ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಆರೋಗ್ಯ

ದೇಶದಾದ್ಯಂತ 111 ಮಸಾಲೆ ತಯಾರಕರ ಪರವಾನಿಗೆಗಳನ್ನು ರದ್ದುಗೊಳಿಸಿದ FSSAI

Published

on

ಕಳೆದ ಒಂದು ತಿಂಗಳ ಅವಧಿಯಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ದೇಶಾದ್ಯಂತ 111 ಮಸಾಲೆ ಉತ್ಪಾದಕರ ಉತ್ಪಾದನಾ ಪರವಾನಗಿಯನ್ನು ರದ್ದುಗೊಳಿಸಿದೆ. ತಕ್ಷಣವೇ ಉತ್ಪಾದನೆಯನ್ನು ನಿಲ್ಲಿಸುವಂತೆ ಅವರಿಗೆ ಸೂಚನೆ ನೀಡಲಾಗಿದೆ ಎಂದು ವರದಿಗಳು ಹೇಳಿವೆ.

ಕಳೆದ ಎಪ್ರಿಲ್‌ನಲ್ಲಿ ಸಿಂಗಾಪುರ ಮತ್ತು ಹಾಂಗ್‌ಕಾಂಗ್ ಜನಪ್ರಿಯ ಭಾರತೀಯ ಬ್ರ್ಯಾಂಡ್‌ಗಳಾದ ಎಂಡಿಹೆಚ್ ಮತ್ತು ಎವರೆಸ್ಟ್ ಮಸಾಲೆಗಳ ಮಾರಾಟವನ್ನು ನಿಷೇಧಿಸಿದಾಗಿನಿಂದ ಎಫ್‌ಎಸ್‌ಎಸ್‌ಎಐ ದೇಶಾದ್ಯಂತದಿಂದ ಮಸಾಲೆ ಉತ್ಪನ್ನಗಳ ಸ್ಯಾಂಪಲ್‌ಗಳನ್ನು ಸಂಗ್ರಹಿಸುತ್ತಿದೆ. ಹಲವಾರು ಉತ್ಪನ್ನಗಳಲ್ಲಿ ಕ್ಯಾನ್ಸರ್‌ಕಾರಕ ಕೀಟನಾಶಕ ಎಥೆಲೀನ್ ಆಕ್ಸೈಡ್ ಪತ್ತೆಯಾದ ಬಳಿಕ ಸಿಂಗಾಪುರ ಮತ್ತು ಹಾಂಗ್‌ಕಾಂಗ್ ಈ ಬ್ರ್ಯಾಂಡ್‌ಗಳನ್ನು ನಿಷೇಧಿಸಿವೆ.

 

ಎಫ್‌ಎಸ್‌ಎಸ್‌ಎಐ ಈವರೆಗೆ 4,000 ಸ್ಯಾಂಪಲ್‌ಗಳನ್ನು ಸಂಗ್ರಹಿಸಿದ್ದು,ಈ ಪೈಕಿ ಸುಮಾರು 2,200 ಸ್ಯಾಂಪಲ್‌ಗಳನ್ನು ಪರೀಕ್ಷೆಗಳಿಗೆ ಒಳಪಡಿಸಲಾಗಿದೆ. ಎಫ್‌ಎಸ್‌ಎಸ್‌ಎಐ ಇನ್ನಷ್ಟು ಸ್ಯಾಂಪಲ್‌ಗಳ ಪರೀಕ್ಷೆಯನ್ನು ಮುಂದುವರಿಸಿರುವುದರಿಂದ ಮತ್ತಷ್ಟು ಪರವಾನಿಗೆಗಳು ರದ್ದಾಗುವ ಸಾಧ್ಯತೆಯಿದೆ.

 

ಈವರೆಗೆ ಪರವಾನಿಗೆ ರದ್ದುಗೊಂಡಿರುವ ಮಸಾಲೆ ಉತ್ಪನ್ನಗಳಲ್ಲಿ ಜನಪ್ರಿಯ ಬ್ರ್ಯಾಂಡ್‌ಗಳಾದ ಎವರೆಸ್ಟ್,ಎಂಡಿಹೆಚ್,ಕ್ಯಾಚ್ ಮತ್ತು ಬಾದಶಾಹ್ ಸೇರಿವೆ.

 

ಪರವಾನಿಗೆಗಳು ರದ್ದುಗೊಂಡಿರುವ ಹೆಚ್ಚಿನ ಕಂಪನಿಗಳು ಕೇರಳ ಮತ್ತು ತಮಿಳುನಾಡಿಗೆ ಸೇರಿವೆ. ಗುಜರಾತ್, ಮಹಾರಾಷ್ಟ್ರ ಮತ್ತು ಮಧ್ಯ ಪ್ರದೇಶದ ಹಲವಾರು ಕಂಪನಿಗಳೂ ನಿಗಾದಲ್ಲಿವೆ. ಪರವಾನಿಗೆ ರದ್ದುಗೊಂಡಿರುವ ಹೆಚ್ಚಿನ ಕಂಪನಿಗಳು ಸಣ್ಣ ಪ್ರಮಾಣದ ಉದ್ಯಮಗಳಾಗಿವೆ.

 

ಅರಿಷಿಣ, ಮೆಣಸಿನ ಹುಡಿ, ಕರಿಮೆಣಸು, ದಾಲ್ಚಿನಿ ಮತ್ತು ಕೊತ್ತಂಬರಿ ಹುಡಿಯಂತಹ ಮಸಾಲೆ ತಯಾರಿಕೆಯಲ್ಲಿ ಬಳಕೆಯಾಗುವ ಸಾಂಬಾರ್ ಪದಾರ್ಥಗಳು ಸುಲಭವಾಗಿ ಕಲಬೆರಕೆಗೆ ಗುರಿಯಾಗುತ್ತವೆ. ಮಸಾಲೆ ಉತ್ಪಾದಕರು ಪ್ರಮಾಣವನ್ನು ಹೆಚ್ಚಿಸಲು ಮತ್ತು ಉತ್ಪಾದನಾ ವೆಚ್ಚವನ್ನು ತಗ್ಗಿಸಲು ಸ್ಟಾರ್ಚ್,ಮರದ ಹೊಟ್ಟು, ಕೃತಕ ಬಣ್ಣಗಳು ಮತ್ತು ರಾಸಾಯನಿಕ ಬಣ್ಣಗಳನ್ನು ಬಳಸುತ್ತಾರೆ. ಇದು ಈ ಮಸಾಲೆಗಳ ಗುಣಮಟ್ಟ ಮತ್ತು ಸುರಕ್ಷತೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ.

ಕಲಬೆರಕೆ ದೂರುಗಳ ಹಿನ್ನೆಲೆಯಲ್ಲಿ ಎಫ್‌ಎಸ್‌ಎಸ್‌ಎಐ,ಇನ್ನಷ್ಟು ಕಲಬೆರಕೆಯನ್ನು ತಡೆಯಲು ಅನುಮತಿಸಲ್ಪಟ್ಟ ಕೀಟನಾಶಕ ಮಟ್ಟಗಳನ್ನು 10 ಪಟ್ಟು ಹೆಚ್ಚಿಸುವುದಾಗಿ ಇತ್ತೀಚಿಗೆ ಹೇಳಿತ್ತು.

 

 

Continue Reading
Click to comment

Leave a Reply

Your email address will not be published. Required fields are marked *

Advertisement