ಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಕಲೆ - ಸಾಹಿತ್ಯ ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ತಂತ್ರಜ್ಞಾನ ಮಂಗಳೂರು ಮನೋರಂಜನೆ ಮಾಹಿತಿ ಮುಂದಿನ ಕಾರ್ಯಕ್ರಮ ವಾಣಿಜ್ಯ ಶುಭಾರಂಭ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸಿನಿಮಾ ಸ್ಥಳೀಯ
ಮಾ.1 ; ಕರಾವಳಿಗರ ಮನೆ-ಮನದ ದುಬೈ ಕಥೆ; ಪ್ರವಾಸಿ ಜೀವನಕ್ಕೆ ಜೀವ ತುಂಬಿದ ಪುರುಷ..! ''ಪುರುಷೋತ್ತಮನ ಪ್ರಸಂಗ'" ಅಮೋಘ ಆರಂಭಅಭಿನಂದನೆ ಅಭಿಪ್ರಾಯ ಅಭಿವೃದ್ಧಿ ಕಾರ್ಯಗಳು ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಕಲೆ - ಸಾಹಿತ್ಯ ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ತಂತ್ರಜ್ಞಾನ ಮನೋರಂಜನೆ ಮಾಹಿತಿ ಮುಂದಿನ ಕಾರ್ಯಕ್ರಮ ವಿಶೇಷ ವರದಿ ಸಭೆ - ಸಮಾರಂಭ ಸಾಮಾನ್ಯ ಸಿನಿಮಾ ಸ್ಥಳೀಯ
ಪುತ್ತೂರಿನ ಯುವ ನಿರ್ದೇಶಕ ಕಿಶನ್ ಬಲ್ನಾಡ್ ನಿರ್ದೇಶನದಲ್ಲಿ ಹೊಸ ಚಲನಚಿತ್ರದ ಮುಹೂರ್ತ.Published
6 months agoon
By
Akkare Newsಚಿತ್ರದುರ್ಗ: ನಟ ದರ್ಶನ್ ಪ್ರಕರಣ ಪೊಲೀಸ್ ತನಿಖೆ ಹಂತದಲ್ಲಿದೆ. ಹಾಗಾಗಿ ಚಲನಚಿತ್ರ ವಾಣಿಜ್ಯ ಮಂಡಳಿ ಆತನ ವಿಚಾರದಲ್ಲಿ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಮಾಧ್ಯಮಗಳು ದೂಷಣೆ ಮಾಡಬಾರದು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ಎನ್.ಸುರೇಶ್ ಮನವಿ ಮಾಡಿದರು.
ಕೊಲೆಯಾದ ರೇಣುಕಸ್ವಾಮಿ ಅವರ ಮನೆಗೆ ಶನಿವಾರ ಚಲನಚಿತ್ರ ವಾಣಿಜ್ಯ ಮಂಡಳಿಯ ಸದಸ್ಯರು ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, 5 ಲಕ್ಷ ರೂ. ಪರಿಹಾರದ ಚೆಕ್ ನೀಡಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು.
ಆನಂತರ ಬಿಗ್‌ಬಾಸ್ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಚಿತ್ರರಂಗದಲ್ಲಿ ಹಲವು ಸಂಸ್ಥೆಗಳಿವೆ. ವಿತರಕರು, ಕಲಾವಿದರ ಸಂಘದವರು, ನಿರ್ಮಾಪಕರು ಜೊತೆಗೆ ಚರ್ಚೆ ನಡೆಸಿ ಆದಷ್ಟು ಶೀಘ್ರದಲ್ಲೇ ಗಟ್ಟಿಯಾದ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಐತಿಹಾಸಿಕ ಚಿತ್ರದುರ್ಗದಲ್ಲಿ ಇಂಥದ್ದೊಂದು ಸುದ್ದಿಗೋಷ್ಠಿ ನಡೆಸಲು ಬಹಳ ಬೇಸರವಾಗುತ್ತಿದೆ. ರೇಣುಕಸ್ವಾಮಿ ತಪ್ಪು ಮಾಡಿರಬಹುದು. ಆದರೆ, ಆತನಿಗೆ ಕೊಟ್ಟ ಶಿಕ್ಷೆ ಬಹಳ ವಿಕಾರವಾಗಿದೆ. ಅವನು ತಪ್ಪು ಮಾಡಿದ್ದರೆ ಕಾನೂನು ಇತ್ತು. ಆ ಮೂಲಕ ಶಿಕ್ಷೆ ಕೊಡಬಹುದಾಗಿತ್ತು ಎಂದರು.
ಸುದ್ದಿಗೋಷ್ಠಿಯಲ್ಲಿ ಚಲನಚಿತ್ರ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು,ಚಿನ್ನಪ್ಪಗೌಡ್ರು, ಕರಿಸುಬ್ಬು,ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಜಿ.ವೆಂಕಟೇಶ್, ಬಾ.ಮ.ಗಿರೀಶ್, ನಿರ್ಮಾಪಕದ ಸಂಘದ ರಾಮಕೃಷ್ಣ, ಕುಶಾಲ್, ಸಿದ್ದರಾಜು, ಜಯಸಿಂಹ ಮುಸುರಿ, ಕೆ.ಎಂ.ವೀರೇಶ್, ಬಿ.ಕಾಂತರಾಜ್ ಇದ್ದರು.