Published
7 months agoon
By
Akkare Newsಪುತ್ತೂರು: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಬಿಲ್ಲವ ಗ್ರಾಮ ಸಮಿತಿ ಮತ್ತು ಬಿಲ್ಲವ ಮಹಿಳಾ ವೇದಿಕೆ ಕೋಡಿಂಬಾಡಿ ಇದರ ವಾರ್ಷಿಕ ಮಹಾಸಭೆ ಹಾಗೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ ಜೂ.2ರಂದು ಕೋಡಿಂಬಾಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಗ್ರಾಮ ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ಪ್ರೇಮಲತಾ ದೇವದಾಸ ಪೂಜಾರಿ ಡೆಕ್ಕಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶೇಖರ ಪೂಜಾರಿ ನಿಡ್ಯ ಮತ್ತು ವಿನುತಾ ಜಯಪ್ರಕಾಶ್ ಬದಿನಾರು ಕಾರ್ಯಕ್ರಮ ನಿರೂಪಿಸಿದರು. ನ್ಯಾಯವಾದಿ ಕುಮಾರನಾಥ ಎಸ್. ವಂದಿಸಿದರು. ಪ್ರದ್ವಿನ್ ಬದಿನಾರು ಪ್ರಾರ್ಥಿಸಿದರು. ಗ್ರಾಮ ಸಮಿತಿ ಕಾರ್ಯದರ್ಶಿ ಈಶ್ವರ ಪೂಜಾರಿ ನಿಡ್ಯ, ಶ್ರೀಧರ ಪೂಜಾರಿ ಕೆದಿಕಂಡೆ, ಭರತ್ ಕುಮಾರ್ ಶಾಂತಿನಗರ, ವಿಜಯ ಕುಮಾರ್ ಚೀಮುಳ್ಳು ಮತ್ತಿತರರು ಸಹಕರಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಸಮಿತಿ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.