ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿಪ್ರಾಯ

ನೋಟಾ, ಸತ್ಯಜಿತ್ , ಗ್ಯಾರೆಂಟಿ, ಬಿಲ್ಲವ ಟ್ರಂಪ್ ಕಾರ್ಡ್ , ಅಲ್ಪಸಂಖ್ಯಾತರ ಬೂತುಗಳ ಹೆಚ್ಚಿನ ಮತದಾನ ಸಹಾಯ ಪಡೆದು ಮಂಗಳೂರು ಲೋಕಸಭೆಯಲ್ಲಿ ಪದ್ಮರಾಜ್ ವಿಜಯ ಪತಾಕೆ ಹಾರಿಸಬಹುದೇ

Published

on

ಮಂಗಳೂರು: ಮಂಗಳೂರು ಲೋಕಸಭೆಯ ಚುನಾವಣೆ ಮುಗಿದಿದೆ. ಇನ್ನು ಏನಿದ್ದರೂ ಜೂನ್ ಮೂರಕ್ಕೆ ಮತ ಲೆಕ್ಕಕ್ಕಾಗಿ ಕಾಯಬೇಕಾಗುತ್ತದೆ.ಈ ಬಾರಿ ಮಂಗಳೂರು ಲೋಕಸಭೆ ಕಾಂಗ್ರೆಸ್ಸಿಗೆ ಹಲವು ವಿಧದಲ್ಲಿ ಅನುಕೂಲಕರವಾಗಿ ಒದಗಿ ಬಂದಿತ್ತು. ಬಿಜೆಪಿ ನಡುವಿನ ಬಣ ರಾಜಕೀಯ ಪ್ರಧಾನವಾಗಿ ಚುನಾವಣೆ ಸಂದರ್ಭದಲ್ಲಿ ಗೋಚರವಾಗಿತ್ತು. ಇದನ್ನು ಬಿರುವೆರ್ ಕುಡ್ಲದ ಮುಖ್ಯಸ್ಥರು ಸಾರ್ವಜನಿಕವಾಗಿ ಮಾಧ್ಯಮದ ಮೂಲಕ ಹೇಳಿಕೊಂಡಿದ್ದರು.

ಇದು ಅಲ್ಲದೆ ಮಾಜಿ ಸಂಘ ಪರಿವಾರದ ನಾಯಕ ತಿಮರೋಡಿ ಮಹೇಶ್ ಶೆಟ್ಟಿ ನೇತೃತ್ವದ ನೋಟಾದ ಅಭಿಯಾನ ಬಿಜೆಪಿಯ ತಲೆಕೆಡಿಸಿತ್ತು ಎನ್ನಲಾಗಿದೆ. ಮಾಜಿ ಸಂಘ ಪರಿವಾರದ ನಾಯಕ ಸತ್ಯಜಿತ್ ಸುರತ್ಕಲ್ ಪದ್ಮರಾಜ್ ಪರವಾಗಿ ಫೀಲ್ಡ್ ಗೆ ಇಳಿದಿದ್ದರು.

ಇನ್ನು ಅಲ್ಪಸಂಖ್ಯಾತರ ಬೂತುಗಳಲ್ಲಿ ಗರಿಷ್ಠ ಮಟ್ಟದ ಮತದಾನವಾಗಿದೆ. ಗ್ಯಾರಂಟಿ ಮಹಿಳೆಯರ ಮತವನ್ನು ಸೆಳೆಯಬಹುದು ಎಂಬ ನಿರೀಕ್ಷೆಯನ್ನು ಕಾಂಗ್ರೆಸ್ ಇಟ್ಟುಕೊಂಡಿದೆ.ಈ ಎಲ್ಲಾ ಅಂಶಗಳು ಕಾಂಗ್ರೆಸ್ಸಿಗೆ ಬಹಳಷ್ಟು ಸಕಾರಾತ್ಮಕವಾಗಿ ಇದ್ದ ಕ್ಷೇತ್ರವೇ ಮಂಗಳೂರು ಲೋಕಸಭಾ ಕ್ಷೇತ್ರ. ಬಿಜೆಪಿ ಕಳೆದ 32 ವರ್ಷಗಳಲ್ಲಿ ತನ್ನದೇ ಪಕ್ಷದ ಹಿರಿಯ ನಾಯಕರುಗಳ ಏಟಿಗೆ ಒಳಗಾಗಿದೆ ಎಂದು ಬಿಜೆಪಿಯ ನಾಯಕರು ಒಬ್ಬರು ಅಭಿಪ್ರಾಯ ಪಡುತ್ತಾರೆ.

ಇದು ಅಲ್ಲದೆ ಪದ್ಮರಾಜ್ ರವರ ಜಾತಿಯ ಬಿಲ್ಲವ ಟ್ರಂಪ್ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಪ್ರಚಾರದಲ್ಲಿ ಹಿಂದೆ ಕಾಣದ ರೀತಿಯಲ್ಲಿ ಪ್ರಚಾರವಾಗಿದ್ದು ಈ ಚುನಾವಣೆಯ ಪ್ರಮುಖವಾದ ಅಂಶವಾಗಿದೆ. ಒಂದು ಜಾತಿಯ ಪರವಾಗಿ ಎಷ್ಟು ದೊಡ್ಡ ಪ್ರಚಾರ ದಕ್ಷಿಣ ಕನ್ನಡದಲ್ಲಿ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿ ಎಂಬುದನ್ನು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.







ಈ ಎಲ್ಲ ಸಕಾರಾತ್ಮಕ ಅಂಶಗಳು ಇದ್ದ‌ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಈ ಬಾರಿಯ ಚುನಾವಣೆಯನ್ನು ಗೆಲ್ಲುತ್ತಾರೆಯೆ ಎಂಬುದು ಈಗ ಉಳಿದಿರುವ ಕುತೂಹಲದ ಅಂಶ. ಬಿಜೆಪಿ ಹಾಗೂ ಕಾಂಗ್ರೆಸ್ ಎರಡು ಪಕ್ಷಗಳು ಗೆಲುವಿನ ವಿಶ್ವಾಸದಲ್ಲಿ ಇರುವುದು ಮಂಗಳೂರು ಲೋಕಸಭೆಯ ವಿಶೇಷ.

ಆಭರಣದ ಬೆಲೆ ಇಂದು ಹೇಗಿದೆ
ಆದರೆ ವಿಶೇಷ ಕಾರ್ಯಾಚರಣೆಗೆ ಹೆಸರುವಾಸಿಯಾಗಿರುವ ಮಂಗಳೂರಿನ ಬಿಜೆಪಿ ಅಷ್ಟು ಸುಲಭದಲ್ಲಿ ಚುನಾವಣೆ ಬಿಟ್ಟುಕೊಡುತ್ತದೆಯೇ ಎಂಬುದು ಬಹುದೊಡ್ಡ ಕುತೂಹಲ. ಈ ಕುತೂಹಲವನ್ನು ತಣಿಸಬೇಕಾದರೆ ಜೂನ್ ಮೂರರವರೆಗೆ ನಾವು ಕಾಯಬೇಕಾಗುತ್ತದೆ

Continue Reading
Click to comment

Leave a Reply

Your email address will not be published. Required fields are marked *

Advertisement