ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿಪ್ರಾಯ

ಶಾಂತಿಮೊಗರು ಕಿಂಡಿ ಅಣೆಕಟ್ಟಿನಲ್ಲಿ ನೀರು ಸೋರಿಕೆ ತಡೆಯುವಂತೆ ಅಗ್ರಹಿಸಿ ಪ್ರತಿಭಟನೆ: ಒಂದು ವಾರದ ಸಮಯವಕಾಶ ಕೊಡಿ ಎಂದ ತಹಸೀಲ್ದಾರ್

Published

on

ಕುದ್ಮಾರು ಶಾಂತಿಮೊಗರು ಸೇತುವೆ ಸಮೀಪ ಕುಮಾರಧಾರ ನದಿಗೆ ಅಣೆಕಟ್ಟಿಗೆ ಕಿಡಿಗೇಡಿಗಳ ಕೃತ್ಯದಿಂದಾಗಿ ನದಿ ಬರಿದಾಗಿದೆ. ಸಮಯಕ್ಕೆ ಸರಿಯಾಗಿ ಹಲಗೆ ಜೋಡಣೆ ಮಾಡದೇ ಕೃಷಿಕರಿಗೆ ಅನ್ಯಾಯ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಸ್ಥರ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ಅಗ್ರಹಿ ಶಾಂತಿಮೊಗರು ಸೇತುವೆ ಬಳಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆದಿದೆ.

ಸುಮಾರು 7.5 ಕೋಟಿ ರೂ ಗಳಲ್ಲಿ ಪಶ್ಚಿಮವಾಹಿನಿ ಯೋಜನೆಯ ಸಣ್ಣ ನೀರಾವರಿ ಇಲಾಖೆಯಡಿಯಲ್ಲಿ ನಿರ್ಮಾಣವಾಗಿರುವ ಕಿಂಡಿ ಅಣೆಕಟ್ಟು ಕಿಡಿಗೇಡಿಗಳ ಕೃತ್ಯದಿಂದಾಗಿ ನದಿ ಬರಿದಾಗಿದೆ. ಕಳೆದ ಬಾರಿಯೂ ಅಣೆಕಟ್ಟಿಗೆ ಹಲಗೆ ಜೋಡಿಸುವ ಕಾರ್ಯ ವಿಳಂಬವದಾದ್ದರಿಂದ ಕೃಷಿಕರಿಗೆ ಬಹಳ ಅನಾನುಕೂಲವಾಗಿತ್ತು. ಈ ವರ್ಷವೂ ಕಿಂಡಿ ಅಣೆಕಟ್ಟಿನ ಹಲಗೆಯನ್ನು ಕಿಡಿಗೇಡಿಗಳು ವಿರೂಪಗೊಳಿಸಿದ್ದರಿಂದ ನೀರು ಸೋರುವಿಕೆಯಿಂದಾಗಿ ಫಲಾನುಭವಿಗಳಿಗೆ ತೊಂದರೆಯಾಗುತ್ತಿದೆ.

ತಕ್ಷಣ ಯಾವೂದೆ ಸಬೂಬು ನೀಡದೆ ತಕ್ಷಣ ಹಲಗೆ ಸರಿಪಡಿಸಬೇಕು ಇಲ್ಲವಾದಲ್ಲಿ ಉಗ್ರಹೋರಾಟ ಕೈಗೊಳ್ಲಲಾಗುವುದು. ಈ ವೇಳೆ ಯಾವುದೆ ಅಹಿತಕರ ಘಟನೆ ನಡೆದರೆ ಸಂಬಂಧಪಟ್ಟ ಅಧಿಕಾರಿಗಳು ಹೊಣೆಯಾಗುತ್ತಾರೆ.

ಜನರ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸಬೇಕೆಂದು ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಪ್ರವೀಣ್ ಕುಮಾರ್ ಕೆಡೆಂಜಿ, ಬಿಜೆಪಿ ಮುಖಂಡ ರಾಕೇಶ್ ರೈ ಕೆಡೆಂಜಿ, ಕೃಷಿಕ ರಾಜರಾಮ್ ಭಟ್ ಅಗ್ರಹಿಸಿದರು.

ಆರಂಭದಲ್ಲಿ ಶಾಂತಿಮೊಗರು ಸೇತುವೆಯ ಬಳಿ ಪ್ರತಿಭಟನಾಕಾರರು ಜಮಾಯಿಸಿದರು. ಈ ವೇಳೆ ಪ್ರಮುಖರು ಪ್ರತಿಭಟನೆ ಉದ್ದೆಶಿಸಿ ಮಾತನಾಡಿದರು. ಬಳಿಕ ಕೆಲ ಕಾಲ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು







ಕಡಬ ತಹಶೀಲ್ದಾರ ಸ್ಥಳಕ್ಕೆ ಅಗಮಿಸಿ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವುದಾಗಿ ಹೇಳಿದರು. ಈ ಉತ್ತರಕ್ಕೆ ಅಕ್ರೋಶ ವ್ಯಕ್ತಪಡಿಸಿದ ಪ್ರತಿಭಟನೆಕಾರರು ತಕ್ಷಣಕ್ಕೆ ಸರಿಪಡಿಸಿಕೊಡಬೇಕೆಂದು ಅಗ್ರಹಿಸಿದರು. ತಾಲೂಕು ದಂಡಧಿಕಾರಿಯುವುದರಿಂದ ತಾವು ತಕ್ಷಣಕ್ಕೆ ಕ್ರಮಕೈಗೊಳ್ಳಬೇಕು. ಇಲ್ಲವಾದರೆ ಪ್ರತಿಭಟನೆ ರೂಪ ಮುಂದಿನ ದಿನಗಳಲ್ಲಿ ತೀವೃಸ್ವರೂಪ ಪಡೆಯಲಿದೆ. ಸ್ಥಳದಲ್ಲಿ ಸೂಕ್ತ ಪರಿಹಾರ ನೀಡಿ ಎಂದರು. ಮುಂದಿನ ವಾರದೊಳಗೆ ಸಂಬಂದಪಟ್ಟವರ ಸಭೆ ಕರೆದು ದುರಸ್ತಿಪಡಿಸಲಾಗುವುದು ಎಂದು ತಹಸೀಲ್ದಾರರು ತಿಳಿಸಿದರು. ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.

ಕಾಣಿಯೂರು, ಬೆಳಂದೂರು,ಚಾರ್ವಾಕ,ಸವಣೂರು,ಆಲಂಕಾರು ,ಪೆರಾಬೆ ಮೊದಲಾದ ಗ್ರಾಮಗಳ ಪ್ರಮುಖರು,‌ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದರು. ಕಡಬ ಪೊಲೀಸರು ಬಂದೊಬಸ್ತು ಒದಗಿಸಿದರು. ಹೋರಾಟ ಮುಖಂಡ ಜನಾರ್ದನ ಕಯ್ಯಪೆ ಪ್ರಸ್ತಾವಿಸಿ ಸ್ವಾಗತಿಸಿದರು

Continue Reading
Click to comment

Leave a Reply

Your email address will not be published. Required fields are marked *

Advertisement