ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸ್ಥಳೀಯ

ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದ ಚುಂಚಶ್ರೀ ಸಭಾಂಗಣದಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿ ಉದ್ಘಾಟನೆ

Published

on

ಪುತ್ತೂರು: ರಾಜ್ಯದ ಇತಿಹಾಸದಲ್ಲಿ ಬೆಂಗಳೂರನ್ನು ಕೇಂದ್ರವಾಗಿ ಇಟ್ಟುಕೊಂಡು ಆಡಳಿತದೊಂದಿಗೆ ಕಟ್ಟಿಬೆಳೆಸಿದ್ದಾರೆ 15ನೇ ಶತಮಾನದಲ್ಲಿ ರಾಜಧಾನಿ ಬೆಂಗಳೂರು ಸ್ಥಾಪನೆ ಮಾಡಿದ ರಾಜ ಒಕ್ಕಲಿಗ ಸಮಾಜದ ಕೆಂಪೇಗೌಡರು. ವ್ಯವಹಾರಿಕವಾಗಿ ಶಿಕ್ಷಣ, ರಾಜಕೀಯ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಒಕ್ಕಲಿಗರು ಬಹಳಷ್ಟು ಸಾಧನೆ ಮಾಡಿದ್ದಾರೆ. ಸಮಾಜಕ್ಕೆ ಅವರ ಕೊಡುಗೆ ಮಹತ್ತರವಾಗಿದೆ ಎಂದು ಪುತ್ತೂರು ತಹಶೀಲ್ದಾರ್ ಪುರಂದರ ಹೆಗ್ಡೆ ಹೇಳಿದರು.

 

ಪುತ್ತೂರು: ರಾಜ್ಯದ ಇತಿಹಾಸದಲ್ಲಿ ಬೆಂಗಳೂರನ್ನು ಕೇಂದ್ರವಾಗಿ ಇಟ್ಟುಕೊಂಡು ಆಡಳಿತದೊಂದಿಗೆ ಕಟ್ಟಿಬೆಳೆಸಿದ್ದಾರೆ 15ನೇ ಶತಮಾನದಲ್ಲಿ ರಾಜಧಾನಿ ಬೆಂಗಳೂರು ಸ್ಥಾಪನೆ ಮಾಡಿದ ರಾಜ ಒಕ್ಕಲಿಗ ಸಮಾಜದ ಕೆಂಪೇಗೌಡರು. ವ್ಯವಹಾರಿಕವಾಗಿ ಶಿಕ್ಷಣ, ರಾಜಕೀಯ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಒಕ್ಕಲಿಗರು ಬಹಳಷ್ಟು ಸಾಧನೆ ಮಾಡಿದ್ದಾರೆ. ಸಮಾಜಕ್ಕೆ ಅವರ ಕೊಡುಗೆ ಮಹತ್ತರವಾಗಿದೆ ಎಂದು ಪುತ್ತೂರು ತಹಶೀಲ್ದಾರ್ ಪುರಂದರ ಹೆಗ್ಡೆ ಹೇಳಿದರು.

 

ಗುರುವಾರ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದ ಚುಂಚಶ್ರೀ ಸಭಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಜಂಟಿ ಆಶ್ರಯದಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು

ಸವಣೂರು ವಿದ್ಯಾರಶ್ಮಿ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಕೇವಳ ಮಾತನಾಡಿ ಕೇವಲ 22 ವಯಸ್ಸಿನಲ್ಲಿ ನಾಡಪ್ರಭು ಕೆಂಪೇಗೌಡರು ತನ್ನ ದೂರದರ್ಶಿತ್ವದಿಂದ, ಜಾಣ್ಮೆ, ಚಾಣಾಕ್ಷತನದಿಂದ ಕೇವಲ ಎರಡು ಚದರ ಅಡಿಯಷ್ಟು ಬೆಂಗಳೂರು ನಗರವನ್ನು ನಿರ್ಮಾಣ ಮಾಡಿದ್ದಾರೆ. ಗುರುಕುಲ ಶಿಕ್ಷಣ ಪಡೆದ ಕೆಂಪೇಗೌಡರು ಪರಿಸರವಾದಿ ನೆಲೆಯಲ್ಲಿ ಮೂಲಭೂತಗಳಲ್ಲಿ ಒಂದಾದ ಕೆರೆಗಳ ರಚನೆ, ಮರಗಳನ್ನು ನೆಡಬೇಕು ಎಂಬ ಯೋಚನೆಯಿಂದ ವಾತಾವರಣ ತಂಪಾಗಿರಬೇಕು ಎಂಬ ದೃಷ್ಟಿಯನ್ನು ಹೊಂದಿ ನೂರಾರು ಕೆರೆಗಳನ್ನು ನಿರ್ಮಾಣ ಮಾಡುತ್ತಾರೆ ಎಂದು ತಿಳಿಸಿದರು.

ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಭಾಸ್ಕರ್ ಕೋಡಿಂಬಾಳ ಮಾತನಾಡಿ ನಾಡಪ್ರಭು ಕೆಂಪೇಗೌಡರ 500 ವರ್ಷಗಳ ದೂರದೃಷ್ಟಿತ್ವದಿಂದ ಬೆಂಗಳೂರು ಇಷ್ಟೊಂದು ಸುಂದರವಾಗಿ ಬೆಳೆದಿದ್ದು, ಈ ನಿಟ್ಟಿನಲ್ಲಿ ಎಲ್ಲಾ ನಗರಗಳು ಬೆಳೆಯಬೇಕು. ಇದಕ್ಕಾಗಿ ಮುಂದಿನ ಯೋಜನೆ ತಯಾರಿಸುವವರು 100-200 ವರ್ಷಗಳ ಯೋಜನೆ ಇಟ್ಟು ಯೋಜನೆಗಳನ್ನು ತಯಾರಿಸಿದಾಗ ಅಭಿವೃದ್ಧಿ ಸಾಧ್ಯ ಎಂದರು.ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ಶುಭ ಹಾರೈಸಿದರು. ಎಸ್ ಎಸ್ ಎಲ್ ಸಿಯಲ್ಲಿ ತಾಲೂಕಿನಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಮಾಜಿ ಶಾಸಕ ಸಂಜೀವ ಮಠಂದೂರು ಅಭಿನಂದಿಸಿದರು. ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಯಿತು. ಒಕ್ಕಲಿಗ ಗೌಡ ಸಮುದಾಯದ ಐದು ಮಂದಿ ಪಿಯುಸಿ ವಿಭಾಗದಲ್ಲಿ ಅತ್ಯಧಿಕ ಅಂಕ ಪಡೆದವರನ್ನು ಭಾಸ್ಕರ ಕೋಡಿಂಬಾಳ ಅಭಿನಂದಿಸಿದರು.

ನಗರಸಭಾ ಪೌರಾಯುಕ್ತ ಮಧು ಎಸ್. ಮನೋಹರ್, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಉಪಸ್ಥಿತರಿದ್ದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಸ್ವಾಗತಿಸಿದರು. ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.

Continue Reading
Click to comment

Leave a Reply

Your email address will not be published. Required fields are marked *

Advertisement