ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಂತರರಾಷ್ಟ್ರೀಯ

ಭಾರತದ ಒಂದು ಡ್ರೈವಿಂಗ್ ಲೈಸೆನ್ಸ್ ಇಂದ ಬರೋಬ್ಬರಿ 10 ದೇಶಗಳಲ್ಲಿ ವಾಹನ ಚಲಾಯಿಸಲು ಅನುಮತಿ

Published

on

ಪ್ರತಿಯೊಂದು ದೇಶವೂ ತನ್ನದೇ ಆದ ಡ್ರೈವಿಂಗ್ ಲೈಸೆನ್ಸ್ ಅನ್ನು ಹೊಂದಿರುತ್ತದೆ. ಆದರೆ ಭಾರತದ ಒಂದು ಡ್ರೈವಿಂಗ್ ಲೈಸೆನ್ಸ್ ಇಂದ ಬರೋಬ್ಬರಿ 10 ದೇಶಗಳಲ್ಲಿ ವಾಹನ ಚಲಾಯಿಸಲು ಅನುಮತಿ ಇದೆ. ಆ ದೇಶಗಳು ಯಾವುವು ಎಂದು ನೋಡೊಣ.

ಯಾರಿಗೆ ಟ್ರಿಪ್ ಹೋಗುವುದು ಅಂದ್ರೆ ಇಷ್ಟ ಇಲ್ಲ ಹೇಳಿ ಅದರಲ್ಲಿ ಫಾರಿನ್ ಟ್ರಿಪ್ ಎಂದರೇ ಎಲ್ಲರಿಗೂ ಇಷ್ಟ. ಬೇರೆ ದೇಶದ ಜನರ ಜೊತೆಗೆ ನಾವು ಬೆರೆಯುವ ಹಾಗೂ ಅಲ್ಲಿಯೇ ಇದ್ದರೇ ಚೆನ್ನಾಗಿರುತ್ತದೆ. ಅಲ್ಲವೇ. ನಾವು ಅಲ್ಲಿ ಯಾವುದೇ ಅಡಚಣೆ ಇಲ್ಲದೇ ಡ್ರೈವಿಂಗ್ ಮಾಡಿದರೆ ಇನ್ನೂ ಚಂದ. ಭಾರತದ ಡ್ರೈವಿಂಗ್ ಲೈಸೆನ್ಸ್ ಸ್ವಿಟ್ಜರ್ಲೆಂಡ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಇತರ ದೇಶಗಳಲ್ಲಿ ಮಾನ್ಯತೆಯನ್ನು ಹೊಂದಿದೆ.

ಸ್ವಿಜರ್‌ಲ್ಯಾಂಡ್‌:
ನೀವು ಭಾರತೀಯರಾಗಿದ್ದರೆ 1 ವರ್ಷ ಗಾಡಿ ಚಲಾಯಿಸಬಹುದು. ಯಾರೂ ಕೇಳುವುದಿಲ್ಲ. ಅಲ್ಲಿನ ಹಳ್ಳಿಗಳು ಸರೋವರಗಳು ಹೀಗೆ ನಾನಾ ಪ್ರದೇಶಗಳಿಗೆ ಭೇಟಿ ನೀಡಬಹುದು.

ನ್ಯೂಜಿಲ್ಯಾಂಡ್:
ನೀವು ಇಲ್ಲೂ ಸಹ ಡ್ರೈವಿಂಗ್ ಮಾಡಬಹುದು. 21 ವರ್ಷ ನಿಮಗೆ ತುಂಬಿದ್ದರೆ ಸಾಕು. ನೀವು ನ್ಯೂಜಿಲೆಂಡ್ ಅನ್ನು ಸುತ್ತಬಹುದು.

ಆಸ್ಟ್ರೇಲಿಯಾ;
ಭಾರತೀಯ ಲೈಸೆನ್ಸ್ ಇಟ್ಟುಕೊಂಡು ಆಸ್ಟ್ರೇಲಿಯಾದ ಯಾವುದೇ ಮೂಲೆಯನ್ನು ಸುತ್ತಬಹುದು. ಆಸ್ಟ್ರೇಲಿಯಾದ ಉತ್ತರ ಭಾಗದಲ್ಲಿ ಒಂಬತ್ತು ತಿಂಗಳ ಮಾತ್ರ ನೀವು ಸುತ್ತಬಹುದು.






ಜರ್ಮನಿ:
ಜರ್ಮನ್ ದೇಶದಲ್ಲಿ ಆಟೋ ಬಾನ್ ಗಳನ್ನು ನೀವು ಆರು ತಿಂಗಳವರೆಗೆ ಚಾಲನೆ ಮಾಡಬಹುದು. ಇದು ನಿಮಗೆ ಹೊಸ ಅನುಭವ ನೀಡುತ್ತದೆ.

ಯುನೈಟೆಡ್ ಕಿಂಗ್ಡಮ್:
ಯುನೈಟೆಡ್ ಕಿಂಗ್ಡಮ್ ನಲ್ಲಿ ಮಾತ್ರ ನೀವು ಯಾವ ಬಗೆಯ ಡ್ರೈವಿಂಗ್ ಲೈಸೆನ್ಸ್ ಇಟ್ಟುಕೊಂಡಿರುತ್ತೀರೋ ಆ ವಾಹನಗಳನ್ನು ಮಾತ್ರ ಓಡಿಸಬೇಕು.

ದಕ್ಷಿಣ ಆಫ್ರಿಕಾ:
ಜೋಹಾನ್ಸ್ ಬರ್ಗ್ ಕೇಪ್ ಟೌನ್ ಮತ್ತು ಇತರ ಪ್ರದೇಶಗಳನ್ನು ಒಂದು ವರ್ಷದವರೆಗೆ ವೆಹಿಕಲ್ ನಲ್ಲಿ ಸುತ್ತಬಹುದು.

ಸಿಂಗಾಪುರ:
ನಮ್ಮ ಇಂಗ್ಲಿಷ್ ಡ್ರೈವಿಂಗ್ ಲೈಸೆನ್ಸ್ ನಲ್ಲಿ ಸಿಂಗಾಪುರದ ಯಾವುದೇ ಪ್ರದೇಶವನ್ನು ಸುತ್ತಬಹುದು. ಯಾವುದೇ ವಾಹನದಲ್ಲಿ.

ಸ್ಪೇನ್:
ಆರು ತಿಂಗಳವರೆಗೆ ನೀವು ಬಾರ್ಸಿಲೋನಾದ ಐತಿಹಾಸಿಕ ಪ್ರದೇಶಗಳಿಗೆ ಭೇಟಿ ನೀಡಬಹುದು. ನೀವು ರೆಸಿಡೆನ್ಸಿ ನೊಂದಣಿಯನ್ನು ಮಾಡಿಕೊಳ್ಳುವುದು ಕಡ್ಡಾಯ.

ನಾರ್ವೆ:
ನಾರ್ವೆಯಲ್ಲಿ ಮೂರು ತಿಂಗಳವರೆಗೆ ಎಲ್ಲಿ ಬೇಕಾದರೂ ಸುತ್ತಬಹುದು. ಸುಂದರ ದೀಪಗಳನ್ನು ನೋಡಬಹುದಾಗಿದೆ.

ಸ್ವೀಡನ್:
ಒಂದು ವರ್ಷದವರೆಗೆ ಸ್ವೀಡನ್ ಅನ್ನು ಸುತ್ತಬಹುದು. ಆದರೆ ನಮ್ಮ ಲೈಸೆನ್ಸ್ ಸ್ಪೀಡನ್ ಭಾಷೆ ಇಂಗ್ಲಿಷ್ ಭಾಷೆ ಫ್ರೆಂಚ್ ಭಾಷೆ, ಜರ್ಮನ್ ಭಾಷೆ ಅಥವಾ ನಾರ್ವೇಜಿಯನ್ ಭಾಷೆಯಲ್ಲಿ ಇರಬೇಕು.

Continue Reading
Click to comment

Leave a Reply

Your email address will not be published. Required fields are marked *

Advertisement