ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಆರೋಗ್ಯ

ಪುತ್ತೂರು, ಕಡಬ ತಾಲೂಕಿ‌ನಲ್ಲಿ ಉಲ್ಬಣಗೊಂಡ ಡೆಂಗ್ಯೂ ಪ್ರಕರಣ

Published

on

ಪುತ್ತೂರು /ಕಡಬ: ಪುತ್ತೂರು, ಕಡಬ ತಾಲೂಕಿ‌ನಲ್ಲಿ ಡೆಂಗ್ಯೂ ಪ್ರಕರಣ ಉಲ್ಬಣಗೊಂಡಿದೆ. ಜನವರಿಯಿಂದ ಜೂನ್ ವರಗೆ 177 ಡೆಂಗ್ಯೂ ಪ್ರಕರಣ ಪತ್ತೆಯಾಗಿದೆ. ಅದರಲ್ಲಿ 76 ಡೆಂಗ್ಯೂ ಪ್ರಕರಣಗಳು ಜೂನ್ ತಿಂಗಳಲ್ಲಿ ಪತ್ತೆಯಾಗಿದೆ ಎಂದು ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಮಾಹಿತಿ ನೀಡಿದ್ದಾರೆ.

ಈಗಾಗ್ಲೇ ಡೆಂಗ್ಯೂ ಪ್ರಕರಣಗಳು ಪುತ್ತೂರು, ಕಡಬ ತಾಲೂಕುಗಳಲ್ಲಿ ಹೆಚ್ಚಾಗ್ತನೇ ಇವೆ. ಇದಕ್ಕೆ ಕಾರಣ ಮಳೆ ಬಿಟ್ಟು ಬಿಟ್ಟು ಬರುವುದರಿಂದ ಡೆಂಗ್ಯೂ ಜ್ವರಗಳು ಕೆಲವೊಮ್ಮೆ ಕಾಣಿಸಿಕೊಳ್ತವೆ. ಇದೀಗ ಕಡಬ, ಪುತ್ತೂರಿನಲ್ಲಿ ಕಾಣಿಸಿಕೊಂಡ 177 ಡೆಂಗ್ಯೂ ಪ್ರಕರಣದ‌ ರೋಗಿಗಳು ಚಿಕಿತ್ಸೆಯನ್ನ ಮಂಗಳೂರಿನಲ್ಲಿ ಪಡೆದುಕೊಳ್ಳುತ್ತಿದ್ದರೆ, ಪುತ್ತೂರು, ಕಡಬ ತಾಲೂಕಿನ 177 ಡೆಂಗ್ಯೂ ಪ್ರಕರಣದ ರೋಗಿಗಳು ಇದ್ದಾರೆ. ಆಧಾರ್ ಕಾರ್ಡ್ ನಲ್ಲಿರುವ ವಿಳಾಸದ ಪ್ರಕಾರ ಹೇಳುದಾದ್ರೆ ಇವ್ರೆಲ್ಲ ಪುತ್ತೂರು, ಕಡಬ ತಾಲೂಕಿಗೆ ಒಳಪಟ್ಟವರು.

 

ಹಾಗಾಗಿ ಈ ಡೆಂಗ್ಯೂ ಪ್ರಕರಣ ಪುತ್ತೂರು, ಕಡಬ ವ್ಯಾಪ್ತಿಗೆ ಒಳಪಡುತ್ತವೆ. ಚಿಕಿತ್ಸೆಯನ್ನು ಮಾತ್ರ ಮಂಗಳೂರಿನಲ್ಲಿ ಪಡೆದೆಕೊಳ್ಳುತ್ತಿದ್ದಾರೆ. ಈಗಾಗ್ಲೇ ಕಡಬ, ಪುತ್ತೂರು ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರ, ಸರ್ಕಾರ ಆಸ್ಪತ್ರೆಗೆ ಭೇಟಿ‌ ನೀಡಿದ್ದೇನೆ. ಇದರಲ್ಲಿ ಬೆಂಗಳೂರಿನಲ್ಲಿ ಪಾಸಿಟಿವ್ ಕಾಣಿಸಿಕೊಂಡ ರೋಗಿಗಳು ಇಲ್ಲಿ ಬಂದು ಅಡ್ಮಿಟ್ ಆಗಿದ್ದಾರೆ.

ಇದರಲ್ಲಿ ಬೆಂಗಳೂರಿನಿಂದ ಬಂದಂತಹ ಡೆಂಗ್ಯೂ ರೋಗಿಗಳಲ್ಲಿ ಡೆಂಗ್ಯೂ ತೀವ್ರತೆ ಜಾಸ್ತಿಯಾಗಿದೆ. ಆದ್ರೆ ನಮ್ಮಲ್ಲಿ ಊರಿನವರಲ್ಲಿ ಕಾಣಿಸಿಕೊಂಡ ಡೆಂಗ್ಯೂ ತೀವ್ರತೆ ಕಡಿಮೆ ಇದೆ. ಆದ್ರೆ ಇಲ್ಲೀವರೆಗೂ ಕಡಬ, ಪುತ್ತೂರು ತಾಲೂಕುಗಳಲ್ಲಿ ಡೆಂಗ್ಯೂ ಸಾವಿನ ಪ್ರಕರಣ ಆಗಿಲ್ಲ. ಪುತ್ತೂರು ತಾಲೂಕಿನಲ್ಲಿ ಖಚಿತವಾದ 7 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದೆ. ಉಳಿದಂತ ಕೆಲವೊಂದು ಪ್ರಕರಣಗಳು ವೈರಲ್ ಫೀವರ್ ಗೆ ಸಂಬಂಧಪಟ್ಟಿವೆ. ಜ್ವರ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನ ರೋಗಿಯ ರಕ್ತದ ಮಾದರಿಯನ್ನ ತೆಗೆದು ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಲಾಗುತ್ತೆ.

 

ಅಲ್ಲಿ ಖಚಿತವಾದ ನಂತರ ಡೆಂಗ್ಯೂ ಸಂಬಂಧಿಸಿದ ಚಿಕಿತ್ಸೆಯನ್ನ ನೀಡುತ್ತೇವೆ. ಸದ್ಯ ಪುತ್ತೂರಿನ ನಗರ ಪ್ರದೇಶಗಳಲ್ಲಿ ಅತೀ ಹೆಚ್ಚು ಡೆಂಗ್ಯೂ ಪ್ರಕರಣಗಳು ಪತ್ತೆಯಾಗ್ತಾ ಇವೆ. ನಗರ ಪ್ರದೇಶಗಳಲ್ಲಿ ಅನೇಕ ಕಡೆ ಕಟ್ಟಡ ಕಾಮಗಾರಿಯ ಕೆಲಸಗಳು ನಡೀತಾ ಇರ್ತವೆ. ಹೀಗಿರುವಾಗ ಕಟ್ಟಡ ಕಾಮಗಾರಿಯ ಕೆಲವು ಸ್ಲ್ಯಾಬ್ ಗಳಲ್ಲಿ ನೀರು ಶೇಖರಣೆಯಾಗುತ್ತೆ. ಇದರಿಂದಾಗಿ ಅದರಲ್ಲಿ ಡೆಂಗ್ಯೂ ಸೊಳ್ಳೆಗಳು ಉತ್ಪತ್ತಿಯಾಗಿ ಮನುಷ್ಯನ‌ ಮೇಲೆ ಪ್ರಭಾವ‌ ಬೀರುತ್ತವೆ.

 

ಇನ್ನು ಉಪ್ಪಿನಂಗಡಿ ನಗರ ಭಾಗದಲ್ಲೂ 35 ಡೆಂಗ್ಯೂ ಪ್ರಕರಣಗಳು ಇವೆ. ಹಾಗಾಗಿ ಆದಷ್ಟು ನೀರು ಶೇಖರಣೆಯಾಗದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ನಾವು ಬೇರೆ ಬೇರೆ ಫೀಲ್ಡ್ ಆಫೀಸರ್ಸ್ ಗಳನ್ನ ನೇಮಿಸಿ ಮಾಹಿತಿ ಕೊಡುವಂತೆ ಕೆಲಸ ಆರಂಭಿಸಿದ್ದೇವೆ. ಈ ಮೂಲಕ ಡೆಂಗ್ಯೂ ನಿಯಂತ್ರಣಕ್ಕೆ ತರಲು ಪ್ರಯತ್ನಿಸುತ್ತೇವೆ ಎಂದರು.

 

 

Continue Reading
Click to comment

Leave a Reply

Your email address will not be published. Required fields are marked *

Advertisement