Published
5 months agoon
By
Akkare Newsಪುತ್ತೂರು: ಪುತ್ತೂರು ತಾಲೂಕು ಕ್ರೀಡಾಂಗಣ ಅಭಿವೃದ್ದಿಗೆ ವಿಶೇಷ ಅನುದಾನ ನೀಡುವಂತೆ ಪುತ್ತೂರು ಶಾಸಕರಾದ ಅಶೋಕ್ ರೈ ಯವರು ಮುಖ್ಯಮಂತ್ರಿಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಸಿ ಎಂ ಕಚೇರಿಯಲ್ಲಿ ಭೇಟಿಯಾಗಿ ಮನವಿ ಮಾಡಿದ ಶಾಸಕರು ಕೊಂಬೆಟ್ಟಿನಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ಅಭಿವೃದ್ದಿ ಕೆಲಸಗಳು ನಡೆಯಬೇಕಿದೆ. ತಾಲೂಕು ಮಟ್ಟದ ಹಾಗೂ ಜಿಲ್ಲಾಮಟ್ಡದ ಕ್ರೀಡೆಗಳು ಇಲ್ಲಿನಡೆಯುತ್ತಿದೆ. ಕಳೆದ ವರ್ಷದ ರಾಜ್ಯಮಟ್ಟದ ಕ್ರೀಡಾಕೂಟವು ಇದೇ ಕ್ರೀಡಾಂಗಣದಲ್ಲಿನಡೆದಿತ್ತು. ಕ್ರೀಡಾಂಗಣದಸುತ್ತ ಆವರಣಗೋಡೆ, ವೀಕ್ಷಕರಗ್ಯಾಲರಿ ಹಾಗೂಸಿಂಥೆಟಿಕ್ ಟ್ರ್ಯಾಕ್ ಇದರ ಅಗತ್ಯತೆ ಇರುತ್ತದೆ.
ಹಲವಾರುವರ್ಷಗಳಿಂದ ಕ್ರೀಡಾಪಟುಗಳು, ಹಾಗೂ ಸಾರ್ವಜನಿಕರಿಂದ ಇದರ ಅಭಿವೃದ್ದಿಗೆ ಬೇಡಿಕೆ ಇದ್ದರೂ ಅಭಿವೃದ್ದಿ ಕೆಲಸಗಳು ಸಾಕಷ್ಟು ಬಾಕಿ ಇರುತ್ತದೆ ಎಂದು ಸಿದ್ದರಾಮಯ್ಯರವರ ಬಳಿ ಶಾಸಕರು ಮನವಿಮಾಡಿದ್ದಾರೆ. ಅನುದಾನ ಒದಗಿಸುವ ಬಗ್ಗೆ ಸಿದ್ದರಾಮಯ್ಯರವರು ಭರವಸೆ ನೀಡಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.