ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಂತರರಾಷ್ಟ್ರೀಯ

ಯುಗಾದಿ ಹಬ್ಬಕ್ಕೆ ಚಿನ್ನಾಭರಣ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಶಾಕಿಂಗ್ ನ್ಯೂಸ್ : 10 ಗ್ರಾಂ ಗೆ ; 70, 000 ರೂ ದಾಖಲೆ ಸೃಷ್ಟಿಸಿದ ಚಿನ್ನದ ಬೆಲೆ

Published

on

ಯುಗಾದಿ ಹಬ್ಬಕ್ಕೆ ಚಿನ್ನಾಭರಣ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಗುರುವಾರ ಭಾರತದಲ್ಲಿ ಚಿನ್ನದ ದರ ಪ್ರತಿ 10 ಗ್ರಾಂ ಗೆ 850 ರೂ. ಹೆಚ್ಚಳವಾಗಿದ್ದು ದಾಖಲೆಯ 70,050 ರೂಪಾಯಿಗೆ ಮಾರಾಟವಾಗಿದೆ.

ಚಿನ್ನದ ಬೆಲೆ ಕಳೆದ 1 ತಿಂಗಳಿಂದಲೂ ಭಾರಿ ಏರಿಕೆ ಕಾಣುತ್ತಿದೆ. ಈ ಪೈಕಿ ಸತತ ಎರಡು ದಿನ ಭರ್ಜರಿ ಏರಿಕೆ ಆದ ಚಿನ್ನದ ಬೆಲೆ ಈಗ ಮುಗಿಲು ಮುಟ್ಟಿದೆ. ಪ್ರತಿ 10 ಗ್ರಾಂಗೆ ಸಾರ್ವಕಾಲಿಕ ದಾಖಲೆ ಮುಟ್ಟಿ 70,000 ರೂಪಾಯಿ ಗಡಿ ದಾಟಿದೆ. ಹಾಗೇ ಆಭರಣ ಚಿನ್ನದ ಬೆಲೆ ಇದೀಗ 70 ಸಾವಿರ ರೂಪಾಯಿ ಗಡಿ ದಾಟಿದೆ. ಈ ಮೂಲಕ ಚಿನ್ನದ ಮೇಲೆ ಹೂಡಿಕೆ ಮಾಡಿದವರ ಮುಖದಲ್ಲಿ ಮಂದಹಾಸ ಮೂಡಿದ್ದು, ಭರ್ಜರಿ ಲಾಭದ ನಿರೀಕ್ಷೆಯಲ್ಲಿದ್ದಾರೆ. ಆದರೆ ಇದೇ ಸಮಯದಲ್ಲಿ ಮದುವೆ ಮತ್ತಿತರ ಶುಭ ಸಮಾರಂಭಗಳಿಗೆ ಚಿನ್ನ ಖರೀದಿ ಮಾಡಲು ಸಿದ್ಧವಿದ್ದ ಜನರಿಗೆ ಇದರಿಂದ ಆಘಾತ ಸಿಕ್ಕಿದೆ.

ಈ ಬಾರಿ 70,000 ರೂ. ಗಡಿ ದಾಟಿದ್ದು ಸಾರ್ವಕಾಲಿಕ ದಾಖಲೆ ಬರೆದಿದೆ. ಜಾಗತಿಕ ಬೆಳವಣಿಗೆ ಆಧರಿಸಿ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆ ಕಂಡಿದೆ. ಭಾರತ ಸೇರಿ ಪ್ರಮುಖ ರಾಷ್ಟ್ರಗಳ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾದ ಚಿನ್ನದ ಮೊರೆ ಹೋಗುತ್ತಿದ್ದಾರೆ. ಮದುವೆ, ಹಬ್ಬದ ಸೀಸನ್ ನಲ್ಲಿ ಆಭರಣಗಳಿಗೆ ಬೇಡಿಕೆ ಹೆಚ್ಚಿರುವುದರಿಂದ ಬೆಲೆ ಏರಿಕೆಯಾಗುತ್ತಿದೆ ಎಂದು ಹೇಳಲಾಗಿದೆ.




ಬೆಂಗಳೂರು ನಗರದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ 64,600 ರೂಪಾಯಿ ಬೆಲೆ ಇದ್ದು, 24 ಕ್ಯಾರೆಟ್ ಚಿನ್ನಕ್ಕೆ ಬೆಂಗಳೂರಲ್ಲಿ 70,470 ಬೆಲೆ ಇದೆ. ಹಾಗೇ ಚೆನ್ನೈ ನಗರದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ 65,450 ಮತ್ತು 24 ಕ್ಯಾರೆಟ್ ಚಿನ್ನಕ್ಕೆ 71,400 ರೂಪಾಯಿ ಇದೆ. ದೆಹಲಿ ನಗರದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ 66,750 ರೂಪಾಯಿ ಬೆಲೆ ಇದ್ದು, 24 ಕ್ಯಾರೆಟ್ ಚಿನ್ನಕ್ಕೆ 70,620 ಬೆಲೆ ಇದೆ. ಹೈದರಾಬಾದ್ ನಗರದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ 64,600 ರೂಪಾಯಿ ಬೆಲೆ ಇದ್ದು, 24 ಕ್ಯಾರೆಟ್ ಚಿನ್ನಕ್ಕೆ 70,470 ಬೆಲೆ, ಕೋಲ್ಕತ್ತಾ ನಗರದಲ್ಲಿ 61,700 ಸಾವಿರ ಮತ್ತು 70,470 ಸಾವಿರ ರೂಪಾಯಿ ಬೆಲೆ ಇದ್ರೆ, ಮುಂಬೈ ಮಹಾನಗರದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ 64,600 ರೂಪಾಯಿ ಬೆಲೆ ಇದ್ದು, 24 ಕ್ಯಾರೆಟ್ ಚಿನ್ನಕ್ಕೆ 70,470 ಬೆಲೆ ಇದೆ.

ಇಂದಿನ ಬೆಳ್ಳಿ ದರ
ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. ರೂಪಾಯಿ ಮೌಲ್ಯದಲ್ಲಿ ಏರಿಕೆ, ಇಳಿಕೆಯಾದಂತೆಯೂ ಚಿನ್ನ ಬೆಳ್ಳಿ ದರ ವ್ಯತ್ಯಾಸವಾಗುತ್ತಿದೆ.

ಬೆಂಗಳೂರು ಹಾಗೂ ಇತರೆಡೆ ಸಿಲ್ವ‌ರ್ ರೇಟ್
ಹಾಗೆಯೇ ಬೆಂಗಳೂರಿನಲ್ಲಿ 10 gm, 100 gm, 1000 gm (1 ಕೆಜಿ) ಬೆಳ್ಳಿ ದರ ಕ್ರಮವಾಗಿ . 815 ರೂ. 8150 ಹಾಗೂ ರೂ. 81500 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 85,000 ಆಗಿದ್ದರೆ, ಮುಂಬೈನಲ್ಲಿ ರೂ. 81,700 ಹಾಗೂ ಕೋಲ್ಕತ್ತದಲ್ಲಿ ರೂ. 81,700 ಗಳಾಗಿದೆ. ಅಲ್ಲದೆ, ರಾಷ್ಟ್ರ ರಾಜಧಾನಿ ಹೊಸ ದಿಲ್ಲಿಯಲ್ಲಿ ಸಹ ಇಂದಿನ ಬೆಳ್ಳಿ ದರ ರೂ. 81,700 ಆಗಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement