Published
8 months agoon
By
Akkare Newsಪುತ್ತೂರು: ಎ.27: ಚುನಾವಣಾ ಹಿನ್ನೆಲೆಯಲ್ಲಿ ಠಾಣೆಗಳಲ್ಲಿ ಅಡಮಾನ ಇರಿಸಲಾಗಿದ್ದ ಕೋವಿಗಳನ್ನು ಎರಡು ದಿನದೊಳಗೆ ವಾರಿಸುದಾರರಿಗೆ ಮರಳಿಸುವಂತೆ ಶಾಸಕರಾದ ಅಶೋಕ್ ರೈ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ.
ಚುನಾವಣೆ ಹಿನ್ನೆಲೆಯಲ್ಲಿ ಕೋವಿ ಇಟ್ಟುಕೊಂಡಿರುವ ಎಲ್ಲಾ ರೈತರು ತಮ್ಮ ಕೋವಿಗಳನ್ನು ಠಾಣೆಗಳಲ್ಲಿ ಅಡಮಾನ ಇರಿಸಿದ್ದರು. ಅಡಮಾನ ಇರಿಸುವ ವೇಳೆ ಕೆಲವು ರೈತರಿಗೆ ವಿನಾಯಿತಿಯನ್ನು ನೀಡಲಾಗಿತ್ತು. ಉಳಿದಂತೆ ಎಲ್ಲಾ ಕೋವಿಗಳನ್ನು ಠಾಣೆಯಲ್ಲಿ ಇರಿಸಲಾಗಿತ್ತು. ಅಡಮಾನ ಇರಿಸಲಾದ ಕೋವಿ ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ಕೃಷಿಕರಿಗೆ ಮರಳಿಸುವುದು ವಾಡಿಕೆಯಾಗಿತ್ತು. ಆದರೆ ಕೋವಿ ಇಲ್ಲದೆ ಕೃಷಿಕರಿಗೆ ತೊಂದರೆಯಾಗಿದ್ದು ದ ಕ ಜಿಲ್ಲೆಯಲ್ಲಿ ಚುನಾವಣೆ ಮುಗಿದಿದ್ದು ಎರಡು ದಿನದೊಳಗೆ ಎಲ್ಲಾ ಕೋವಿಗಳನ್ನು ಮರಳಿಸುವಂತೆ ಖಡಕ್ ಸೂಚನೆಯನ್ನು ನೀಡಿದ್ದಾರೆ. ಶಾಸಕರ ಸೂಚನೆಯನ್ನು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು ಎರಡು ದಿನದೊಳಗೆ ಅಡಮಾನ ಇರಿಸಲಾದ ಕೋವಿಗಳನ್ನು ಠಾಣೆಗಳಿಂದ ಪಡೆದುಕೊಳ್ಳಬಹುದಾಗಿದೆ.
ಕೋಟ್….
ಕೋವಿ ಇಲ್ಲದೆ ಕೃಷಿಕರಿಗೆ ತೊಂದರೆಯಾಗಿರುವ ಬಗ್ಗೆ ಅನೇಕ ದೂರುಗಳು ಬಂದಿದೆ. ಚುನಾವಣೆ ಮುಗಿದಿರುವ ಕಾರಣ ಕೋವಿ ಅಡಮಾನ ಇಡುವ ಅಗತ್ಯತೆ ಕಂಡು ಬರುವುದಿಲ್ಲ. ನೀತಿಸಂಹಿತೆ ಮುಗಿಯುವ ತನಕ ಕೋವಿಯನ್ನು ಇಡುವುದಾದರೆ ಜೂ. 4 ರವರೆಗೂ ಕೃಷಿಕರು ಕಾಯಬೇಕು ,ಮತ ಎಣಿಕೆಯ ಪ್ರಕ್ರಿಯೆ ಬಳಿಕ ನೀತಿ ಸಂಹಿತೆ ಹಿಂಪಡೆಯಲಾಗುತ್ತದೆ ಅಲ್ಲಿಯ ತನಕ ಕೃಷಿಕರು ಕಾಯಬೇಕಾಗುತ್ತದೆ. ಕೃಷಿಕರ ಅಪೇಕ್ಷೆಯನ್ನುಮಾನ್ಯ ಮಾಡಿ ಎರಡುದಿನದೊಳಗೆ ಅಡಮಾನ ಇರಿಸಲಾದ ಕೋವಿಯನ್ನು ಮರಳಿಸುವಂತೆ ಸೂಚನೆ ನೀಡಿದ್ದೇನೆ.
ಅಶೋಕ್ ರೈ ಶಾಸಕರು,ಪುತ್ತೂರು