Published
2 months agoon
By
Akkare Newsಪುತ್ತೂರು: ಮೋಸ ಹೋಗುವವರು ಇರುವ ತನಕ ಮೋಸ ಮಾಡುವವರು ಇದ್ದೇ ಇರುತ್ತಾರೆ ಎನ್ನುವುದು ಇದಕ್ಕೇನೇ, ಆನ್ಲೈನ್ ವಂಚಕರದ್ದು ಇದು ತುಂಬಾ ಹಳೆಯ ಮೆಥಡ್. ಅದೊಂದು ದಿನ ಪುಣಚ ಕೂಲಿ ಕಾರ್ಮಿಕರೊಬ್ಬರಿಗೆ ಒಂದು ಕರೆ ಬರುತ್ತೆ ಆ ಕಡೆಯಿಂದ ಮಾತನಾಡಿದ ವ್ಯಕ್ತಿ ಬಹಳ ಸೌಮ್ಯವಾಗಿ ನಿಮ್ಮ ಮೊಬೈಲ್ ನಂಬರ್ ನಮ್ಮ ಲಕ್ಕಿ ಡ್ರಾದಲ್ಲಿ ಸೆಲೆಕ್ಟ್ ಆಗಿದ್ದು ನಿಮಗೆ ನಮ್ಮ ಕಂಪೆನಿ ಕಡೆಯಿಂದ ಸ್ಮಾಮ್ಸಂಗ್ ಮೊಬೈಲ್ ಫೋನ್ ಇದೆ. ನಿಮ್ಮ ವಿಳಾಸ ತಿಳಿಸಿಕೊಟ್ಟರೆ ನಾವು ಮೊಬೈಲ್ ಫೋನ್ ಕಳಿಸಿಕೊಡುತ್ತೇವೆ ಎಂದಿದ್ದಾನೆ. ಆದರೆ ಕರೆ ಸ್ವೀಕರಿಸಿದ ವ್ಯಕ್ತಿ ಇದನ್ನು ನಿರಾಕರಿಸಿದ್ದಾರೆ.
ನನಗೆ ಮೊಬೈಲ್ ಫೋನ್ ಬೇಡ ಎಂದೇಳಿದ್ದಾರೆ ಆ ಬಳಿಕ ಕರೆ ಕಟ್ ಮಾಡಿದ್ದಾರೆ. ಆದರೆ ವಂಚಕ ಇಲ್ಲಿಗೆ ನಿಲ್ಲಿಸದೆ ಮತ್ತೆ ಕರೆ ಮಾಡಿ ಸ್ಯಾಮ್ಸಂಗ್ ಮೊಬೈಲ್ ತೆಗೆದುಕೊಳ್ಳಿ ನಿಮ್ಮ ಅಡ್ರಾಸ್ ಹೇಳಿ ನಾವು ಕಳಿಸಿಕೊಡುತ್ತೇವೆ ಎಂದು ಒತ್ತಾಯ ಮಾಡಿದ್ದಾನೆ. ಅತನ ಒತ್ತಾಯಕ್ಕೆ ಮಣಿದು ಅಡ್ರಾಸ್ ನೀಡಿದ್ದರೂ ನನಗೆ ಮೊಬೈಲ್ ಫೋನ್ ಬೇಡ ಎಂದೇಳಿದ್ದಾರೆ. ವಂಚಕ ಮರುದಿವಸ ಕರೆ ಮಾಡಿ ನಿಮ್ಮ ವಿಳಾಸಕ್ಕೆ ನಾವು ಮೊಬೈಲ್ ಫೋನ್ ಕಳಿಸಿದ್ದೇವೆ ಎಂದೇಳಿದ್ದಾನೆ. ಅದರಂತೆ ಮೂರು ದಿನದಲ್ಲಿ ಅಂಚೆ ಕಛೇರಿಗೆ ಪಾರ್ಸೆಲ್ ಬಂದಿದ್ದು ಅದನ್ನು ಬಿಡಿಸಿಕೊಳ್ಳಬೇಕಾದರೆ 1600 ರೂಪಾಯಿ ಪಾವತಿಸಬೇಕಿತ್ತು ಅದರಲ್ಲಿ 1600 ರೂಪಾಯಿ ಪಾವತಿಸಿ ಪಾರ್ಸೆಲ್ ಬಿಡಿಸಿಕೊಂಡ ವ್ಯಕ್ತಿಗೆ ಅಘಾತ ಕಾದಿತ್ತು. ಪಾರ್ಸೆಲ್ ಬಿಚ್ಚಿ ನೋಡಿದಾಗ ಅದರಲ್ಲಿ ಮೊಬೈಲ್ನ ಒಂದು ಭಾಗ, ಎರಡು ವಯರ್, ಒಂದು ಹಳೆಯ ಬ್ಯಾಟರಿ ಇಷ್ಟು ಬಿಟ್ಟರೆ ಬೇರೆನೋ ಇರಲಿಲ್ಲ. ಅಲ್ಲಿಗೆ ವಂಚಕ ಬಹಳ ಸುಲಭವಾಗಿ ಮೋಸ ಮಾಡಿ ಬಿಟ್ಟಿದ್ದ.ಆದರೆ ವಂಚನೆಗೊಳದವರು ಸುಮ್ಮನೆ ಬಿಡಲಿಲ್ಲ ವಂಚಕನ ಮೊಬೈಲ್ ನಂಬರ್ಗೆ ಕರೆ ಮಾಡಿ ವಿಚಾರಿಸಿದ್ದಾರೆ. ಬೇರೆ ಬೇರೆ ನಂಬರ್ನಿಂದ ಕರೆ ಮಾಡಿ ಚೆನ್ನಾಗಿ ಬೆಂಡೆತ್ತಿದ್ದಾರೆ. ಇದಕ್ಕೆ ವಂಚಕ ನಮ್ಮಿಂದ ತಪ್ಪಾಗಿದೆ ನಿಮಗೆ ಇನ್ನೆರಡು ದಿನದಲ್ಲಿ ಹೊಸ ಮೊಬೈಲ್ ಕಳುಹಿಸುತ್ತೇವೆ ಎಂದೇಳಿದ್ದಾನೆ.
ಎರಡು ದಿನ ಬಿಟ್ಟು ಕರೆ ಮಾಡಿದರೆ ವಂಚಕನ ನಂಬರ್ ಬ್ಲಾಕ್ ಆಗಿತ್ತು. ಅಲ್ಲಿಗೆ ಹೊಸ ಮೊಬೈಲ್ ಫೋನೂ ಇಲ್ಲ 1600 ರೂಪಾಯಿ ಕೂಡ ಇಲ್ಲದಾಗಿದೆ. ಈ ರೀತಿಯ ಆನ್ಲೈನ್ ವಂಚನೆ ಬಹಳ ವರ್ಷಗಳ ಹಿಂದೆಯೇ ಶುರುವಾಗಿದೆ. ಎಲ್ಲಿಯ ತನಕ ನಾವು ಮೋಸ ಹೋಗುತ್ತೇವೋ ಅಲ್ಲಿಯ ತನಕ ಮೋಸ ಮಾಡುವವರು ಕಾಯುತ್ತಲೇ ಇರುತ್ತಾರೆ.
ಅಪರಿಚಿತ ಯಾವುದೇ ಕರೆಗಳಿಗೆ ಉತ್ತರಿಸಲು ಹೋಗಬೇಡಿ. ಮೊಬೈಲ್ಗೆ ಬರುವ ಅನಧಿಕೃತ ಲಿಂಕ್ಗಳನ್ನು ಓಪನ್ ಮಾಡಬೇಡಿ. ಗಿಪ್ಟ್,ಬಹುಮಾನ ಬಂದಿದೆ ಎಂದೇಳಿಕೊಂಡು ಬರುವ ಕರೆಗಳನ್ನು ನಂಬಬೇಡಿ. ಅಪರಿಚಿತ ವ್ಯಕ್ತಿಗಳಿಗೆ ನಿಮ್ಮ ವಿಳಾಸ, ಬ್ಯಾಂಕ್ ಅಕೌಂಟ್ ಮಾಹಿತಿ ಇತ್ಯಾದಿ ನೀಡಬೇಡಿ. ಓಟಿಪಿ ಶೇರ್ ಮಾಡಬೇಡಿ. ಯಾವುದೇ ಆಮಿಷ, ಆಸೆಗಳಿಗೆ ಬಲಿಯಾಗಬೇಡಿ.