Published
11 months agoon
By
Akkare Newsಬೆಳ್ತಂಗಡಿ: ಬುಧವಾರ ಸಂಜೆ ಬೆಳ್ತಂಗಡಿ, ಅಳದಂಗಡಿ, ನಾರಾವಿ, ಕುದ್ಯಾಡಿ, ಮರೋಡಿಯಲ್ಲಿ ಮಳೆಯೊಂದಿಗೆ ಬೀಸಿದ ಗಾಳಿಯ ಪರಿಣಾಮ ವಿದ್ಯುತ್ ಕಂಬಗಳು ಹಾಗೂ ಪರಿವರ್ತಕ ನೆಲಕ್ಕುರುಳಿ ಮೆಸ್ಕಾಂಗೆ ಸುಮಾರು ₹ 5 ಲಕ್ಷ ನಷ್ಟ ಉಂಟಾಗಿದೆ.
ಬೆಳ್ತಂಗಡಿ ಮೆಸ್ಕಾಂ ಉಪ ವಿಭಾಗದ ನಾರಾವಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ 4 ಎಚ್.ಟಿ, 7 ಎಲ್.ಟಿ ಕಂಬಗಳು ಮುರಿದುಬಿದ್ದು ಪರಿಸರದಲ್ಲಿ ವಿದ್ಯುತ್ ಪೂರೈಕೆ ಅಸ್ತವ್ಯಸ್ತವಾಯಿತು.
ನಾರಾವಿಯ ಮರೋಡಿ ರಸ್ತೆಯಲ್ಲಿ 25 ಕೆ.ವಿ ಸಾಮರ್ಥ್ಯದ ಪರಿವರ್ತಕ ನೆಲಕ್ಕುರುಳಿದೆ. ಪರಿವರ್ತಕ ಅಳವಡಿಸಿದ್ದ ಕಂಬಗಳು ಮುರಿದುಬಿದ್ದವು. ವಿದ್ಯುತ್ ವ್ಯತ್ಯಯ ಉಂಟಾದ ಕಡೆ ಮರು ಸಂಪರ್ಕ ಕಾಮಗಾರಿ ಕೈಗೊಳ್ಳಲಾಗಿದೆ.
ಬೆಳ್ತಂಗಡಿ ಸಂತೆಕಟ್ಟೆಯ ಕುತ್ಯಾರು ರಸ್ತೆಯಲ್ಲಿ ಬುಧವಾರ ರಾತ್ರಿ ವಿದ್ಯುತ್ ತಂರಿ ಮೇಲೆ ಮರ ಬಿದ್ದಿದೆ. ಮೆಸ್ಕಾಂ ಸಿಬ್ಬಂದಿ ಮರ ತೆರೆವುಗೊಳಿಸಿ ವಿದ್ಯುತ್ ಪೂರೈಕೆಗೆ ನೆರವಾದರು.