Published
4 weeks agoon
By
Akkare Newsಸುರತ್ಕಲ್: ಮುಸ್ಲಿಂ ಸಮುದಾಯದ ಹಿತೈಶಿ, ಉದ್ಯಮಿ ಮಮ್ತಝ್ ಅಲಿ ಅಕಾಲಿಕ ಮರಣ ಪ್ರಕರಣದಲ್ಲಿ ಇಬ್ಬರು ಮುಸ್ಲಿಂ ಮುಖಂಡರು ಕೈಯಾಡಿಸಿರುವ ಬಗ್ಗೆ ಮಾತುಗಳು ಕೇಳಿಬರುತ್ತಿದ್ದು, ಅವರ ಅಕಾಲಿಕ ಮರಣಕ್ಕೆ ಈ ಇಬ್ಬರು ನಾಯಕರು ಪರೋಕ್ಷವಾಗಿ ಬೆಂಬಲ ನೀಡಿದ್ದರು ಎಂಬ ಮಾತುಗಳು ಸಮುದಾಯದ ಒಳಗಿಂದಲೇ ಕೇಳಿ ಬರಲಾರಂಭಿಸಿದೆ.
ಮಮ್ತಾಝ್ ಅಲಿ ಅವರು ಮುಸ್ಲಿಂ ಸೆಂಟ್ರಲ್ ಕಮೀಟಿಯ ಅಧ್ಯಕ್ಷರಾಗಿರುವ ಮಸೂದ್ ಅವರ ಪರಮಾಪ್ತರಲ್ಲಿ ಓರ್ವರಾಗಿದ್ದರು. ಅಲ್ಲದೆ, ಜೀವನದುದ್ದಕ್ಕೂ ಧಾರ್ಮಿಕ ಕಾರ್ಯಗಳ ಮೂಲಕ ಜಿಲ್ಲೆಯಲ್ಲಿ ಮಮ್ತಾಝ್ ಅಲಿ ಮನೆ ಮಾತಾಗಿದ್ದರು. ಮಸೂದ್ ಅವರ ಕಾಲಾ ನಂತರ ಮುಸ್ಲಿಂ ಸೆಂಟ್ರಲ್ ಕಮೀಟಿಯ ಅಧ್ಯಕ್ಷ ಪಟ್ಟ ಶೇ.100ರಷ್ಟು ಮಮ್ತಾಝ್ ಅಲಿ ಅವರಿಗೆ ಸಿಗುವ ಸಾಧ್ಯತೆಗಳೇ ಹೆಚ್ಚಾಗಿತ್ತು. ಈ ವಿಚಾರಗಳು ಅನೇಕ ಬಾರಿ ಸಮುದಾಯದ ವಿವಿಧ ಕಾರ್ಯಕ್ರಮಗಳಲ್ಲೂ ಚರ್ಚೆಗಳೂ ಆಗಿದ್ದವು ಎನ್ನಲಾಗಿದೆ.
ಈ ಇಬ್ಬರು ಮುಖಂಡರು ಆಡಿಯೊ ವೈರಲ್ ಮಾಡಿದ್ದಾರೆ ಎಂದು ತಿಳಿದುಕೊಂಡಿದ್ದ ಮಮ್ತಾಝ್ ಅಲಿ ಅವರ ಹಿರಿಯ ಸಹೋದರ ಮೊಯ್ದೀನ್ ಬಾವಾ ಅವರು ಘಟನೆ ನಡೆದ ದಿನವೇ ಕೂಳೂರು ಸೇತುವೆಯ ಮೇಲೆಯೇ ಈ ಇಬ್ಬರು ಮುಖಂಡರನ್ನು ಹಿಗ್ಗಾ ಮುಗ್ಗ ತರಾಟೆಗೂ ತೆಗೆದುಕೊಂಡಿದ್ದರು ಎಂದು ತಿಳಿದು ಬಂದಿದೆ.