Connect with us

ರಾಜಕೀಯ

ಪದಗ್ರಹಣಕ್ಕೆ ಡೇಟ್ ಫಿಕ್ಸ್​, ಗೋಧೂಳಿ ಮಹೂರ್ತದಲ್ಲಿ ಡಿಕೆ ಶಿವಕುಮಾರ್​ ಪಟ್ಟಾಭಿಷೇಕ, 10 ಸಚಿವರಿಂದ ಪ್ರಮಾಣ ವಚನ

Published

on

ಬೆಂಗಳೂರು:(ಮೇ.30): ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ನೂತನ ಸಾರಥಿಯಾಗಿ ಡಿಕೆ ಶಿವಕುಮಾರ್​ ಅಧಿಕೃತವಾಗಿ ಆಯ್ಕೆಯಾಗಲಿದ್ದಾರೆ. ಮತ್ತೊಂದೆಡೆ ನೂತನ ಮುಖ್ಯಮಂತ್ರಿಯ ಪ್ರಮಾಣ ವಚನ  ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ ನಡೆದಿದ್ದು, ಪಟ್ಟಾಭಿಷೇಕಕ್ಕೆ ದಿನಾಂಕ ಕೂಡ ನಿಗದಿ ಮಾಡಲಾಗಿದೆ. ಬುಧವಾರ ಗೋಧೂಳಿ ಮಹೂರ್ತದಲ್ಲಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ವಿಧಾನಸೌಧದ ಮೆಟ್ಟಿಲ ಮೇಲೆ ಪ್ರಮಾಣವಚನ ದೊಡ್ಡಲಹಳ್ಳಿ ಕೆಂಪೇಗೌಡ ಶಿವಕುಮಾರ್ ಅವರ ಬಹುದೊಡ್ಡ ಕನಸು ಇಂದು ನನಸಾಗ್ತಿದೆ. ಹೀಗಾಗಿ ವಿಧಾನಸೌಧದ ಮೆಟ್ಟಿಲುಗಳ ಮೇಲಿನ ಭವ್ಯ ವೇದಿಕೆಯಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್‌ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ವರದಿ ಆಗಿದೆ. ಜೂನ್ 4 , 5ಕ್ಕೆ ಡಿಕೆಶಿ ಪದಗ್ರಹಣ ಎನ್ನಲಾಗ್ತಿತ್ತು. ಆದ್ರೆ ಜ್ಯೋತಿಷಿ ಅರಾಧ್ಯ ಅವರ ಸಲಹೆ ಮೇರೆಗೆ ಬುಧವಾರ ಸಂಜೆ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿದು ಬಂದಿದೆ.
ಡಿಕೆ ಪದಗ್ರಹಣಕ್ಕೆ ಗಣ್ಯಾತಿಗಣ್ಯರು ಡಿಕೆ ಶಿವಕುಮಾರ್ ಅವರ ಪ್ರಮಾಣವಚನಕ್ಕೆ ಈಗಾಗಲೇ ಸಿದ್ಧತಾ ಕಾರ್ಯ ನಡೆದಿದ್ದು, ಕಾಂಗ್ರೆಸ್‌ ವರಿಷ್ಠರಾದ ಪ್ರಿಯಾಂಕಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಸೇರಿದಂತೆ ಗಣ್ಯಾತಿಗಣ್ಯರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎನ್ನಲಾಗ್ತಿದೆ. 10 ಸಚಿವ ಪ್ರಮಾಣವಚನ ಡಿಕೆ ಶಿವಕುಮಾರ್ ಅವರ ಜೊತೆ 10 ಮಂದಿ ಸಚಿವರು ಪ್ರಮಾಣವಚನ ಸ್ವೀಕರಿಸೋ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version