ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಲೆ - ಸಾಹಿತ್ಯ ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ತಂತ್ರಜ್ಞಾನ ಧಾರ್ಮಿಕ ಮಂಗಳೂರು ಮನೋರಂಜನೆ ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ವಾಣಿಜ್ಯ ಶುಭಾರಂಭ ಸಾಮಾನ್ಯ ಸ್ಥಳೀಯ
ಪುತ್ತೂರಿನಲ್ಲಿ ಪ್ರೇಕ್ಷಕರನ್ನು ಮೋಡಿ ಮಾಡುತ್ತಿರುವ ಅಪೋಲೋ ಸರ್ಕಸ್; 20 ವರ್ಷಗಳಿಂದ ದೇಶಾದ್ಯಂತ ಧೂಳೆಬ್ಬಿಸಿದ ತಂಡದಿಂದ ಮುಂದಿನ 25 ದಿನ ಮುಕ್ರಂಪಾಡಿಯಲ್ಲಿ ಸೂಪರ್ ಡ್ಯೂಪರ್ ಶೋPublished
9 months agoon
By
Akkare Newsಪುತ್ತೂರಿನಲ್ಲಿ ಪ್ರೇಕ್ಷಕರನ್ನು ಮೋಡಿ ಮಾಡುತ್ತಿರುವ ಅಪೋಲೋ ಸರ್ಕಸ್; 20 ವರ್ಷಗಳಿಂದ ದೇಶಾದ್ಯಂತ ಧೂಳೆಬ್ಬಿಸಿದ ತಂಡದಿಂದ ಮುಂದಿನ 25 ದಿನ ಮುಕ್ರಂಪಾಡಿಯಲ್ಲಿ ಸೂಪರ್ ಡ್ಯೂಪರ್ ಶೋ ಸರ್ಕಸ್ – ಮೂರು ಅಕ್ಷರಗಳ ಪದ ಶತಮಾನಗಳಿಂದ ಭಾರತೀಯರನ್ನು ಆಕರ್ಷಿಸಿದೆ.
ಇಂದು ಸೋಷಿಯಲ್ ಮೀಡಿಯಾಗಳಲ್ಲಿ ಶಾರ್ಟ್ಸ್ ಮತ್ತು ರೀಲ್ಸ್ ಗಳ ಹಾವಳಿ ನಡುವೆ ದೂರದರ್ಶನ ಮಾಧ್ಯಮಗಳು ಕಾಲಿಡುವ ಮುಂಚೆ ಜನರನ್ನು ರಂಜಿಸುತ್ತಿದ್ದುದು ಈ ಸರ್ಕಸ್ಗಳು ಕೈಯಲ್ಲಿ ಪಾಪ್‌ಕಾರ್ನ್ ಮತ್ತು ಪಾಪ್ಸಿಕಲ್ ಬಾಟಲ್ ಹಿಡಿದುಕೊಂಡು, ಸರ್ಕಸ್ ಕಲಾವಿದರು ತಮ್ಮ ಚಮತ್ಕಾರಗಳನ್ನು ಹಗ್ಗದಿಂದ ಜಿಗಿಯುವ ಮೂಲಕ, ರಿಂಗ್‌ಮಾಸ್ಟರ್‌ನ ಟ್ಯೂನ್‌ಗಳಿಗೆ ನೃತ್ಯ ಮಾಡುವ 120 ನಿಮಿಷಗಳ ಪ್ರದರ್ಶನವನ್ನು ಎವೆಯಿಕ್ಕದೆ ನೋಡಿದಾಗ ನಮ್ಮನ್ನು ಬೇರೆಯ ಲೋಕಕ್ಕೆ ಕೊಂಡೊಯ್ಯುತ್ತದೆ.
ಪುತ್ತೂರು ಮಹಾತೋಭಾರ ಶ್ರೀ ಮಹಾಲೀಂಗೇಶ್ವರನ ನೆಲ, ಏಪ್ರಿಲ್ ತಿಂಗಳೆಂದರೆ ಇಲ್ಲಿ ಜಾತ್ರೆ ವಾತಾವರಣ. ಹತ್ತೂರಿನಲ್ಲಿರುವ ಪುತ್ತೂರಿನವರು ಒಂದು ಸೇರುವ ಸಮಯ. ಅವರ ನೆಂಟರಿಷ್ಟರು, ಬಂಧು ಬಳಗದವರು ಬಂದು ಸೇರುವ ಸಮಯ. ಹೀಗಾಗಿ ಜಾತ್ರೆ ಗದ್ದೆ ತುಂಬಾ ಪುತ್ತೂರಿಗರ ಕಲರವ ಕೇಳಿಸುತ್ತದೆ. ಹತ್ತೂರಿಗೂ ಅದು ಹಬ್ಬುತ್ತದೆ . ಆದರೇ ಈ ಬಾರಿ ಇದಕ್ಕೆ ಇನ್ನಷ್ಟು ಮೆರಗು ತುಂಬಲು ಅಪೋಲೊ ಸರ್ಕಸ್ ಪುತ್ತೂರಿಗೆ ಬಂದಿದೆ.
ಮುಕ್ರಂಪಾಡಿಯ ಹನುಮ ವಿಹಾರ ಮೈದಾನದಲ್ಲಿ ‘ಅಪೋಲೋ ಸರ್ಕಸ್’ ಭರ್ಜರಿಯಾಗಿ ಆರಂಭಗೊಂಡಿದ್ದು ಮೊದಲ ವಾರದಲ್ಲೆ ಪ್ರೇಕ್ಷಕರ ಮನಸೂರೆಗೊಂಡಿದೆ. ನೂರಕ್ಕೂ ಅಧಿಕ ಆಟಗಾರರು ಪ್ರದರ್ಶಿಸುವ ವಿಭಿನ್ನ ವಿನೂತನ ಕಲಾ ಪ್ರದರ್ಶನಕ್ಕೆ ವೀಕ್ಷಕರು ಮಂತ್ರಮುಗ್ಧಗೊಂಡಿದ್ದಾರೆ.
ಅಪೋಲೋ ಸರ್ಕಸ್ ತನ್ನ ಪೂರ್ಣ ಪ್ರಮಾಣದ ಮೋಡಿ ಮಾಡುವ 120 ನಿಮಿಷಗಳ ನವೀನ ಮಾದರಿಯ ಸರ್ಕಸ್‌ನ್ನು ಪ್ರದರ್ಶಿಸುತ್ತಿದೆ. ಅಪೋಲೋ ತಂಡ ಮೈ ರೋಮಾಂಚನಗೊಳಿಸುವ ಬಬಲ್ ಶೋ, ಸ್ಕೇಟಿಂಗ್, ಲ್ಯಾಡರ್ ಬ್ಯಾಲೆನ್ಸ್, ಸ್ವಾರ್ಡ್‌ಆಕ್ಟ್, ಕ್ಯೂಬ್ ಜಗ್ಲಿಂಗ್, ರೊಲ್ಲಾ ಬೊಲ್ಲಾ, ಹುಲಾ ಹೂಪ್ ಮತ್ತು ಏರಿಯಲ್ ರೋಪ್ ಜೊತೆಗೆ ವಿದೂಷಕ ಸಹಿತ ಅನೇಕ ಮನರಂಜನೆ ಆಟಗಳನ್ನು ಪ್ರದರ್ಶಿಸುತ್ತಿದೆ.
ಪ್ರದರ್ಶನದ ವಿವರ : ಪ್ರತಿದಿನ 3 ಆಟಗಳಿದ್ದು, ಮಧ್ಯಾಹ್ನ 1 ಗಂಟೆಗೆ, ಸಂಜೆ 4 ಗಂಟೆಗೆ ಮತ್ತು ರಾತ್ರಿ 7 ಗಂಟೆಗೆ ಪ್ರದರ್ಶನಗೊಳ್ಳಲಿದೆ.
ಮಣಿಪುರಿ, ನೇಪಾಳ, ಅಸಾಮಿ ಡಾರ್ಜಿಲಿಂಗ್ ಸೇರಿದಂತೆ ಇನ್ನಿತರ ಕಡೆಗಳ ನೂರಕ್ಕಿಂತ ಅಧಿಕ ಮಹಿಳೆಯರು ಹಾಗೂ ಪುರುಷ ಕಲಾವಿದರು ಈ ತಂಡದಲ್ಲಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕಲರ್ ಲೈಟ್ಸ್ ನಲ್ಲಿ ವಿವಿಧ ಪ್ರದರ್ಶನಗಳು. ಸುಮಾರು ಎರಡು ಗಂಟೆಗಳ ಕಾಲ ನಡೆಯಲಿದ್ದು, ದಿನದಲ್ಲಿ ಮೂರು ಶೋ ನಡೆಯಲಿದೆ. ಇದೀಗಾಗಲೇ ತಂಡವು ಮೈದಾನದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಮಾ.30 ರಿಂದ ಪ್ರದರ್ಶನ ಆರಂಭಗೊಳ್ಳಲಿದೆ ಎಂದು ತಂಡದ ವ್ಯವಸ್ಥಾಪಕರ ಪ್ರಕಟಣೆ ತಿಳಿಸಿದೆ.