Published
5 months agoon
By
Akkare Newsಕೌಡಿಚ್ಚರ್ ನಲ್ಲಿ ಮೂರು ದಿನಗಳ ಹಿಂದೆ ಎರಡು ಮನೆಗಳ ಮೇಲೆ ಬೃಹತ್ ಮರ ಬಿದ್ದು ಹಾನಿಯಾಗಿದ್ದು, ಅಲ್ಲಿಗೆ NSUI ಪುತ್ತೂರಿನ ಪ್ರಮುಖರು ಭೇಟಿ ನೀಡಿದ್ದರು. ಆ ನಂತರ ತಹಶೀಲ್ದಾರ್ ಸೇರಿದಂತೆ ಹಲವರು ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದರು.
ಮನೆಯವರ ಕಷ್ಟವನ್ನು NSUI ಪ್ರಮುಖ ಪ್ರಜ್ವಲ್ ಕೌಡಿಚ್ಚಾರ್ ಮೂಲಕ ತಿಳಿದುಕೊಂಡ ಕಾರ್ಯಕರ್ತರು ಹಾನಿಗೊಳಗಾಗಿದ್ದ ಮನೆಗೆ ಸರಿಪಡಿಸಲು ಅಗತ್ಯವಿದ್ದ ಶೀಟ್, ಕಂಬ, ಸಿಮೆಂಟ್ ಮೊದಲಾದವುಗಳನ್ನು ಇಂದು ತಲುಪಿಸುವ ಮುಖಾಂತರ ಸಮಾಜಸೇವೆಯೊಂದಿಗೆ ಮಾದರಿಯಾಗಿದ್ದಾರೆ