Published
6 months agoon
By
Akkare Newsಕರ್ನಾಟಕ ರೈನ್ಸ್ : ಕಳೆದ ಬಾರಿ ಮಳೆಯಿಲ್ಲದ ಬರದ ವಾತಾವರಣ ನಿರ್ಮಾಣವಾದ ಹಿನ್ನೆಲೆ ರಾಜ್ಯದ ಬಹುತೇಕ ಕೆರೆ-ಕಟ್ಟೆಗಳು, ಜಲಾಶಯಗಳು ಬತ್ತಿಹೋಗುವ ಹಂತವನ್ನು ತಲುಪಿದ್ದವು. ಆದರೆ ಈ ಬಾರೀ ಮೇ ತಿಂಗಳ ಮಧ್ಯದಿಂದಲೇ ಮಳೆಯಾರ ಆರ್ಭಟಿಸಿದ್ದು, ಜೂನ್ 1ರಿಂದ ಮುಂಗಾರು ಪ್ರವೇಶ ನೀಡಿದ್ದು, ಜಲಮೂಲಗಳಿಗೆ ಜೀವಕಳೆ ಬಂದಾಂತಾಗಿದೆ.
ಈಗಾಗಲೇ ಹಲವೆಡೆ ಮಳೆರಾಯನ ಆರ್ಭಟ ಮುಂದುವರೆದಿದ್ದು, ಇಂದು (ಜೂನ್ 26) ಸಹ ಈ ಜಿಲ್ಲೆಗಳಲ್ಲಿ ಅಬ್ಬರಿಸಿ ಬೊಬ್ಬೆರೆಯಲಿದ್ದಾನೆ ಎನ್ನುವ ಮುನ್ಸೂಚನೆ ಇದೆ. ಮಾಹಿತಿ ಇಲ್ಲಿದೆ ತಿಳಿಯಿರಿ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಿಡುವು ನೀಡಿ ಮಳೆರಾಯ ಅಬ್ಬರಿಸುತ್ತಲೇ ಇದ್ದಾನೆ. ಹಾಗೆಯೇ ಇಂದು (ಜೂನ್ 26) ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ವೇಳೆಗೆ ಗುಡುಗು ಸಹಿತ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆಯಿಂದ ಮುನ್ಸೂಚನೆ ಇದೆ.
Karnataka rain: ಭಾರೀ ಮಳೆ ಮುನ್ಸೂಚನೆ; ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ
ಹಾಗೆಯೇ ಇಂದು ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಹಾವೇರಿ, ಕಲಬುರಗಿ, ಕೊಪ್ಪಳ, ವಿಜಯಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ತುಮಕೂರು ಜಿಲ್ಲೆಗಳ ಹಲವೆಡೆ ಸಾಧಾರಣ ಮಳೆಯಾಗಲಿದೆ ಎನ್ನುವ ಮುನ್ಸೂಚನೆ ಇದೆ.
ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುವ ಹಿನ್ನೆಲೆ ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನು ಉತ್ತರ ಕನ್ನಡ, ಉಡುಪಿ, ದಕ್ಷಿಣ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಕರಾವಳಿ ಭಾಗದಲ್ಲಿ ಗುಡುಗು ಸಹಿತ ಭಾರೀ ಮಳೆ ಸುರಿಯುವ ಮುನ್ಸೂಚನೆ ಹಿನ್ನೆಲೆ ಹವಾಮಾನ ಇಲಾಖೆಯಿಂದ ಮೀನುಗಾರರಿಗೆ ಹಾಗೂ ಪ್ರವಾಸಿಗರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಇನ್ನು ಈ ಭಾಗದಲ್ಲಿ ಗಂಟೆಗೆ 35-45 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎನ್ನುವ ಎಚ್ಚರಿಕೆ ಸಂದೇಶವನ್ನು ಕೂಡ ರವಾನಿಸಿದೆ.
ನಿನ್ನೆ (ಜೂನ್ 25) ಮಣಿ ಕುಂದಾಪುರದಲ್ಲಿ 8 ಸೆಂ.ಮೀಟರ್, ಆಗುಂಬೆಯಲ್ಲಿ 7 ಸೆಂ.ಮೀಟರ್ ಮಳೆಯಾಗಿದೆ. ಉಳಿದಂತೆ ಉಡುಪಿ , ಧರ್ಮಸ್ಥಳ, ಮಂಕಿ, ಶಿರಾಲಿ, ಗೇರ್ಸೊಪ್ಪ, ಪಣಂಬೂರಿನದಲ್ಲಿ ತಲಾ 6 ಸೆಂಟಿ ಮೀಟರ್, ದಿದ್ದಾಪುರ, ಕುಮಟಾ, ಸುಳ್ಯ, ಮಂಗಳೂರು, ಉಪ್ಪಿನಂಗಡಿ, ಕೊಪ್ಪ, ಕೊಟ್ಟಿಗೆಹಾರ, ಕಾರವಾರದಲ್ಲಿ ತಲಾ 5 ಸೆಂಟಿ ಮೀಟರ್ ಮಳೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇನ್ನು ಕಾರ್ಕಳ, ಪುತ್ತೂರು, ಭಾಗಮಂಡಲ, ಕದ್ರಾ, ಮಂಗಳೂರು, ಮೂಲ್ಕಿ, ಯಲ್ಲಾಪುರ, ಸಿದ್ದಾಪುರ ಲೋಂಡಾ, ಸೋಮವಾರಪೇಟೆ, ಶೃಂಗೇರಿ, ಕಳಸ, ಹುಂಚದ ಕಟ್ಟೆ, ಕೋಟಾದಲ್ಲಿ ತಲಾ 2 ಸೆಂ.ಮೀ, ತಾಳಗುಪ್ಪ, ಜಯಪುರ, ನಾಪೋಕ್ಲು, ಬಾಳೆ ಹೊನ್ನೂರಿನಲ್ಲಿ ತಲಾ 1 ಸೆಂ.ಮೀಟರ್ ಮಳೆ ಬಿದ್ದಿದೆ ಎಂದು ತಿಳಿದುಬಂದಿದೆ.