Published
8 months agoon
By
Akkare Newsಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಪದ್ಮರಾಜ್ ಮತದಾನ ಮಾಡಲು ಬಂದಾಗ ಬಿಜೆಪಿ ಕಾರ್ಯಕರ್ತರೋರ್ವರು ದಾಂದಲೆ ಎಬ್ಬಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಪದ್ಮರಾಜ್ ಪೂಜಾರಿಯವರು ತಮ್ಮ ಪತ್ನಿ ಪುತ್ರಿ ಹಾಗೂ ಕುಟುಂಬ ಸಮೇತರಾಗಿ ನಗರದ ಕಂಕನಾಡಿ ಕಪಿತಾನಿಯೋ ಶಾಲಾ ಮತಗಟ್ಟೆ 108ಕ್ಕೆ ಬಂದಿದ್ದರು.
ಪದ್ಮರಾಜ್ ಆಗಮಿಸಿದಾಗ ಜನ ಸೇರಿದ್ದನ್ನು ಕಂಡು ಮತಗಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತನ ಸಂದೀಪ್ ಎಕ್ಕೂರು ಎಂಬಾತ ಗುಂಡಾಗಿರಿ ನಡೆಸಿದ ಘಟನೆ ನಡೆದಿದೆ.ಪೊಲೀಸ್ ಅಧಿಕಾರಿಯನ್ನ ತಳ್ಳಾಡಿ ಪುಂಡಾಟ ಮೆರೆದ ಈತ ಪೊಲೀಸ್ ಅಧಿಕಾರಿಯೊಂದಿಗೆ ವಾಗ್ವಾದ ನಡೆಸಿ ಚಿತ್ರೀಕರಣ ಮಾಡಿದ ಮಾಧ್ಯಮದವರ ಮೇಲೂ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ.
ಕೊನೆಗೆ ಪೊಲೀಸ್ ಅಧಿಕಾರಿ ಗದರಿಸಿದ್ದಕ್ಕೆ ತೆಪ್ಪಗಾಗಿ ಸ್ಥಳದಿಂದ ಜಾಗ ಖಾಲಿ ಮಾಡಿಸಿದರು.