ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಮಮ್ತಾಝ್ ಆಲಿ ಪ್ರಕರಣ: ಇಬ್ಬರು ಮುಸ್ಲಿಂ ಮುಖಂಡರ ಹೆಸರು ಚಾಲ್ತಿ ಯಲ್ಲಿ ಪೋಲೀಸರ ವಿಚಾರಣೆ

Published

on

ಸುರತ್ಕಲ್:‌ ಮುಸ್ಲಿಂ ಸಮುದಾಯದ ಹಿತೈಶಿ, ಉದ್ಯಮಿ ಮಮ್ತಝ್ ಅಲಿ ಅಕಾಲಿಕ ಮರಣ ಪ್ರಕರಣದಲ್ಲಿ ಇಬ್ಬರು ಮುಸ್ಲಿಂ ಮುಖಂಡರು ಕೈಯಾಡಿಸಿರುವ ಬಗ್ಗೆ ಮಾತುಗಳು ಕೇಳಿಬರುತ್ತಿದ್ದು, ಅವರ ಅಕಾಲಿಕ ಮರಣಕ್ಕೆ ಈ ಇಬ್ಬರು ನಾಯಕರು ಪರೋಕ್ಷವಾಗಿ ಬೆಂಬಲ ನೀಡಿದ್ದರು ಎಂಬ ಮಾತುಗಳು ಸಮುದಾಯದ ಒಳಗಿಂದಲೇ ಕೇಳಿ ಬರಲಾರಂಭಿಸಿದೆ.

 

ಮಮ್ತಾಝ್ ಅಲಿ ಅಕಾಲಿಕ ಮರಣಕ್ಕೆ ಸಂಬಂಧಿಸಿ ಸಾರ್ವಜನಿಕರಿಂದ ಈ ರೀತಿಯ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈ ಇಬ್ಬರು ಮುಖಂಡರನ್ನು ಕಾವೂರು ಪೊಲೀಸರು ಕರೆಸಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. 
 
ಈ ಇಬ್ಬರ ವಿರುದ್ಧ ಆರೋಪಿ ಸತ್ತಾರ್ ಕಳುಹಿಸಿದ್ದ ಎನ್ನಲಾದ ಮಮ್ತಾಝ್ ಅಲಿ ಮತ್ತು ರೆಹಮತ್ ಅವರ ಮೊಬೈಲ್‌ ಫೋನ್‌ ಸಂಭಾಷಣೆಯ ಆಡಿಯೊ ವೈರಲ್ ಮಾಡಿರುವ ಆರೋಪ ಇದೆ ಎಂದೂ ತಿಳಿದು ಬಂದಿದೆ.

ಮಮ್ತಾಝ್‌ ಅಲಿ ಅವರು ಮುಸ್ಲಿಂ ಸೆಂಟ್ರಲ್ ಕಮೀಟಿಯ ಅಧ್ಯಕ್ಷರಾಗಿರುವ ಮಸೂದ್‌ ಅವರ ಪರಮಾಪ್ತರಲ್ಲಿ ಓರ್ವರಾಗಿದ್ದರು. ಅಲ್ಲದೆ, ಜೀವನದುದ್ದಕ್ಕೂ ಧಾರ್ಮಿಕ ಕಾರ್ಯಗಳ ಮೂಲಕ ಜಿಲ್ಲೆಯಲ್ಲಿ ಮಮ್ತಾಝ್‌ ಅಲಿ ಮನೆ ಮಾತಾಗಿದ್ದರು. ಮಸೂದ್‌ ಅವರ ಕಾಲಾ ನಂತರ ಮುಸ್ಲಿಂ ಸೆಂಟ್ರಲ್‌ ಕಮೀಟಿಯ ಅಧ್ಯಕ್ಷ ಪಟ್ಟ ಶೇ.100ರಷ್ಟು ಮಮ್ತಾಝ್‌ ಅಲಿ ಅವರಿಗೆ ಸಿಗುವ ಸಾಧ್ಯತೆಗಳೇ ಹೆಚ್ಚಾಗಿತ್ತು. ಈ ವಿಚಾರಗಳು ಅನೇಕ ಬಾರಿ ಸಮುದಾಯದ ವಿವಿಧ ಕಾರ್ಯಕ್ರಮಗಳಲ್ಲೂ ಚರ್ಚೆಗಳೂ ಆಗಿದ್ದವು ಎನ್ನಲಾಗಿದೆ.

 

 

 

ಈ ಇಬ್ಬರು ಮುಖಂಡರಿಗೆ ಸೆಂಟ್ರಲ್‌ ಕಮಿಟಿ ಅಧ್ಯಕ್ಷ ಗಾಧಿಯ ಮೇಲೆ ಕಣ್ಣು ಇತ್ತು ಎನ್ನಲಾಗಿದ್ದು,  ಇದೇ ಕಾರಣಕ್ಕಾಗಿ ಈ ಇಬ್ಬರು  ಸತ್ತಾರ್‌ ಕಳುಹಿಸಿದ್ದ ಎನ್ನಲಾಗಿದ್ದ ಆಡಿಯೊವನ್ನು ಎಲ್ಲರಿಗೂ ಹಂಚಿದ್ದರು. ಈ ಮೂಲಕ ಮಮ್ತಾಝ್‌ ಅಲಿ ಅವರ ಗೌರವಕ್ಕೆ ಕುಂದು ತಂದು ಸಮುದಾಯದ ಮುಂದೆ ಅವರ ಮಾನ ಹರಾಜು ಮಾಡುವ ಮೂಲಕ ಅವರನ್ನು ಸೆಂಟ್ರಲ್‌ ಕಮಿಟಿಯ ಅಧ್ಯಕ್ಷ ಸ್ಥಾನದಿಂದ ಬದಿಗೆ ಸರಿಸುವ ಹುನ್ನಾರ ನಡೆಸಿದ್ದರು ಎಂಬ ಮಾತುಗಳು ಸಮುದಾಯದ ಒಳಗಿಂದಲೇ ಕೇಳಿ ಬರುತ್ತಿದೆ. 

 

 

 

 

ಈ ಇಬ್ಬರು ಮುಖಂಡರು ಆಡಿಯೊ ವೈರಲ್‌ ಮಾಡಿದ್ದಾರೆ ಎಂದು ತಿಳಿದುಕೊಂಡಿದ್ದ ಮಮ್ತಾಝ್‌ ಅಲಿ ಅವರ ಹಿರಿಯ ಸಹೋದರ ಮೊಯ್ದೀನ್‌ ಬಾವಾ ಅವರು ಘಟನೆ ನಡೆದ ದಿನವೇ  ಕೂಳೂರು ಸೇತುವೆಯ ಮೇಲೆಯೇ ಈ ಇಬ್ಬರು ಮುಖಂಡರನ್ನು ಹಿಗ್ಗಾ ಮುಗ್ಗ ತರಾಟೆಗೂ ತೆಗೆದುಕೊಂಡಿದ್ದರು ಎಂದು ತಿಳಿದು ಬಂದಿದೆ.

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement