Published
6 months agoon
By
Akkare Newsಕರ್ನಾಟಕ ಸರ್ಕಾರ ಶಾಲಾ ವಾಹನಗಳಿಗೆ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಈ ನಿಯಮಗಳು ಶಾಲಾ ವಾಹನಗಳಿಗೆ ಅಷ್ಟೆ ಅಲ್ಲದೆ ಶಾಲಾ ಮಕ್ಕಳನ್ನು ಸಾಗಿಸುವ ಎಲ್ಲಾ ವಾಹನಗಳಿಗೂ ಅನ್ವಯವಾಗುತ್ತದೆ. ತಕ್ಷಣವೇ ವಾಹನ ಮಾಲಿಕರು ನಿಯಮನ್ನು ಅಳವಡಿಸಿಕೊಳ್ಳಬೇಕು ಎಂದು ಸುತ್ತೋಲೆ ಹೊರಡಿಸಿದೆ.
ಕರ್ನಾಟಕ ಸರ್ಕಾರ ಹೊರಡಿಸಿರುವ ಹೊಸ ನಿಯಮಗಳ ಪ್ರಕಾರ ಶಾಲಾ ಮಕ್ಕಳನ್ನು ಸಾಗಿಸುವ ವಾಹನಗಳು ಕರ್ನಾಟಕ ರಿಜಿಸ್ಟ್ರೇಷನ್ ಹೊಂದಿರಬೇಕು. ಈ ಕ್ಯಾಬ್‌ಗಳು ಶಾಲಾ ಮಕ್ಕಳನ್ನು ಸಾಗಿಸಲು ಬಳಸಲಾಗುತ್ತಿದೆ ಎಂಬ ಪ್ರತ್ಯೇಕ ದಾಖಲೆಯನ್ನು ರಿಜಿಸ್ಟರ್ ಮಾಡಿಸಿಕೊಳ್ಳಬೇಕು. ಈ ದಾಖಲೆಯನ್ನು ಪೋಷಕರು ಅಥವಾ ಶಾಲೆಯ ಆಡಳಿತ ಮಂಡಳಿಯಿಂದ ಪಡೆದುಕೊಳ್ಳಬಹುದು. ನಂತರ ಈ ಪತ್ರವನ್ನು ನೀಡಿ ತಮ್ಮ ವಾಹನವನ್ನು ನೋಂದಾಯಿಸಲು ನೋಂದಣಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು ಎಂದು ಹೇಳಲಾಗಿದೆ.
ಮೋಟಾರು ವಾಹನಗಳ ಕಾಯಿದೆ, 1988 ರ ಸೆಕ್ಷನ್ 96(2) ಮತ್ತು 212 ರ ಅಧಿಕಾರದ ಅಡಿಯಲ್ಲಿ ಶಾಲಾ ಮಕ್ಕಳ ಸುರಕ್ಷತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಈ ತಿದ್ದುಪಡಿಗಳನ್ನು ಮಾಡಲಾಗಿದೆ. ಇದಷ್ಟೇ ಅಲ್ಲದೆ ಶಾಲಾ ಮಕ್ಕಳ ಸಂಚಾರದ ಸಮಸ್ಯೆಗಳ ಕುರಿತು ಪೋಷಕರು ಹಾಗೂ ಚಾಲಕರ ಜೊತೆ ಮಂಡಳಿ ಆಗಾಗ ಸಭೆ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.