ಲೋಕಸಭೆ ಚುನಾವಣೆಯ ಎಕ್ಸಿಟ್ ಪೋಲ್ ಸಮೀಕ್ಷೆ ವಿಫಲವಾದ ಹಿನ್ನೆಲೆ ‘ಆಕ್ಸಿಸ್ ಮೈ ಇಂಡಿಯಾ’ ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಗುಪ್ತಾ ಲೈವ್ ಟಿವಿಯಲ್ಲಿ ಕಣ್ಣೀರಿಟ್ಟಿದ್ದಾರೆ.ಈ ಬಾರಿಯ ಚುನಾವಣೆಯಲ್ಲಿ ಎನ್‌ಡಿಎ ಒಕ್ಕೂಟ 361-401 ಸ್ಥಾನಗಳು, ಇಂಡಿಯಾ ಮೈತ್ರಿಕೂಟ 131-166 ಸ್ಥಾನಗಳು ಮತ್ತು ಇತರರು 8-20 ಸ್ಥಾನಗಳನ್ನು ಗೆಲ್ಲಬಹುದು ಎಂದು ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಸಮೀಕ್ಷೆಯಲ್ಲಿ ಹೇಳಿತ್ತು.
ಆದರೆ, ಎಕ್ಸಿಟ್ ಪೋಲ್ ಸಂಪೂರ್ಣ ತಲೆಕೆಳಗಾಗಿದೆ. ಇದುವರೆಗಿನ ಮತ ಎಣಿಕೆಯ ಪ್ರಕಾರ, ಎನ್‌ಡಿಎ ಒಕ್ಕೂಟ 293, ಇಂಡಿಯಾ ಮೈತ್ರಿಕೂಟ 233 ಮತ್ತು ಇತರರು 17 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಹಾಗಾಗಿ, ಇಂಡಿಯಾ ಟುಡೇ ವಾಹಿನಿಯ ಲೈವ್ ಟಿವಿ ಡಿಬೇಟ್‌ನಲ್ಲಿ ಪ್ರದೀಪ್ ಗುಪ್ತಾ ಕಣ್ಣೀರಿಟ್ಟಿದ್ದಾರೆ.