Published
6 months agoon
By
Akkare Newsಲೋಕಸಭಾ ಚುನಾವಣೆಯಲ್ಲಿ(Lokasabha Election) ಟಿಕೆಟ್ ವಂಚಿತರಾಗಿ, ನಾಯಕರಿಂದ ಕಡೆಗಣಿಸಲ್ಪಟ್ಟು ಮೂಲೆಗೂಂಪಾಗುವ ಲೆಕ್ಕಾಚಾರಕ್ಕೆ ತಲುಪಿದ್ದ ಮಾಜಿ ಸಿಎಂ ಡಿವಿ ಸದಾನಂದಗೌಡ(D V Sadananda Gowda) ಅವರು ಇದೀಗ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಗಣನೀಯವಾದ ಸೋಲಿಗೆ ಕಾರಣವೇನೆಂದು ತಿಳಿಸಿ ರಾಜ್ಯ ಬಿಜೆಪಿ(BJP) ನಾಯಕರ ಜನ್ಮ ಜಾಲಾಡಿದ್ದಾರೆ.
ಹೌದು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮಕಾಡೆ ಮಲಗಿದ್ದು ಇದರ ಆತ್ಮವಿಮರ್ಶೆ ನಡೆಯುತ್ತಿದೆ. ಕೆಲ ಬಿಜೆಪಿ ನಾಯಕರು ತಮಗನಿಸಿದಂತೆ ಇದನ್ನು ವಿಶ್ಲೇಷಿಸುತ್ತಿದ್ದಾರೆ. ಅಂತೆಯೇ ಇದೀಗ ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಸದಾನಂದಗೌಡ ಗೌಡ ಅವರು ರಾಜ್ಯದಲ್ಲಿ 8 ಕಡೆ ಬಿಜೆಪಿ ಸೋಲಿಗೆ ಹಾಗೂ ಉಳಿದೆಡೆ ಕಡಿಮೆ ಮಾರ್ಜಿನ್ ಬರಲು ಏನು ಕಾರಣ ಎಂದು ತಿಳಿಸಿದ್ದಾರೆ.
ಸದಾನಂದ ಗೌಡರು ಹೇಳಿದ್ದೇನು?
ಲೋಕಸಭಾ ಚುನಾವಣೆಯಲ್ಲಿ ನಮಗೆ ಸೋಲಾಗಲು ಪ್ರಧಾನಿ ಮೋದಿಯವರ (Narendra Modi) ಮೇಲಿನ ನಮ್ಮ ಅತಿಯಾದ ಆತ್ಮ ವಿಶ್ವಾಸ ಹಾಗೂ ಕಾರ್ಯಕರ್ತರ ಕಡಗಣನೆಯೇ ಕಾರಣ ಎಂದು ಮಾಜಿ ಸಿಎಂ ಡಿ.ವಿ ಸದಾನಂದಗೌಡ (D.V Sadananda Gowda) ಅಭಿಪ್ರಾಯಪಟ್ಟಿದ್ದಾರೆ. ನಾವು ವಿಧಾನಸಭಾ ಫಲಿತಾಂಶದ ಹಿನ್ನೆಡೆಯನ್ನು ಗಂಭೀರವಾಗಿ ಪರಿಗಣಿಸಬೇಕಿತ್ತು. ಕಾರ್ಯಕರ್ತರನ್ನು ಉತ್ತೇಜಿಸಿ ಚುನಾವಣೆ ಮಾಡುವ ಕೆಲಸ ಆಗಲಿಲ್ಲ. ಮೋದಿ ಹೆಸರಿನಲ್ಲಿ ಅತಿಯಾದ ಆತ್ಮವಿಶ್ವಾಸ ಬಿಜೆಪಿ 8 ಸೀಟ್ ಕಳೆದುಕೊಳ್ಳಲು ಕಾರಣವಾಯಿತು ಎಂದು ಅವರು ಹೇಳಿದ್ದಾರೆ.
ಇಷ್ಟೇ ಅಲ್ಲದೆ ರಾಜ್ಯ ನಾಯಕರ ವಿರುದ್ಧ ಸಿಡಿದೆದ್ದ ಅವರು ವಿಪಕ್ಷ ನಾಯಕ ಆರ್.ಅಶೋಕ್‍ಗೆ (R.Ashok) ಅಧ್ಯಯನದ ಕೊರತೆ ಇದೆ. ಸದನಕ್ಕೆ ಅಧ್ಯಯನ ಮಾಡಿ ಬರಬೇಕು. ಅಂಕಿ ಅಂಶಗಳ ಬಗ್ಗೆ ಮಾಹಿತಿ ಇರಬೇಕು. ವಿಪಕ್ಷ ನಾಯಕ ಅಂದರೆ ಬರಿ ಜಗಳ ಮಾಡುವುದಲ್ಲ. ಭಾರೀ ಅಧ್ಯಯನದ ಅಗತ್ಯ ಇದೆ. ಬರೀ ಓಡಾಟದಿಂದ ಪಕ್ಷದ ನಾಯಕನಾಗಿ ಬೆಳವಣಿಗೆ ಆಗಬಹುದು, ವಿಪಕ್ಷ ನಾಯಕನಾಗಿ ಬೆಳೆಯಲು ಸಾಧ್ಯವಿಲ್ಲ ಎಂದಿದ್ದಾರೆ.