Published
6 months agoon
By
Akkare Newsಪೋಕ್ಸೊ ಪ್ರಕರಣದಲ್ಲಿ ಬಿಜೆಪಿ ನಾಯಕ ಬಿ ಎಸ್ ಯಡಿಯೂರಪ್ಪ ಅವರಿಗೆ ಜಾಮೀನು ರಹಿತ ವಾರಂಟ್ ಜಾರಿಯಾಗಿದೆ. ಅವರು ಬೇಗ ಬಂದರೆ ಒಳ್ಳೆಯದು. ಇಲ್ಲದಿದ್ದರೆ ಪೊಲೀಸರು ಅವರನ್ನು ಕರೆದುಕೊಂಡು ಬರುತ್ತಾರೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಶುಕ್ರವಾರ ಮಾತನಾಡಿ, “ಪ್ರಕರಣ ಸಂಬಂಧ ಪೊಲೀಸರು ಯಡಿಯೂರಪ್ಪರಿಂದ ಮಾಹಿತಿ ಪಡೆಯಲಿದ್ದಾರೆ. ನಂತರ ಕಾನೂನು ಪ್ರಕಾರವೇ ಕ್ರಮತೆಗೆದುಕೊಳ್ಳುತ್ತಾರೆ” ಎಂದರು.
“ಯಡಿಯೂರಪ್ಪ ದೆಹಲಿಯಲ್ಲಿ ಇದ್ದಾರೆ ಎನ್ನುತ್ತಿದ್ದಾರೆ. ಸೋಮವಾರ ಬರೋದಾಗಿ ಅವರು ಹೇಳಿದ್ದಾರೆ. ಬಿಜೆಪಿಯವರು ಸುಮ್ಮನೆ ಕಥೆ ಕಟ್ಟುತ್ತಿದ್ದಾರೆ. ಇದರಲ್ಲಿ ರಾಹುಲ್ ಗಾಂಧಿ ಏಕೆ ಭಾಗಿಯಾಗುತ್ತಾರೆ ಹೇಳಿ? ಇದರಲ್ಲಿ ರಾಹುಲ್ ಗಾಂಧಿ ಭಾಗಿ ಆಗಿಲ್ಲ. ಸೇಡಿನ ರಾಜಕಾರಣ ಬಿಜೆಪಿ ಮಾತ್ರ ಮಾಡುತ್ತೆ” ಎಂದು ಹೇಳಿದರು.
ಪೊಲೀಸ್ ಠಾಣೆಯಲ್ಲಿ ದರ್ಶನ್ಗೆ ರಾಜಾತಿಥ್ಯ ಆರೋಪ ಕುರಿತು ಮಾತನಾಡಿ, “ಆರೋಪಿಗೆ ರಾಜಾತಿಥ್ಯ ಕೊಡಲು ಸಾಧ್ಯವಿಲ್ಲ. ತನಿಖೆ ಮಾಡಲು ಪೊಲೀಸರಿಗೆ ಮುಕ್ತ ಅವಕಾಶ ಕೊಡಲಾಗಿದೆ. ಜನರ ಹಿತದೃಷ್ಟಿಯಿಂದ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಹೇಳುತ್ತೇನೆ. ಬಿರಿಯಾನಿ ಕೊಟ್ಟ ಬಗ್ಗೆಯೂ ನಾನು ಪೊಲೀಸರಿಗೆ ಕೇಳಿದೆ, ಹಾಗೇನೂ ಇಲ್ಲ” ಎಂದಿದ್ದಾರೆ.