Published
2 years agoon
By
Akkare News
ಪುತ್ತೂರು: ಪುತ್ತೂರು ತಾಲೂಕು ಕ್ರೀಡಾಂಗಣ ಅಭಿವೃದ್ದಿಗೆ ವಿಶೇಷ ಅನುದಾನ ನೀಡುವಂತೆ ಪುತ್ತೂರು ಶಾಸಕರಾದ ಅಶೋಕ್ ರೈ ಯವರು ಮುಖ್ಯಮಂತ್ರಿಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಹಲವಾರುವರ್ಷಗಳಿಂದ ಕ್ರೀಡಾಪಟುಗಳು, ಹಾಗೂ ಸಾರ್ವಜನಿಕರಿಂದ ಇದರ ಅಭಿವೃದ್ದಿಗೆ ಬೇಡಿಕೆ ಇದ್ದರೂ ಅಭಿವೃದ್ದಿ ಕೆಲಸಗಳು ಸಾಕಷ್ಟು ಬಾಕಿ ಇರುತ್ತದೆ ಎಂದು ಸಿದ್ದರಾಮಯ್ಯರವರ ಬಳಿ ಶಾಸಕರು ಮನವಿಮಾಡಿದ್ದಾರೆ. ಅನುದಾನ ಒದಗಿಸುವ ಬಗ್ಗೆ ಸಿದ್ದರಾಮಯ್ಯರವರು ಭರವಸೆ ನೀಡಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.