ಮಂಗಳೂರು: ರಸ್ತೆಯೊಂದರಲ್ಲಿ ನಮಾಝ್ ಮಾಡಿದ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಕರ್ನಾಟಕ ಸರಕಾರ ಮತ್ತು ಪೊಲೀಸ್ ಇಲಾಖೆಯು ದ್ವಿಮುಖ ನೀತಿಯನ್ನು ಅನುಸರಿಸುತ್ತಿದೆ ಎಂದು ಎಸ್ಕೆಎಸ್ಸೆಸ್ಸೆಫ್ ದ.ಕ ಜಿಲ್ಲಾ ವೆಸ್ಟ್ ಸಮಿತಿಯು ಆರೋಪಿಸಿದೆ.
ನಗರದ ಕಂಕನಾಡಿಯ ಮಸೀದಿಯಲ್ಲಿ ಶುಕ್ರವಾರದ ನಮಾಝ್ ಗೆ ಸ್ಥಳವಕಾಶದ ಕೊರತೆಯಿಂದ ಅನಿವಾರ್ಯವಾಗಿ ರಸ್ತೆಯಲ್ಲಿ 5 ನಿಮಿಷ ನಮಾಝ್ ಮಾಡಿದರು ಎಂಬ ಕಾರಣಕ್ಕೆ ಕೋಮು ವಿಷಬೀಜ ಬಿತ್ತಲು ಕೆಲವು ಕೋಮುವಾದಿ ಫ್ಯಾಶಿಸ್ಟ್ ಶಕ್ತಿಗಳು ಪ್ರಯತ್ನ ನಡೆಸುವುದು ಕಂಡುಬರುತ್ತಿದೆ.
ಜಿಲ್ಲೆಯಲ್ಲಿ ಕೆಲವು ಧರ್ಮದ ಉತ್ಸವಗಳ ಸಂದರ್ಭ ಕಿಲೋ ಮೀಟರ್ ಗಟ್ಟಲೆ ರಸ್ತೆ ತಡೆ ನಡೆಸಿದಾಗ ಮತ್ತು ಇತ್ತೀಚೆಗೆ ಮಂಗಳೂರು ರೈಲು ನಿಲ್ದಾಣದಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿ ಕಾರ್ಯಕ್ರಮ ನಡೆಸಿದವರ ಮೇಲೆ ಸುಮೊಟೊ ಕೇಸು ದಾಖಲಿಸದ ಕರ್ನಾಟಕ ಸರ್ಕಾರ ಮತ್ತು ಪೊಲೀಸ್ ಇಲಾಖೆಯ ದ್ವಿಮುಖ ನೀತಿ ಖಂಡನೀಯ ಎಂದು ಎಸ್ಕೆಎಸ್ಸೆಸ್ಸೆಫ್ ದ.ಕ ಜಿಲ್ಲಾ ವೆಸ್ಟ್ ಸಮಿತಿಯು ತೀವ್ರವಾಗಿ ಖಂಡಿಸಿದೆ.
ಸರ್ಕಾರ ಮತ್ತು ಪೊಲೀಸ್ ಇಲಾಖೆ ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣಬೇಕು. ಈಗಾಗಲೇ ಮಸೀದಿಯ ವಿರುದ್ಧ ದಾಖಲಿಸಿರುವ ಸುಮೊಟೊ ಪ್ರಕರಣವನ್ನು ಕೂಡಲೇ ಹಿಂಪಡೆಯಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದೆ.