ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಲೆ - ಸಾಹಿತ್ಯ ಕಾರ್ಯಕ್ರಮಗಳು ಚರ್ಚೆಗಳು ಚುನಾವಣೆ ಜೀವನಶೈಲಿ ತಂತ್ರಜ್ಞಾನ ತಾಜಾ ಸುದ್ದಿ ಧಾರ್ಮಿಕ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ಶುಭಾರಂಭ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಜ್ಞಾನ ಜಾಗರಣೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಕನ್ನಡ ಭಕ್ತಿಗೀತೆ ಲೋಕಾರ್ಪಣೆ.Published
12 months agoon
By
Akkare Newsಪುತ್ತೂರು: ಹತ್ತೂರ ಒಡೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ರಥೋತ್ಸವದ ದಿನ ದಿನಾಂಕ 17-04-2024 ರಂದು ಜಿಲ್ಲೆಯ ಉದಯೋನ್ಮುಖ ಯುವ ಗಾಯಕರಾದ ನಿತೇಶ್ ಅನಂತಾಡಿ ಮತ್ತು ವಾಣಿ ಮಧ್ವರವರ ಸುಮಧುರ ಕಂಠದಲ್ಲಿ ಮೂಡಿಬಂದಿರುವ, ಕನ್ನಡ-ತುಳು ಭಕ್ತಿಯ ಸಾಹಿತ್ಯ ಲೋಕದಲ್ಲಿ ಹಲವಾರು ಗೀತಾ ರಚನೆಯನ್ನು ಮಾಡುತ್ತಾ ಮಿಂಚುತ್ತಿರುವ ಯುವ ಸಾಹಿತಿ ಶೆಟ್ಟಿ ಅಜಯ್ ರಾಜ್ ರವರ ಸಾಹಿತ್ಯ ರಚನೆಯ ಜ್ಞಾನ ಜಾಗರಣೆ ಭಕ್ತಿಗೀತೆಯ ಲೋಕಾರ್ಪಣೆಯನ್ನು ಪುತ್ತೂರಿನ ಜನಪ್ರಿಯ ಶಾಸಕರಾದ ಮಾನ್ಯ ಅಶೋಕ ಕುಮಾರ್ ರೈ ಕೆ.ಯಸ್.ಕೋಡಿಂಬಾಡಿಯವರು ನೇರವೆರಿಸಿ ಭಗವಂತನನ್ನು ನೇರವಾಗಿ ಸಂಪರ್ಕಿಸಬಹುವುದಾದರೆ ಅದು ಭಜನೆ ಮತ್ತು ಭಕ್ತಿಗೀತೆಯಿಂದ ಮಾತ್ರ ಸುಲಭ ಸಾಧ್ಯ.ಎಲ್ಲರಿಗೂ ಶ್ರೀ ದೇವರು ಸನ್ಮಂಗಲವನ್ನು ಉಂಟು ಮಾಡಲಿಯೆಂದು ಶುಭಹಾರೈಸಿದರು.
ಕರ್ನಾಟಕ ರಾಜ್ಯ ಹಿಂದೂ ಧಾರ್ಮಿಕ ಪರಿಷತ್ ನ ಸದಸ್ಯರಾದ ಮಾನ್ಯ ಶ್ರೀಮತಿ ಮಲ್ಲಿಕಾ ಪಕ್ಕಳ ಮತ್ತು ಹಿಂದೂ ಧಾರ್ಮಿಕ ಮುಖಂಡರಾದ ಅರುಣ್ ಕುಮಾರ್ ಪುತ್ತಿಲವರು ಸೇರಿ ಪೋಸ್ಟರ್ ಅನಾವರಣಗೊಳಿಸಿ ಶುಭವನ್ನು ಹಾರೈಸಿದರು.ಈ ಸಂದರ್ಭದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದ ಮುಖಂಡರುಗಳಾದ ಕಾವು ಹೇಮನಾಥ ಶೆಟ್ಟಿ,ರಾಜರಾಮ ಶೆಟ್ಟಿ ಕೋಲ್ಪೆಗುತ್ತು,ತಿಮ್ಮಪ್ಪ ಗೌಡ ಬಲ್ನಾಡು,ಯಂ.ಬಿ. ವಿಶ್ವನಾಥ ರೈ,ರಂಜಿತ್ ಬಂಗೇರ,ನಿಹಾಲ್ ಶೆಟ್ಟಿ ಸಾಮೆತಡ್ಕ,ರಾಕೇಶ್ ರೈ ಕುದ್ಕಾಡಿ,ರಿತೇಶ್ ಶೆಟ್ಟಿ,ಶ್ರೀಮತಿ ಸುಮಾ ಅಶೋಕ್ ರೈ,ಶ್ರೀಮತಿ ಅನಿತಾ ಹೇಮನಾಥ ಶೆಟ್ಟಿ, ಶ್ರೀಮತಿ ಹರಿಣಾಕ್ಷಿ ಜಗದೀಶ್ ಶೆಟ್ಟಿ, ಶಿವಪ್ರಸಾದ ರೈ ಮಠಂತಬೆಟ್ಟು,ಸನತ್ ರೈ ಒಳತಡ್ಕ ಮುಂತಾದವರು ಉಪಸ್ಥಿತರಿದ್ದರು.
ಈ ಭಕ್ತಿಗೀತೆಯನ್ನು ಯುವ ಉದ್ಯಮಿ ಯೋಗೀಶ್.ಯಸ್.ಸಾಮಾನಿ ಸಂಪಿಗೆದಡಿ-ಮಠಂತಬೆಟ್ಟು,ಕೋಡಿಂಬಾಡಿ ಮತ್ತು ಅಲ್ ಹಿಲಾಲ್ ಹಾಸ್ಪಿಟಲ್ ಮನಾಮ ಬೆಹೈರಿನ್ ನ ಉದ್ಯೋಗಿ ಪ್ರೇಮಾ ಹರೀಶ್ ಕೆ.ರವರು ನಿರ್ಮಾಪಕರಾಗಿದ್ದು ಸುವಾನಿ ಕ್ರಿಯೇಷನ್ ಅರ್ಪಿಸುತ್ತಿದೆ.ವಿಡಿಯೋಗ್ರಾಫಿ ಮತ್ತು ಎಡಿಟಿಂಗ್ ರಕ್ಷಿತ್ ಆರ್.ಕೆ,ನೃತ್ಯ ವಿದುಷಿ ಅನುಶ್ರೀ ಸಾಮೆತಡ್ಕ ಹಾಗೂ ನವೀನ್ ರೈ ಬನ್ನೂರು,ರೂಪೇಶ್ ಪುತ್ತೂರು ರವರ ಸಹಕಾರವಿರಲಿದೆ.
ಸುವಾನಿ ಕ್ರಿಯೇಷನ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿರುವ ಈ ಭಕ್ತಿಗೀತೆಯನ್ನು https://youtu.be/8m-dFrZcnx4?si=00TfqEI7qEI3VmNC ಲಿಂಕ್ ನಲ್ಲಿ ವೀಕ್ಷಿಸಬಹುದು.