Published
7 months agoon
By
Akkare Newsಕಲಬುರಗಿ: ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿಯೋರ್ವಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಯುವತಿ ಕಲಬುರಗಿ ನಗರ ಹೊರವಲಯದ ಯಲ್ಲಾಲಿಂಗ್ ಕಾಲೋನಿಯಲ್ಲಿ ಬಾಡಿಗೆ ರೂಂನಲ್ಲಿ ವಾಸವಾಗಿದ್ದ ಯುವತಿ ಪುಷ್ಪಾ(26) ಎಂದು ತಿಳಿದು ಬಂದಿದೆ.
ಪುಷ್ಪಾ ನಾಲ್ಕು ವರ್ಷಗಳಿಂದ ಗಾಂಧಿನಗರ ನಿವಾಸಿ ಕಿರಣ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಕಳೆದ ಕೆಲ ದಿನಗಳಿಂದ ಪುಷ್ಪಾ ತನ್ನ ಪ್ರಿಯಕರ ಕಿರಣ್ ಗೆ ಮದುವೆ ಮಾಡಿಕೋ ಎಂದು ಒತ್ತಾಯ ಮಾಡ್ತಿದ್ದಳು. ಆದರೆ ಪುಷ್ಪಾ ಹಾಗೂ ಕಿರಣ್ ಜಾತಿ ವಿಚಾರ ಅಡ್ಡ ಬಂದಿತ್ತು.
ಅನ್ಯ ಜಾತಿ ಹಿನ್ನೆಲೆ ಯುವತಿ ಮದುವೆಗೆ ಕಿರಣ್ ಮನೆಯವರು ನಿರಾಕರಿಸಿದ್ದರು. ಹೀಗಾಗಿ ಕಿರಣ್ ಕೂಡ ಈಗಲೇ ಮದುವೆ ಬೇಡವೆಂದು ಪುಷ್ಪಾಗೆ ಸಮಾಧಾನ ಮಾಡಿದ್ದರು. ಆದರೆ ಇದರಿಂದ ಮನನೊಂದ ಪುಷ್ಪಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.