್ರೇಯಸ್ಸನ್ನು ಪಡೆಯುತ್ತದೆ ಎಂದು ಹೇಳಿದರು.
ಮುಖ್ಯ ಶಿಕ್ಷಕಿ ರೋಸ್ಲಿ ಪ್ಲೇವಿ ಲೋಬೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಸಿಡಿಪಿಒಮಂಗಳಾ, ತಾಲೂಕು ಸಂಯೋಜನಾಧಿಕಾರಿ ಶೈಲಜಾ ಭಟ್, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್, ಶಿಕ್ಷಣ ಸಂಯೋಜಕ ಹರಿಪ್ರಸಾದ್, ಮಕ್ಕಳರಕ್ಷಣಾ ಘಟಕ ತಾಲೂಕು ಸಂಯೋಜಕ ವಝೀರ್ ಅಹಮದ್ ಉಪಸ್ಥಿತರಿದ್ದರು.
ಸಿಡಿಪಿಒ ಮಂಗಳಾ ರವರು ಸ್ವಾಗತಿಸಿದರು. ಮೇಲ್ವಿಚಾರಕಿ ಜಲಜಾಕ್ಷಿ ಕಾರ್ಯಕ್ರಮ ನಿರೂಪಿಸಿ, ವಂದನೆ ಮೇಲ್ವುಚಾರಕಿ ವನಿತಾ ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.