ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಜೈಲಿನಲ್ಲೂ ಮೇಕಪ್ ಬಿಡದ ಪವಿತ್ರ ಗೌಡ..!!!ಲಿಫ್ಟಿಕ್ ನೀಡಿದ ಪಿ ಎಸ್ ಐ ..ಕರ್ತವ್ಯ ಲೋಪದಡಿಯಲ್ಲಿ ಪಿ ಎಸ್ ಐ ಗೆ ನೋಟೀಸ್!!

Published

on

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದು,  ಎ1 ಆರೋಪಿ ಪವಿತ್ರಾ ಗೌಡಗೆ ಲಿಪ್ ಸ್ಟಿಕ್ ನೀಡಿದ್ದ ಪಿಎಸ್ ಐಗೆ ಇದೀಗ ಸಂಕಷ್ಟ ಎದುರಾಗಿದೆ.

ವಿಜಯನಗರ ಠಾಣೆಯ ಮಹಿಳಾ ಪಿಎಸ್ ಐ ಓರ್ವರಿಗೆ ಕರ್ತವ್ಯ ಲೋಪ ಆರೋಪದಲ್ಲಿ ನೋಟಿಸ್ ನೀಡಲಾಗಿದೆ. ಮಹಿಳಾ ಪಿ ಎಸ್ ಐ ಆರೋಪಿ ಪವಿತ್ರಾಗೌಡಗೆ ಹಚ್ಚಲು ಲಿಪ್ ಸ್ಟಿಕ್ ನೀಡಿದ್ದರು ಎಂಬ ಆರೋಪ ಕೇಳಿಬಂದಿದೆ.

 

ಜೂನ್ 15ರಂದು ಆರೋಪಿ ಪವಿತ್ರಾಗೌಡಳನ್ನು ಆರ್.ಆರ್.ನಗರದ ಮನೆಗೆ ಸ್ಥಳ ಮಹಜರಿಗೆ ಕರೆದೊಯ್ಯಲಾಗಿತ್ತು. ಈ ವೇಳೆ ಪವಿತ್ರಾ ಗೌಡ ಲಿಪ್‌ ಸ್ಟಿಕ್ ಹಚ್ಚಿಕೊಂಡು, ಚೆನ್ನಾಗಿ ಮೇಕಪ್ ಮಾಡಿಕೊಂಡು ಹೊರ ಬಂದಿದ್ದರು.

ಪವಿತ್ರಾಗೌಡಗೆ ಮಹಿಳಾ ಪಿಎಸ್ ಐ ಲಿಪ್ ಸ್ಟಿಕ್ ಹಚ್ಚಲು ಕೊಟ್ಟಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಆರೋಪದಲ್ಲಿ ಬೆಂಗಳೂರು ಪಶ್ಚಿಮ ಡಿಸಿಪಿ ಗಿರೀಶ್ ಮಹಿಳಾ ಪಿಎಸ್ ಐ ಗೆ ನೋಟಿಸ್‌ ನೀಡಿದ್ದಾರೆ.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement