Published
10 months agoon
By
Akkare Newsಪುತ್ತೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಆಡಳಿತ ಮಂಡಳಿಯ ಅವಧಿ ಮುಕ್ತಾಯಗೊಂಡಿದ್ದು ನೂತನ ಆಡಳಿತ ಮಂಡಳಿಯ ರಚನೆಗೆ ಮಾ.11ರಂದು ಚುನಾವಣೆ ನಡೆಯಲಿದೆ.
ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಫೆ.26ರಿಂದ ಪ್ರಾರಂಭಗೊಂಡಿದ್ದು ನಾಮಪತ್ರ ಸಲ್ಲಿಸಲು ಮಾ. 3 ಅಂತಿಮ ದಿನವಾಗಿದೆ. ಮಾ.4ರಂದು ನಾಮಪತ್ರ ಪರಿಶೀಲನೆ, ಮಾ.5ರಂದು ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿದೆ. ಅದೇ ದಿನ ರಿಟರ್ನಿಂಗ್ ಅಧಿಕಾರಿಯವರು ಅಭ್ಯರ್ಥಿಗಳಿಗೆ ಚಿಹ್ನೆಯನ್ನು ನೀಡಲಿದ್ದಾರೆ. ಮಾ. 11ರಂದು ಮಂಗಳೂರಿನ ಕೋಡಿಯಾಲ್ ಬೈಲ್‌ನಲ್ಲಿರುವ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಪ್ರಧಾನ ಕಛೇರಿಯ ಸಭಾಂಗಣದಲ್ಲಿ ಬೆಳಿಗ್ಗೆ ಗಂಟೆ 9ರಿಂದ ಸಂಜೆ 4 ಗಂಟೆಯ ತನಕ ಮತದಾನ ನಡೆಯಲಿದೆ. ಅದೇ ದಿನ ಸಂಜೆ ಮತ ಎಣಿಕೆಯಾಗಿ ಫಲಿತಾಂಶ ಘೋಷಣೆಯಾಗಲಿದೆ. ಮಂಗಳೂರು ಉಪ ವಿಭಾಗದ ಸಹಾಯಕ ಆಯುಕ್ತ ಹರ್ಷವರ್ಧನ ಎಸ್.ಜೆ. ಅವರು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
16 ಸ್ಥಾನಗಳಿಗೆ ಚುನಾವಣೆ:
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ಒಟ್ಟು 16 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಪ್ರಾಥಮಿಕ ವ್ಯವಸಾಯ, ಕೃಷಿ ಪತ್ತಿನ ಸಹಕಾರ ಸಂಘಗಳ ಪ್ರತಿನಿಧಿಗಳ 13 ಸ್ಥಾನ ಇದೆ. ಕುಂದಾಪುರ – 2, ಉಡುಪಿ 2. ಮಂಗಳೂರು-೪ ಸ್ಥಾನಗಳಿದ್ದು ಸುಳ್ಯ, ಪುತ್ತೂರು, ಕಾರ್ಕಳ, ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕುಗಳಲ್ಲಿ ತಲಾ ಒಂದು ಸ್ಥಾನ ಇದೆ. ಉಭಯ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಾಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರಿ ಸಂಘ, ಪಟ್ಟಣ ಸಹಕಾರಿ ಬ್ಯಾಂಕ್, ಕೃಷಿಯೇತರ ಸಹಕಾರಿ ಸಂಘ ಹಾಗೂ ಈ ಮೇಲಿನ ಮೂರು ತರಗತಿಯ ಸಂಘಗಳನ್ನು ಹೊರತು ಪಡಿಸಿ ಇತರ ಎಲ್ಲಾ ಸಹಕಾರ ಸಂಘಗಳಿಗೆ ತಲಾ ಒಂದು ಸ್ಥಾನ ಇದೆ. ಈ ಸಂಘಗಳಲ್ಲಿ ಆಡಳಿತ ಮಂಡಳಿ ನಿರ್ಣಯಿಸಿದ ನಿರ್ದೇಶಕರು ಅಭ್ಯರ್ಥಿಗಳು ಹಾಗೂ ಮತದಾರರಾಗಿರುತ್ತಾರೆ.