Published
12 months agoon
By
Akkare Newsಪುತ್ತೂರು :ತಾಲ್ಲೂಕಿನ ವಿವಿಧೆಡೆ ಶನಿವಾರ ಭಾರಿ ಮಳೆಯಾಗಿದ್ದು, ನಿಡ್ಪಳ್ಳಿ ಗ್ರಾಮದಲ್ಲಿ ದೇವಸ್ಥಾನವೊಂದರ ಮುಂಭಾಗದ ಅಂಗಣದ ಬದಿಯ ಆವರಣಗೋಡೆ ಕುಸಿದಿದೆ.ಪುತ್ತೂರು ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಶನಿವಾರ ಬೆಳಿಗ್ಗೆ ಆರಂಭಗೊಂಡ ಜಡಿ ಮಳೆ ಸಂಜೆ ವರೆಗೂ ಮುಂದುವರಿದಿತ್ತು.ನಿಡ್ಪಳ್ಳಿಯಲ್ಲಿರುವ ಶಾಂತದುರ್ಗಾ ದೇವಸ್ಥಾನದ ಅಂಗಣದ ಬದಿ ರಸ್ತೆ ಪಕ್ಕದಲ್ಲಿ ಕೆಂಪು ಕಲ್ಲಿನಿಂದ ನಿರ್ಮಿಸಿದ್ದ ಆವರಣಗೋಡೆ ಸಂಪೂರ್ಣವಾಗಿ ಕುಸಿದಿದೆ.