Published
8 months agoon
By
Akkare Newsಪುತ್ತೂರು: ಪುತ್ತೂರಿನಿಂದ ವಿಟ್ಲಕ್ಕೆ ಮತ್ತು ಬಿಸಿ ರೋಡ್ ನಿಂದ ವಿಟ್ಲ ಆಗಿ ಪುತ್ತೂರು ರಿಗೆ ಸಂಚರಿಸುತ್ತಿದ್ದ ಕೆಎಸ್ಆರ್ ಟಿಸಿ ಬಸ್ ಕಳೆದ ನಾಲ್ಕು ತಿಂಗಳಿಂದ ಸಂಚಾರವನ್ನು ರದ್ದು ಮಾಡಲಾಗಿದ್ದು ಬಸ್ ವ್ಯವಸ್ಥೆ ಪುನರಾರಂಭ ಮಾಡಬೇಕಂದು ಶಾಸಕರಿಗೆ ವಿಟ್ಲಭಾಗದ ವಕೀಲರು ಮನವಿಮಾಡಿದ್ದಾರೆ.
ಸಂಜೆ 7 ಮತ್ತು ಬೆಳಿಗ್ಗೆ 8:50ಕ್ಕೆ ಬಿಸಿರೋಡಿಂದ ವಿಟ್ಲ ಮಾರ್ಗವಾಗಿ ಪುತ್ತೂರಿಗೆ ಬರುತ್ತಿದ್ದ ಬಸ್ಸು ಕಳೆದ ನಾಲ್ಕು ತಿಂಗಳಿಂದ ಸಂಚಾರ ನಿಲ್ಲಿಸಲಾಗಿದೆ ಎಂದು ಶಾಸಕರಿಗೆ ತಿಳಿಸಿದರು. ಈ ಬಗ್ಗೆ ಕೆಎಸ್ ಆರ್ ಟಿಸಿ ಅಧಿಕಾರಿಗಳ ಬಳಿ ಮಾಹಿತಿ ಪಡೆದ ಶಾಸಕರು ಎರಡು ದಿನದೊಳಗೆ ವ್ಯವಸ್ಥೆ ಸರಿಪಡಿಸುವಂತೆ ಸೂಚನೆನೀಡಿದರು.
ಈ ಸಂದರ್ಬದಲ್ಲಿ ವಕೀಲರಾದ ಅಶೋಕ್ ಸಿ ಎಚ್, ಸುಪ್ರಿತಾ, ಚಂದ್ರಹಾಸ,ಸಂತೋಷ್ ಕೆ ಆರ್ ಉಪಸ್ಥಿತರಿದ್ದರು.