ನಮ್ಮೊಂದಿಗೆ ಸಂಪರ್ಕ ಸಾಧಿಸಿ

ರಾಜಕೀಯ

ಮೋದಿ ಯನ್ನು ನಂಬಿ ನಾನು ಕೆಟ್ಟೆ ! ಮತ್ತೆ ಬಿಜೆಪಿ ವಿರುದ್ಧ ಸಿಡಿದೆದ್ದ : ಒಕ್ಕಲಿಗ ನಾಯಕ ಡಿ ವಿ ಸದಾನಂದ ಗೌಡ

Published

on

ಲೋಕಸಭಾ ಚುನಾವಣೆಯಲ್ಲಿ(Lokasabha Election) ಟಿಕೆಟ್ ವಂಚಿತರಾಗಿ, ನಾಯಕರಿಂದ ಕಡೆಗಣಿಸಲ್ಪಟ್ಟು ಮೂಲೆಗೂಂಪಾಗುವ ಲೆಕ್ಕಾಚಾರಕ್ಕೆ ತಲುಪಿದ್ದ ಮಾಜಿ ಸಿಎಂ ಡಿವಿ ಸದಾನಂದಗೌಡ(D V Sadananda Gowda) ಅವರು ಇದೀಗ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಗಣನೀಯವಾದ ಸೋಲಿಗೆ ಕಾರಣವೇನೆಂದು ತಿಳಿಸಿ ರಾಜ್ಯ ಬಿಜೆಪಿ(BJP) ನಾಯಕರ ಜನ್ಮ ಜಾಲಾಡಿದ್ದಾರೆ.

ಹೌದು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮಕಾಡೆ ಮಲಗಿದ್ದು ಇದರ ಆತ್ಮವಿಮರ್ಶೆ ನಡೆಯುತ್ತಿದೆ. ಕೆಲ ಬಿಜೆಪಿ ನಾಯಕರು ತಮಗನಿಸಿದಂತೆ ಇದನ್ನು ವಿಶ್ಲೇಷಿಸುತ್ತಿದ್ದಾರೆ. ಅಂತೆಯೇ ಇದೀಗ ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಸದಾನಂದಗೌಡ ಗೌಡ ಅವರು ರಾಜ್ಯದಲ್ಲಿ 8 ಕಡೆ ಬಿಜೆಪಿ ಸೋಲಿಗೆ ಹಾಗೂ ಉಳಿದೆಡೆ ಕಡಿಮೆ ಮಾರ್ಜಿನ್ ಬರಲು ಏನು ಕಾರಣ ಎಂದು ತಿಳಿಸಿದ್ದಾರೆ.

ಸದಾನಂದ ಗೌಡರು ಹೇಳಿದ್ದೇನು?
ಲೋಕಸಭಾ ಚುನಾವಣೆಯಲ್ಲಿ ನಮಗೆ ಸೋಲಾಗಲು ಪ್ರಧಾನಿ ಮೋದಿಯವರ (Narendra Modi) ಮೇಲಿನ ನಮ್ಮ ಅತಿಯಾದ ಆತ್ಮ ವಿಶ್ವಾಸ ಹಾಗೂ ಕಾರ್ಯಕರ್ತರ ಕಡಗಣನೆಯೇ ಕಾರಣ ಎಂದು ಮಾಜಿ ಸಿಎಂ ಡಿ.ವಿ ಸದಾನಂದಗೌಡ (D.V Sadananda Gowda) ಅಭಿಪ್ರಾಯಪಟ್ಟಿದ್ದಾರೆ. ನಾವು ವಿಧಾನಸಭಾ ಫಲಿತಾಂಶದ ಹಿನ್ನೆಡೆಯನ್ನು ಗಂಭೀರವಾಗಿ ಪರಿಗಣಿಸಬೇಕಿತ್ತು. ಕಾರ್ಯಕರ್ತರನ್ನು ಉತ್ತೇಜಿಸಿ ಚುನಾವಣೆ ಮಾಡುವ ಕೆಲಸ ಆಗಲಿಲ್ಲ. ಮೋದಿ ಹೆಸರಿನಲ್ಲಿ ಅತಿಯಾದ ಆತ್ಮವಿಶ್ವಾಸ ಬಿಜೆಪಿ 8 ಸೀಟ್ ಕಳೆದುಕೊಳ್ಳಲು ಕಾರಣವಾಯಿತು ಎಂದು ಅವರು ಹೇಳಿದ್ದಾರೆ.

ಅಲ್ಲದೆ ಕಾಂಗ್ರೆಸ್ ಪವರ್‌ಫುಲ್ ಆಗಿ ಕಾರ್ಯಾಚರಣೆಗೆ ಇಳಿದಿದೆ ಎಂಬುದನ್ನು ಊಹಿಸಲು ನಮ್ಮ ರಾಜ್ಯದ ಸಂಘಟನೆ ವಿಫಲವಾಯಿತು. ಜೆಡಿಎಸ್ ಜೊತೆಗಿದ್ದ ಕಾರಣಕ್ಕೆ ಹಳೇ ಮೈಸೂರು ಕಡೆ ನಮಗೆ ಗೆಲುವಾಗಿದೆ ಎಂದು ಜನ ಮಾತಾಡಲು ಆರಂಭಿಸಿದ್ದು ಬಿಜೆಪಿಗೆ ಸವಾಲಾಗಿದೆ ಎಂಬುದನ್ನೂ ಅವರು ಎಚ್ಚರಿಸಿದ್ದಾರೆ.

ಇಷ್ಟೇ ಅಲ್ಲದೆ ರಾಜ್ಯ ನಾಯಕರ ವಿರುದ್ಧ ಸಿಡಿದೆದ್ದ ಅವರು ವಿಪಕ್ಷ ನಾಯಕ ಆರ್.ಅಶೋಕ್‍ಗೆ (R.Ashok) ಅಧ್ಯಯನದ ಕೊರತೆ ಇದೆ. ಸದನಕ್ಕೆ ಅಧ್ಯಯನ ಮಾಡಿ ಬರಬೇಕು. ಅಂಕಿ ಅಂಶಗಳ ಬಗ್ಗೆ ಮಾಹಿತಿ ಇರಬೇಕು. ವಿಪಕ್ಷ ನಾಯಕ ಅಂದರೆ ಬರಿ ಜಗಳ ಮಾಡುವುದಲ್ಲ. ಭಾರೀ ಅಧ್ಯಯನದ ಅಗತ್ಯ ಇದೆ. ಬರೀ ಓಡಾಟದಿಂದ ಪಕ್ಷದ ನಾಯಕನಾಗಿ ಬೆಳವಣಿಗೆ ಆಗಬಹುದು, ವಿಪಕ್ಷ ನಾಯಕನಾಗಿ ಬೆಳೆಯಲು ಸಾಧ್ಯವಿಲ್ಲ ಎಂದಿದ್ದಾರೆ.

ಅಲ್ಲದೆ ಲೋಕಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿ ಅಭ್ಯರ್ಥಿಗಳ ಸೋಲಿಗೆ ಕಾರಣವಾದವರ ವಿರುದ್ಧ ಶಿಸ್ತು ಕ್ರಮ ಆಗಬೇಕು. ನಾನು ಅಧ್ಯಕ್ಷನಾಗಿದ್ದಾಗ ರೆಡ್ಡಿ ವಿರುದ್ಧ, ಯತ್ನಾಳ್ ವಿರುದ್ಧ, ರೇಣುಕಾಚಾರ್ಯ ವಿರುದ್ಧ ಪಕ್ಷ ವಿರೋಧಿ ಆರೋಪದ ಮೇಲೆ ಕ್ರಮ ತಗೊಂಡಿದ್ದೆ. ಈಗ ಈ ರೀತಿಯ ಕ್ರಮ ಆಗ್ತಿಲ್ಲ. ಇದರ ಬಗ್ಗೆ ನಾನು ರಾಜ್ಯಾಧ್ಯಕ್ಷ ವಿಜಯೇಂದ್ರ ಬಳಿ ಮಾತಾಡಿದ್ದೇನೆ.

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version