Published
6 months agoon
By
Akkare Newsಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದು, ಎ1 ಆರೋಪಿ ಪವಿತ್ರಾ ಗೌಡಗೆ ಲಿಪ್ ಸ್ಟಿಕ್ ನೀಡಿದ್ದ ಪಿಎಸ್ ಐಗೆ ಇದೀಗ ಸಂಕಷ್ಟ ಎದುರಾಗಿದೆ.
ವಿಜಯನಗರ ಠಾಣೆಯ ಮಹಿಳಾ ಪಿಎಸ್ ಐ ಓರ್ವರಿಗೆ ಕರ್ತವ್ಯ ಲೋಪ ಆರೋಪದಲ್ಲಿ ನೋಟಿಸ್ ನೀಡಲಾಗಿದೆ. ಮಹಿಳಾ ಪಿ ಎಸ್ ಐ ಆರೋಪಿ ಪವಿತ್ರಾಗೌಡಗೆ ಹಚ್ಚಲು ಲಿಪ್ ಸ್ಟಿಕ್ ನೀಡಿದ್ದರು ಎಂಬ ಆರೋಪ ಕೇಳಿಬಂದಿದೆ.
ಜೂನ್ 15ರಂದು ಆರೋಪಿ ಪವಿತ್ರಾಗೌಡಳನ್ನು ಆರ್.ಆರ್.ನಗರದ ಮನೆಗೆ ಸ್ಥಳ ಮಹಜರಿಗೆ ಕರೆದೊಯ್ಯಲಾಗಿತ್ತು. ಈ ವೇಳೆ ಪವಿತ್ರಾ ಗೌಡ ಲಿಪ್ ಸ್ಟಿಕ್ ಹಚ್ಚಿಕೊಂಡು, ಚೆನ್ನಾಗಿ ಮೇಕಪ್ ಮಾಡಿಕೊಂಡು ಹೊರ ಬಂದಿದ್ದರು.