ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಆರೋಗ್ಯ

ಪುರುಷರಕಟ್ಟೆಯ ಆತ್ರೇಯ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್ ನಲ್ಲಿ ಖ್ಯಾತ ಜನರಲ್ ಫಿಸಿಷಿಯನ್ ಡಾ.ಸ್ವಾತಿ ಆರ್ ಭಟ್ ಸೇವೆಗೆ ಲಭ್ಯ

Published

on

ಪುತ್ತೂರು: ಪುರುಷರಕಟ್ಟೆಯಲ್ಲಿರುವ ಆತ್ರೇಯ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್ ನಲ್ಲಿ ಪುತ್ತೂರಿನ ಖ್ಯಾತ ಜನರಲ್ ಫಿಸಿಷಿಯನ್, ಮಧುಮೇಹ ಹಾಗೂ ಹೃದ್ರೋಗ ತಜ್ಞೆ ಡಾ.ಸ್ವಾತಿ.ಆರ್.ಭಟ್ ರವರು ಸೋಮವಾರದಿಂದ ಶನಿವಾರ ಬೆಳಿಗ್ಗೆ 9 ಗಂಟೆಯಿಂದ 10ರ ತನಕ ಸೇವೆಗೆ ಲಭ್ಯರಿರುತ್ತಾರೆ.

ಪುತ್ತೂರಿನ ಮುಕ್ವೆ ನಿವಾಸಿ ನಿವೃತ್ತ ಮನೆಗಾರರು ಶ್ರೀ ರಾಮಚಂದ್ರ ಭಟ್ ಮತ್ತು ಶ್ರೀಮತಿ ಲಕ್ಷ್ಮೀ.ಆರ್.ಭಟ್ ದಂಪತಿಗಳ ಸುಪುತ್ರಿಯಾದ ಇವರು ಎ.ಜೆ. ಇನ್ಸ್ಟಿಟ್ಯೂಟ್ ಒಫ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ, ಮಂಗಳೂರಿನಲ್ಲಿ ತಮ್ಮ ಎಂ.ಬಿ.ಬಿ.ಎಸ್ ಪದವಿ ಮುಗಿಸಿ ವೈದ್ಯಕೀಯ ವಿಭಾಗದಲ್ಲಿ ಎಂ.ಡಿ (M. D. In General Medicine) ಪದವಿಯನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ







ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ, ಧಾರವಾಡದಲ್ಲಿ ಪಡೆದಿರುತ್ತಾರೆ. ಇವರು ಒಳ ರೋಗಿ ಮತ್ತು ಹೊರ ರೋಗಿ ವಿಭಾಗದ ಎಲ್ಲಾ ರೀತಿಯ ಸಾಮಾನ್ಯ ಹಾಗೂ ತುರ್ತು ವಿಭಾಗದಲ್ಲಿ ಸೇವೆ ಸಲ್ಲಿಸಿ ಅನುಭವ ಹೊಂದಿರುತ್ತಾರೆ. ವಿಶೇಷವಾಗಿ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆ, ಬಿ.ಪಿ, ಮಧುಮೇಹ, ಹಾರ್ಮೋನ್ ಸಂಬಂಧಿ ಮತ್ತು ಎಲ್ಲಾ ಸಾಮಾನ್ಯ ವ್ಯಾಧಿಗಳ ತಪಾಸಣೆ ಹಾಗೂ ಚಿಕಿತ್ಸೆ ನೀಡುವಲ್ಲಿ ನುರಿತರಾಗಿರುತ್ತಾರೆ ಹಾಗೂ ವೈದ್ಯರ ಸಂದರ್ಶನ ಪಡೆಯಲು

ಮುಂಚಿತವಾಗಿ ಅಪ್ಪೋಯಿಂಟ್ಮೆಂಟ್ ಪಡೆದುಕೊಳ್ಳಲು ಆತ್ರೇಯ ಮಲ್ಟಿಸ್ಪೆಷಲಿಟಿ ಕ್ಲಿನಿಕ್ ನ ಚೀಫ್ ಫಿಸಿಷಿಯನ್ ಮತ್ತು ಆಯುರ್ವೇದ ತಜ್ಞರು ಡಾ. ಸುಜಯ್ ತಂತ್ರಿ, ಕೆಮ್ಮಿಂಜೆ ಯವರು ತಿಳಿಸಿರುತ್ತಾರೆ.
ಅಪ್ಪೋಯಿಂಟ್ಮೆಂಟ್ ಪಡೆಯಲು ಕರೆ ಮಾಡಿ-
9036156242/9844638242

Continue Reading
Click to comment

Leave a Reply

Your email address will not be published. Required fields are marked *

Advertisement