ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆ

Published

on

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇಲ್ಲಿನ ವರ್ಷಾವಧಿ ಜಾತ್ರೆಯ ಏ.10 ರಿಂದ 20 ರವರೆಗೆ ನಡೆಯಲಿದೆ.

ದಿನಾಂಕ: 10-04-2024ನೇ ಬುಧವಾರ ಬೆಳಿಗ್ಗೆ 9:25 ನಂತರ ವೃಷಭ ಲಗ್ನದಲ್ಲಿ ಧ್ವಜಾರೋಹಣ ನಡೆದು ಕುರಿಯ ಮಾಡಾವು ಏಳ್ಳಾಡುಗುತ್ತುರವರಿಂದ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಅಂಕುರಾರ್ಪಣ, ಬಲಿ ಹೊರಟು ಉತ್ಸವ, ಬೊಳುವಾರು, ಶ್ರೀರಾಮ ಪೇಟೆ ಕಾರ್ಜಾಲು, ರಕೇಶ್ವರಿ ದೇವಸ್ಥಾನ,ಕಲ್ಲೇಗ, ಕರ್ಮಲ ಈ ಭಾಗದಲ್ಲಿ ದೇವರ ಸವಾರಿ ನಡೆಯಲಿದೆ.

ದಿನಾಂಕ:11-04-2024ನೇ ಗುರುವಾರ ಕ.ರಾ.ರ.ಸಾ.ನಿ. ಪುತ್ತೂರು ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಂದ ಮಧ್ಯಾಹ್ನ ನಡೆಯಲಿದೆ. ಅನ್ನಸಂತರ್ಪಣೆ ರಾತ್ರಿ ಉತ್ಸವ, ನಂತರ ನೆಲ್ಲಿಕಟ್ಟೆ, ಸಾಲ್ಮರ, ಸೂತ್ರಬೆಟ್ಟು ಈ ಭಾಗದಲ್ಲಿ ದೇವರ ಸವಾರಿ ನಡೆಯಲಿದೆ.

ದಿನಾಂಕ:12-04-2024ನೇ ಶುಕ್ರವಾರ ರಾತ್ರಿ ಉತ್ಸವ, ನಂತರ ಶಿವಪೇಟೆ,ತೆಂಕಿಲ,ಕೊಟ್ಟಿಬೆಟ್ಟು ಏಳ್ಳಾಡುಗುತ್ತು, ಬೈಪಾಸ್‌ ಹೆದ್ದಾರಿ, ರಾಧಾಕೃಷ್ಣ ಮಂದಿರ ಈ ಭಾಗದಲ್ಲಿ ದೇವರ ಸವಾರಿ ನಡೆಯಲಿದೆ.

ದಿನಾಂಕ :13-04-2024 ಶನಿವಾರ ಮೇಷ ಸಂಕ್ರಮಣ ರಾತ್ರಿ ಉತ್ಸವ, ನಂತರ ಪೇಟೆ ಸವಾರಿ, ಕೋರ್ಟು ರಸ್ತೆ, ಸೈನಿಕ ಭವನ ರಸ್ತೆ ಬಪ್ಪಳಿಗೆ, ಉರ್ಲಾಂಡಿ, ಬೊಳ್ವಾರ್‌ಬೈಲು ಈ ಭಾಗದಲ್ಲಿ ದೇವರ ಸವಾರಿ ನಡೆಯಲಿದೆ.
ದಿನಾಂಕ:14-04-2024ನೇ ಆದಿತ್ಯವಾರ ಸೌರಮಾನ ಯುಗಾದಿ (ವಿಷು) ಬೆಳಿಗ್ಗೆ ಉತ್ಸವ, ವಸಂತ ಕಟ್ಟೆಪೂಜೆ, ರಾತ್ರಿ ಉತ್ಸವ, ಬಂಡಿ ಉತ್ಸವ (ಚಂದ್ರಮಂಡಲ) ಕೊಂಬೆಟ್ಟು, ಬೊಳುವಾರು ಹಾರಾಡಿ,ತಾಳಿಪ್ಪಾಡಿ,ದ್ರಾವಿಡ ಬ್ರಾಹ್ಮಣ ಹಾಸ್ಟೆಲ್‌, ಸಕ್ಕರೆ ಕಟ್ಟೆ ಗೆ ದೇವರ ಸವಾರಿ ನಡೆಯಲಿದೆ.

ದಿನಾಂಕ:15-04-2024ನೇ ಸೋಮವಾರ ರಾತ್ರಿ ಉತ್ಸವ, ನಂತರ ಬನ್ನೂರು,ಅಶೋಕನಗರ,ರೈಲ್ವೆ ಭಾಗದಲ್ಲಿ ದೇವರ ಸವಾರಿ ನಡೆಯಲಿದೆ. ಮಾರ್ಗ

ದಿನಾಂಕ:16-04-2024ನೇ ಮಂಗಳವಾರ ಬೆಳಿಗ್ಗೆ ಗಂಟೆ 8.30ರಿಂದ ತುಲಾಭಾರ ಸೇವೆಯು ನಡೆಯಲಿದೆ. ರಾತ್ರಿ ಉತ್ಸವ, ನಂತರ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಮಾಮೂಲು ಪ್ರಕಾರ ಬರುವ ಕಿರುವಾಳು, ಪಾಲಕಿ ಉತ್ಸವ, ಸಣ್ಣ ರಥೋತ್ಸವ, ಕೆರೆ ಉತ್ಸವ,ತೆಪ್ಪೋತ್ಸವ ನಡೆಯಲಿದೆ.

ದಿನಾಂಕ:17-04-2024ನೇ ಬುಧವಾರ ಬೆಳಿಗ್ಗೆ ಉತ್ಸವ, ವಸಂತ ಕಟ್ಟೆಪೂಜೆ, ದರ್ಶನಬಲಿ,, ಬಟ್ಟಲುಕಾಣಿಕೆ, ಬ್ರಹ್ಮರಥ ದಾನಿ ದಿ.ನೆಟ್ಟಾಳ ಮುತ್ತಪ್ಪ ರೈ ದೇರ್ಲ ಇವರ ಸ್ಮರಣಾರ್ಥ ಸಹೋದರಿ, ಸಹೋದರರು ಹಾಗೂ ಮಕ್ಕಳಿಂದ ಮಧ್ಯಾಹ್ನ ಅನ್ನಸಂತರ್ಪಣೆ ಜರಗಳಿದೆ.




ರಾತ್ರಿ 7.30 ರ ನಂತರ ಉತ್ಸವ ನಡೆದು ಬಳಿಕ ಸಿಡಿಮದ್ದು ಪ್ರದರ್ಶನ( ಪುತ್ತೂರು ಬೆಡಿ) ದೊಂದಿಗೆ ಬ್ರಹ್ಮರಥೋತ್ಸವ ನಡೆಯಲಿದೆ. ನಂತರ ಬಂಗಾ‌ರ್ ಬಾಗದಲ್ಲಿ ದೇವರ ಸವಾರಿ ನಡೆಯಲಿದೆ. ಕಾಯರ್‌ಕಟ್ಟೆ

ಶ್ರೀ ದಂಡನಾಯಕ – ಉಳ್ಳಾಲ್ತಿ ದೈವಗಳ ಬೀಳ್ಕೊಡುಗೆ, ಶ್ರೀ ಭೂತಬಲಿ, ಶಯನ ನಡೆಯಲಿದೆ.
ದಿನಾಂಕ:18-04-2024ನೇ ಗುರುವಾರ ಬೆಳಿಗ್ಗೆ 7.30ಕ್ಕೆ ದೇವರ ಬಾಗಿಲು ತೆಗೆಯುವ ಮುಹೂರ್ತ, ಬೆಳಿಗ್ಗೆ 8.30ರಿಂದ ತುಲಾಭಾರ ಸೇವೆಯು ಜರಗಳಿದೆ. ಸಂಜೆ ಗಂಟೆ 3.30 ದೇವರು ಅವಭ್ರತ ಸ್ನಾನಕ್ಕೆ ವೀರಮಂಗಲಕ್ಕೆ ಸವಾರಿ ಹೊರಡುವುದು.

ದಿನಾಂಕ :19-04-2024 ಶುಕ್ರವಾರ ಬೆಳಿಗ್ಗೆ ಧ್ವಜಾವರೋಹಣ ನಡೆಯಲಿದೆ. ರಾತ್ರಿ ಚೂರ್ಣೋತ್ಸವ ವಸಂತ ಪೂಜೆ ಪ್ರಾರಂಭಗೊಳ್ಳುವುದು, ಹುಲಿಭೂತ, ರಕೇಶ್ವರಿ ನೇಮ ಜರಗಳಿದೆ. ನಂತರ

20.04.2024ನೇ ಶನಿವಾರ ಸಂಪ್ರೋಕ್ಷಣೆ, ರಾತ್ರಿ ಮಂತ್ರಾಕ್ಷತೆ, ಅಂಜಣತ್ತಾಯ, ಪಂಜುರ್ಲಿವಗೈರೆ ದೈವಗಳ ನೇಮ ಜರಗಳಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement