Published
7 months agoon
By
Akkare Newsಪುತ್ತೂರು: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಬಿಲ್ಲವ ಗ್ರಾಮ ಸಮಿತಿ ಮತ್ತು ಬಿಲ್ಲವ ಮಹಿಳಾ ವೇದಿಕೆ ಕೋಡಿಂಬಾಡಿ ಇದರ ವಾರ್ಷಿಕ ಮಹಾಸಭೆ ಹಾಗೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ ಜೂ.2ರಂದು ಕೋಡಿಂಬಾಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.ಗ್ರಾಮ ಸಮಿತಿ ಅಧ್ಯಕ್ಷರಾಗಿರುವ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ಅಶೋಕ್ ಪೂಜಾರಿ ಕಾಂತಳಿಕೆ, ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕ ಸಂತೋಷ್ ಕುಮಾರ್ ಶಾಂತಿನಗರ, ಪುತ್ತೂರು ವೆಲ್ನೆಸ್ ಸೆಂಟರ್ ಮಾಲಕ ಪ್ರಭಾಕರ ಸಾಲ್ಯಾನ್ ಬಾಕಿಲಗುತ್ತು, , ವಿಮಲ ಸುರೇಶ್, ಕಾರ್ಯದರ್ಶಿ ಚಿದಾನಂದ ಸುವರ್ಣ ಗೆಣಸಿನಕುಮೇರು, , ಕೋಶಾಧಿಕಾರಿ ಬಿ.ಟಿ.ಮಹೇಶ್ಚಂದ್ರ ಸಾಲ್ಯಾನ್, ಗುರುಮಂದಿರದ ಕಾರ್ಯ ನಿರ್ವಹಣಾಧಿಕಾರಿ ಉದಯ ಕುಮಾರ್ ಕೋಲಾಡಿ, ವಲಯ ಸಂಚಾಲಕ ಅಣ್ಣಿ ಪೂಜಾರಿ, ಪುತ್ತೂರು ಯುವವಾಹಿನಿ ಘಟಕದ ಅಧ್ಯಕ್ಷ ಜಯರಾಮ ಬಿ.ಎನ್. ಮತ್ತು ಗ್ರಾಮ ಸಮಿತಿಯ ಗೌರವಾಧ್ಯಕ್ಷರಾದ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಕೆ. ಜಯಾನಂದ ಶುಭ ಹಾರೈಸಿದರು.
ಗ್ರಾಮ ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ಪ್ರೇಮಲತಾ ದೇವದಾಸ ಪೂಜಾರಿ ಡೆಕ್ಕಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶೇಖರ ಪೂಜಾರಿ ನಿಡ್ಯ ಮತ್ತು ವಿನುತಾ ಜಯಪ್ರಕಾಶ್ ಬದಿನಾರು ಕಾರ್ಯಕ್ರಮ ನಿರೂಪಿಸಿದರು. ನ್ಯಾಯವಾದಿ ಕುಮಾರನಾಥ ಎಸ್. ವಂದಿಸಿದರು. ಪ್ರದ್ವಿನ್ ಬದಿನಾರು ಪ್ರಾರ್ಥಿಸಿದರು. ಗ್ರಾಮ ಸಮಿತಿ ಕಾರ್ಯದರ್ಶಿ ಈಶ್ವರ ಪೂಜಾರಿ ನಿಡ್ಯ, ಶ್ರೀಧರ ಪೂಜಾರಿ ಕೆದಿಕಂಡೆ, ಭರತ್ ಕುಮಾರ್ ಶಾಂತಿನಗರ, ವಿಜಯ ಕುಮಾರ್ ಚೀಮುಳ್ಳು ಮತ್ತಿತರರು ಸಹಕರಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಸಮಿತಿ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.