Published
5 months agoon
By
Akkare Newsಪುತ್ತೂರು: ಪುತ್ತೂರು-ಸವಣೂರು ರಸ್ತೆಯ ಸರ್ವೆಯ ತುಂಬಿ ಹರಿಯುವ ಗೌರಿ ಹೊಳೆಗೆ ಹಾರಿದ ಯುವಕನ ಶವ ಪತ್ತೆ.ಯುವಕನ ಶೋಧ ಕಾರ್ಯಚರಣೆಯನ್ನು ಅಗ್ನಿ ಶಾಮಕ ದಳದವರು ಬಿರುಸಿನಿಂದ ನಡೆಸಿದ್ದು ಮುಕ್ರಂಪಾಡಿಯ ಇಂಡಸ್ಟ್ರಿಯಲ್ ಎಸ್ಟೇಟ್ ಬಳಿಯ ಮಹೀಂದ್ರ ಶೋರೂಂ ನ ಉದ್ಯೋಗಿ ಸನ್ಮತ್ (21) ಪುತ್ತೂರು ಶಾಸಕರ ಸೂಚನೆಯ ಮೇರೆಗೆ ಇಲಾಖೆಯ ಸಹಕಾರದಿಂದ ಹೊಳೆಗೆ ಹಾರಿದ ಯುವಕನ ಶವ ಪತ್ತೆಯಾಗಿದೆ
ಯುವಕ ಹೊಳೆಗೆ ಹಾರಿದ್ದಾನೆಯೇ ಅಥವಾ ಎಲ್ಲಿಗಾದರೂ ಹೋಗಿದ್ದಾನೆಯೇ ಎನ್ನುವ ಸಂಶಯವೂ ವ್ಯಕ್ತವಾಗಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳದವರು ಆಗಮಿಸಿದ್ದಾರೆ. ಪೊಲೀಸರು ನಿನ್ನೆ ರಾತ್ರಿಯೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ತಿಳಿಸಲಾಗುವುದು.