Published
2 months agoon
By
Akkare Newsಪುತ್ತೂರು ತಾಲೂಕು ಪಾಣಾಜೆ ಗ್ರಾಮದ ಶ್ರೀಪ್ರಸಾದ್ ಪಾಣಾಜೆ ರವರು ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ನ ಅಂತರಿಕೆ ಚುನಾವಣೆಯಲ್ಲಿ ಸ್ವರ್ದಿಸಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ…
2017 ರಲ್ಲಿ ನಡೆದ ಯುವ ಕಾಂಗ್ರೆಸ್ ನ ಆಂತರಿಕ ಚುನಾವಣೆಯಲ್ಲಿ ಸ್ಪರ್ದಿಸಿ ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು..ಕ್ರಿಯಾಶೀಲ ರಾಗಿದ್ಧ ಇವರು ಅನೇಕ ಪಕ್ಷ ಸಂಘಟನೆ ಕಾರ್ಯಕ್ರಮಗಳನ್ನು ಅಯೋಜಿಸಿದ್ದರು…ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ಅಯೋಜಿಸಿದ್ದರು..ಕೋರೋಣ ಮಹಾಮಾರಿ ಸಂದರ್ಭದಲ್ಲಿ ಅನೇಕ ಕುಟುಂಬಗಳಿಗೆ ಆಹಾರ ಕಿಟ್ ಒದಗಿಸಿದ್ದು..ಇವರ ಸಂಘಟನೆಯನ್ನು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಹಮ್ಮದ್ ಹ್ಯಾರಿಸ್ ನಲಪಾಡ್ ರವರು ಕರ್ನಾಟಕ ರಾಜ್ಯದಲ್ಲಿಯೇ ಕ್ರಿಯಾಶೀಲ ಅಧ್ಯಕ್ಷರೆಂದು ಅಭಿನಂದಿಸಿದ್ದರು..
ದೆಹಲಿಯಲ್ಲಿ ನಡೆದ ಯಂಗ್ ಇಂಡಿಯಾ ಕೀ ಬೊಳೊ ಭಾಷಾಣ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯ ಯುವ ಕಾಂಗ್ರೆಸ್ ವಕ್ತಾರರಾಗಿ ನೇಮಕಗೊಂಡಿದ್ದರು..
ಇವರು ಸುಮಾರು 8 ವರ್ಷಗಳ ಕಾಲ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ…ನಂತರ ರಾಜಕೀಯದಲ್ಲಿಯು ಯಶಸ್ವಿಯಾಗಿದ್ದರು..ಇವರು ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ ಪಡೆದ ವಿದ್ಯಾಶ್ರೀ ಪ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.) ಇದರ ಸಂಚಾಲಕರಾಗಿ,ಪುತ್ತೂರು ತಾಲೂಕು ಯಾದವ ಸಭಾದ ಅದ್ಯಕ್ಷರಾಗಿ,ಪುತ್ತೂರು ಪಾಣಾಜೆ ಲಯನ್ಸ್ ಇದರ ಕಾರ್ಯದರ್ಶಿಯಾಗಿ,ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯ ಸದಸ್ಯರಾಗಿ,ನೆಹರು ವಿಚಾರ ವೇದಿಕೆಯ ಸಹ ಸಂಚಾಲಕರಾಗಿ,ರೈತಹಿತರಕ್ಷಣ ವೇದಿಕೆಯ ಸದಸ್ಯರಾಗಿ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರೆ..