Published
8 months agoon
By
Akkare Newsಬೆಳ್ತಂಗಡಿ : ದಾರುಸ್ಸಲಾಂ ದಅವಾ ಕಾಲೇಜು ಬೆಳ್ತಂಗಡಿಯಲ್ಲಿ ದಿನಾಂಕ 01 ಮೇ 2024 ರಂದು 7ನೇ ಬ್ಯಾಚ್ ನ ತರಗತಿ ಪ್ರಾರಂಭೋತ್ಸವವು ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಉಸ್ತಾದ್ ಉಸ್ಮಾನ್ ಫೈಝಿ ಯವರ ನೇತೃತ್ವದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾಗಿರುವ ಸಯ್ಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ರವರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಉಸ್ತಾದ್ ಬಷೀರ್ ದಾರಿಮಿ, ಅಬ್ದುಲ್ ರಝಾಕ್ ಕನ್ನಡಿಕಟ್ಟೆ, ಅಹ್ಮದ್ ಹುಸೈನ್ ಮೂಡಬಿದ್ರೆ, ಸಿರಾಜ್ ಚಿಲಿಂಬಿ, ಲತೀಫ್ ಪಾಂಡವರಕಲ್ಲು, ಸಂಸ್ಥೆಯ ಅಧ್ಯಾಪಕರಾದ ಅಶ್ರಫ್ ಯಮಾನಿ, ಶಾಫಿ ಫೈಝಿ, ಸಿನಾನ್ ಹೈತಮಿ, ನೌಷಾದ್ ಫೈಝಿ, ಝಕರಿಯ ಫೈಝಿ, ಶಿಹಾಬುದ್ದೀನ್ ಅಝ್ಹರಿ ಸಿರಾಜ್ ಸರ್ ಉಪಸ್ಥಿತರಿದ್ದರು.
ಸಂಸ್ಥೆಯ ಮುದರ್ರಿಸ್ಸರಾದ ಉಸ್ತಾದ್ ಶಾಫಿ ಫೈಝಿರವರು ಸ್ವಾಗತಿಸಿದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.