Published
1 year agoon
By
Akkare News
ಪುತ್ತೂರು ತಾಲೂಕು ಪಾಣಾಜೆ ಗ್ರಾಮದ ಶ್ರೀಪ್ರಸಾದ್ ಪಾಣಾಜೆ ರವರು ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ನ ಅಂತರಿಕೆ ಚುನಾವಣೆಯಲ್ಲಿ ಸ್ವರ್ದಿಸಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ…
ದೆಹಲಿಯಲ್ಲಿ ನಡೆದ ಯಂಗ್ ಇಂಡಿಯಾ ಕೀ ಬೊಳೊ ಭಾಷಾಣ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯ ಯುವ ಕಾಂಗ್ರೆಸ್ ವಕ್ತಾರರಾಗಿ ನೇಮಕಗೊಂಡಿದ್ದರು..
ಇವರು ಸುಮಾರು 8 ವರ್ಷಗಳ ಕಾಲ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ…ನಂತರ ರಾಜಕೀಯದಲ್ಲಿಯು ಯಶಸ್ವಿಯಾಗಿದ್ದರು..ಇವರು ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ ಪಡೆದ ವಿದ್ಯಾಶ್ರೀ ಪ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.) ಇದರ ಸಂಚಾಲಕರಾಗಿ,ಪುತ್ತೂರು ತಾಲೂಕು ಯಾದವ ಸಭಾದ ಅದ್ಯಕ್ಷರಾಗಿ,ಪುತ್ತೂರು ಪಾಣಾಜೆ ಲಯನ್ಸ್ ಇದರ ಕಾರ್ಯದರ್ಶಿಯಾಗಿ,ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯ ಸದಸ್ಯರಾಗಿ,ನೆಹರು ವಿಚಾರ ವೇದಿಕೆಯ ಸಹ ಸಂಚಾಲಕರಾಗಿ,ರೈತಹಿತರಕ್ಷಣ ವೇದಿಕೆಯ ಸದಸ್ಯರಾಗಿ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರೆ..