Published
7 months agoon
By
Akkare Newsಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ವಾಣಿಜ್ಯ ಕಟ್ಟಡಗಳಿಗೆ ಪಾರ್ಕಿಂಗ್ ಸ್ಥಳ ಇಲ್ಲದ ಕಟ್ಟಡಗಳು ಎಷ್ಟು…!???
ಪುತ್ತೂರು ನಗರ ದರ್ಬೆ ಬನ್ನೂರು ಪ್ರದೇಶದಲ್ಲಿ ಎಷ್ಟು ಕಟ್ಟಡಗಳಿಗೆ ಡೋರ್ ನಂಬರ್ ನೀಡಿದ್ದೀರಿ..!?
ರಾಜಕೀಯ ಮುಖಂಡರೊಂದಿಗೆ ಅಧಿಕಾರಿಗಳು ಶಾಮೀಲು ಆಗಿದ್ದಾರೆಯೇ…!?
ಪುತ್ತೂರು ನಗರದ ಬನ್ನೂರು, ದರ್ಬೆ, ನಗರ ಪ್ರದೇಶದಲ್ಲಿ ನಗರಸಭೆ ಅಧಿಕಾರಿಗಳು ಮತ್ತು ರಾಜಕೀಯ ಮುಖಂಡರು ಸೇರಿ ವಿವಿಧ ಕಟ್ಟಡಗಳಿಗೆ ವಾಹನ ಪಾರ್ಕಿಂಗ್ ಇಲ್ಲದೆ ಇದ್ದರೂ ಕೂಡ ಕಟ್ಟಡಕ್ಕೆ ಡೋರ್ ನಂಬರ್ ಹೇಗೆ ನೀಡಿದ್ದೀರಿ?ಸರಕಾರದ ಅಧಿಸೂಚನೆಯನ್ನೇ ಬದಲಾವಣೆ ಮಾಡಿ, ಕಾನೂನು ರೀತಿಯಲ್ಲಿ ಕಟ್ಟಿದ ಕಟ್ಟಡಕ್ಕೆ ಅಧಿಕಾರಿಗಳು ಪರವಾನಿಗೆ ಕೊಟ್ಟರು ಡೋರ್ ನಂಬರ್ ನೀಡದೆ, ಮಾಲೀಕರಿಗೆ ವಿನಾಕಾರಣ ತೊಂದರೆಯನ್ನು ರಾಜಕೀಯ ಮುಖಂಡರ ಒಟ್ಟಿಗೆ ಸೇರಿ ಕೊಡುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ.
ಪುತ್ತೂರು ನಗರಸಭೆಯ ಅಧಿಕಾರಿಗಳು ಕಾನೂನು ರೀತಿಯಲ್ಲಿ ಕೆಲಸ ಮಾಡದೆ ರಾಜಕೀಯ ಮುಖಂಡರು ಒಟ್ಟಿಗೆ ಸೇರಿ ತೊಂದರೆ ಕೊಡುವಂತಗಿದೆ , ಪುತ್ತೂರು ನಗರ ಪ್ರದೇಶದಲ್ಲಿ ಕಾನೂನು ಮೀರಿ ಎಷ್ಟು ಕಟ್ಟಡಗಳಿವೆ? ಮತ್ತು ಪಾರ್ಕಿಂಗ್ ಇಲ್ಲದ ಎಷ್ಟು ಕಟ್ಟಡಗಳಿಗೆ ಡೋರ್ ನಂಬರ್ ನೀಡಿದ್ದೀರಿ? ಇದರ ಬಗ್ಗೆ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲು ಸಾರ್ವಜನಿಕರು ಆಗ್ರಹ ಮಾಡಿದ್ದಾರೆ ಇದರ ಬಗ್ಗೆ ಸಂಬಂಧಪಟ್ಟ ಕಟ್ಟಡ ಮಾಲೀಕರು ಮೇಲಾಧಿಕಾರಿಗಳಿಗೆ ದೂರು ನೀಡಿ ಅಧಿಕಾರಿಯನ್ನು ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಮತ್ತು ಅಧಿಕಾರಿಗಳೊಂದಿಗೆ ಸೇರಿ ಕಟ್ಟಡ ಮಾಲೀಕರಿಗೆ ಹಿಂಸೆ ನೀಡುವ ರಾಜಕೀಯ ಮುಖಂಡರನ್ನು ಕೂಡಲೇ ಪಕ್ಷದಿಂದ ವಜಾ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯ ಮಾಡಿರುತ್ತಾರೆ.